ದುಬಾಯಿಯಲ್ಲಿ ಗಿನ್ನೆಸ್ ದಾಖಲೆಯ ಅತ್ಯಂತ ಎತ್ತರದ ವಾಸ್ತು ಶಿಲ್ಪ ಬುರ್ಜ್ ಖಲಿಫಾ ದ ಮೇಲೆ 2021 ಜನವರಿ 31 ನೇ ತಾರೀಕು ಶುಕ್ರವಾರ ರಾತ್ರಿ 8.15 ಕ್ಕೆ ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಕನ್ನಡ ಚಲನ ಚಿತ್ರದ ಲೋಗೊ ಮತ್ತು ಕನ್ನಡದ ಬಾವುಟ ಹಾಗೂ ಕಿಚ್ಚ ಸುದೀಪ್ ರವರ 25 ವರ್ಷಗಳ ಹೆಜ್ಜೆ ಗುರುತುಗಳು ಎಲ್.ಇ.ಡಿ. ಲೈಟ್ ಗಳ ಮೂಲಕ ವರ್ಣ ರಂಜಿತವಾಗಿ ಪ್ರಜ್ವಲಿಸಿ ಅನಾವರಣ ಗೊಂಡು ವಿಶ ದಾಖಲೆಯನ್ನು ಸೃಷ್ಠಿಸಿತ್ತು.
ಸಮಾರಂಭಕ್ಕೆ ಆಗಮಿಸಿದ್ದ ಕಿಚ್ಚ ಸುದೀಪ್ ರವರನ್ನು ಫೆಬ್ರವರಿ 1ನೇ ತಾರೀಕು ದುಬಾಯಿ ಡುಬಾಯಿ ಡೌನ್ ಟೌನ್ ನಲ್ಲಿರುವ್ಲ ಪ್ಯಾಲೆಸ್ ಹೋಟೆಲ್ ನಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರ ಸಂದೇಶಗಳೊಂದಿಗೆ ಕಿಚ್ಚ ಸುದೀಪ್ ರವರ 25 ವರ್ಷಗಳ ಸಾಧನೆಗಳನ್ನು ಅಭಿನಂದಿಸಿ “ಕನ್ನಡ ಕಲಾ ತಿಲಕ್” ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಸಂಘ ಶಾರ್ಜಾ ದ ಪೂರ್ವ ಅಧ್ಯಕ್ಶರು ಶ್ರೀ ಬಿ. ಕೆ. ಗಣೇಶ್ ರೈ, ಕನ್ನಡಿಗರು ದುಬಾಯಿ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್, ಗಲ್ಫ್ ಕನ್ನಡ ಮೂವೀಸ್ ನ ಶ್ರೀ ದೀಪಕ್ ಸೋಮಶೇಖರ್ , ಶ್ರೀಯುತರುಗಳಾದ ವಿದ್ಯಾಧರ್ ಮತ್ತು ವಿಜಯಾ ರಂಗ ಸನ್ಮಾನ ಪ್ರಕ್ರಿಯೇಯಲ್ಲಿ ಪಾಲ್ಗೊಂಡಿದ್ದರು.