ಗಲ್ಫ್

ಭಾರತ ಹಾಗೂ ವಿದೇಶದ ಯೋಗಪಟುಗಳು ಝೂಮ್ ವೇದಿಕೆಯ ಮೂಲಕ ದಾಖಲೆ ನಿರ್ಮಿಸಿದ ಆಂತರಾಷ್ಟ್ರೀಯ ಯೋಗ ದಿನಾಚರಣೆ 2021

Pinterest LinkedIn Tumblr

ವಾವ್ ಪವರ್ ಯೋಗ ಯು.ಎ.ಇ. ಕನ್ನಡಿಗರು ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರ ಆಚರಣೆ ಜೂನ್ 25ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00 ರಿಂದ 12.00 ಗಂಟೆಯವರೆಗೆ ಝೂಮ್ ವೇದಿಕೆಯ ಮೂಲಕ ನಡೆಯಿತು.

ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ, ಕನ್ನಡ ಮಿತ್ರರು ದುಬಾಯಿ, ಕನ್ನಡ ಸಂಘ ಅಲ ಐನ್ ಮತ್ತು ಬಸವ ಸಮಿತಿ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕುವೈತ್, ಕತ್ತಾರ್, ಯು.ಕೆ. ಜರ್ಮನಿ, ಆಸ್ಟ್ರೇಲಿಯಾ ದೇಶಗಳ ಯೋಗ ಪಟುಗಳು ಭಾಗವಹಿಸಿದ್ದರು.

ಪ್ರಥಮ ಭಾಗದಲ್ಲಿ ಭಾರತದಿಂದ ಯೋಗ ಗುರು ಡಾ. ಭಾಗಿರತಿ ಕನ್ನಡತಿ ಯವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ಯೋಗಪಟುಗಳು ಅವರವರ ಮನೆಗಳಲ್ಲಿ ಕುಳಿತು ಯೋಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ದ್ವಿತಿಯಾ ಹಂತದ ಸಭಾ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಹಾಗೂ ಪ್ರೇಕ್ಷಕರು ಭಾಗವಹಿಸಿದ್ದರು. ಶ್ರೀಮತಿ ಕಾವ್ಯಾ ಯುವರಾಜ್ ರವರ ನಿರೂಪಣೆಯಲ್ಲಿ ಪ್ರಾರಂಭಿಸಿ ಶ್ರೀಮತಿ ತ್ರೀವೇಣಿ ಯವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಕರ್ನಾಟಕ ಸಂಘ ಶಾರ್ಜಾ ದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈಯವರು ಸರ್ವರನ್ನು ಸ್ವಾಗತಿಸಿದರು.

ಯೋಗದ ತರಭೇತಿಯ ಪಯಣದ ಅನುಭವವನ್ನು ಶ್ರೀ ಗಿರೀಶ್ ಕಲ್ಕುಂದ ಹಂಚಿಕೊಂಡರು. ಶ್ರೀಮತಿ ದೀಪಿಕಾ ಸಂತೋಷ್ ಯೋಗ ಗುರು ಡಾ. ಭಾಗಿರತಿ ಕನ್ನಡತಿ ಯವರ ಸಂಕ್ಷಿಪ್ತ ಪರಿಚಯದ ನಂತರ ಭಾಗಿರತಿಯವರು ತಮ್ಮ ಸುದೀರ್ಘ ಯೋಗ ತರಭೇತಿಯಲ್ಲಿ ವಿವಿಧ ದೇಶಗಳೊಂದಿಗಿನ ಯೋಗ ತರಭೇತಿಯ ಸಂಪೂರ್ಣ ಚಿತ್ರಣವನ್ನು ವಿವರಿಸಿದರು.

ಶ್ರೀಮತಿ ಕಾವ್ಯ ಯುವರಾಜ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕದ ನಿವೃತ್ತ ಡಿ.ಜಿ.ಪಿ. ಶ್ರೀ ಶಂಕರ್ ಮಹದೇವ್ ಬಿದರಿಯವರ ಪರಿಚಯದ ನಂತರ ಮುಖ್ಯ ಅತಿಥಿಗಳು ಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸವಿಸ್ಥಾರವಾಗಿ ತಮ್ಮ ಅನುಭದೊಂದಿಗೆ ತಿಳಿಸಿ ಮೆಚ್ಚುಗೆಯೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ್ದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು, ಕರ್ನಾಟಕ ಸಂಘ ಶಾರ್ಜಾ ದ ಅಧ್ಯಕ್ಷರು ಶ್ರೀ ಎಂ ಇ. ಮೂಳೂರ್, ಕನ್ನಡ ಮಿತ್ರರು ದುಬಾಯಿ ಅಧ್ಯಕ್ಷರು ಶ್ರೀ ಶಶಿಧರ್ ನಾಗರಾಜಪ್ಪ, ಕನ್ನಡಿಗರು ದುಬಾಯಿ ಅಧ್ಯಕ್ಷೆ ಶ್ರೀಮತಿ ಉಮಾದೇವಿ ವಿದ್ಯಾಧರ್ ಹಾಗೂ ಕೆ. ಎನ್ ಆರ್.ಐ.ಯ ಶ್ರೀ ಮೋಹನ್ ನರಸಿಂಹಮೂರ್ತಿ ತಮ್ಮ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕ, ಜೆ.ಎಸ್.ಎಸ್. ವಿದ್ಯಾಸಂಸ್ಥೆ, ಬಿಲ್ಲವಾಸ ದುಬಾಯಿ, ಅಮ್ಚಿಗೆಲೆ ಸಮಾಜ, ಕರುನಾಡ ಕನ್ನಡಿಗರು ಯು.ಎ.ಇ., ಹೆಮ್ಮೆಯ ಕನ್ನಡಿಗರು ದುಬಾಯಿ, ಗಲ್ಫ್ ಕನ್ನಡ ಮೂವೀಸ್, ಅದ್ಯಾತ್ಮ ಸಂಘ ಭಾರತ, ಯು.ಎ.ಇ. ರಕ್ತದಾನ ಶಿಬಿರದ ಅಯೋಜಕರು ಭಾಗವಹಿಸಿದ್ದರು.

ಶ್ರೀಮತಿ ದೀಪಾ ನಾಯರ್ ರವರ ಪುತ್ರಿ ಎಳೆಯ ಯೋಗ ಪ್ರತಿಭೆ ಅಂಚಿತ ನಾಯರ್ ಪ್ರದರ್ಶನದ ತುಣುಕುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸಂಘ ಶಾರ್ಜಾ ದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಆನಂದ ಬೈಲೂರ್ ರವರು ವಂದನಾರ್ಪಣೆ ಕಾರ್ಯ ನೆರವೇರಿಸಿಕೊಟ್ಟರು.

ಪ್ರಥಮ ಬಾರಿಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಝೂಮ್ ವೇದಿಕೆಯ ಮೂಲಕ ಯಶಸ್ವಿಯಾಗಿ ನಡೆದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.

ಬಿ. ಕೆ. ಗಣೇಶ್ ರೈ
ದುಬಾಯಿ – ಯು.ಎ.ಇ.

Comments are closed.