ಗಲ್ಫ್

ಈ ಬಾರಿಯ ದೀಪಾವಳಿ ಹೊತ್ತಿಗೆ ಭಕ್ತರ ದರ್ಶನಕ್ಕೆ ಲಭ್ಯವಾಗಲಿದೆ ಅರಬ್‌ ನಾಡಿನಲ್ಲಿ ನಿರ್ಮಾಣವಾಗುತ್ತಿರುವ ಹಿಂದೂ ದೇಗುಲ !

Pinterest LinkedIn Tumblr

ದುಬೈ: ಅರೇಬಿಯನ್‌ ಕುಸುರಿ ಒಳಗೊಂಡ ಭವ್ಯ ಹಿಂದೂ ದೇಗುಲದ ನಿರ್ಮಾಣ ಕಾರ್ಯ ಅರಬ್ಬರ ನಾಡಿನಲ್ಲಿ ವೇಗ ಪಡೆದುಕೊಂಡಿದೆ. ಮುಂದಿನ ವರ್ಷ ದೀಪಾವಳಿ ವೇಳೆಗೆ ಭಕ್ತರ ದರ್ಶನಕ್ಕೆ ಲಭ್ಯವಿರಲಿದೆ.

ದುಬೈನ ಜೆಬೆಲ್‌ ಆಲಿಯಲ್ಲಿರುವ ಗುರುನಾನಕ್‌ ದರ್ಬಾರ್‌ಗೆ ಹೊಂದಿಕೊಂಡಂತೆ ನೂತನ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ನಗರವು ಹಲವು ಧರ್ಮಗಳ ಕಾರಿಡಾರ್‌ ಆಗುತ್ತಿದೆ. ಭವ್ಯ ಹಿಂದೂ ದೇವಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡದ ಬೇಸ್‌ಮೆಂಟ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಮುಂದಿನ ವರ್ಷ ದೀಪಾವಳಿ ವೇಳೆಗೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಸಿಂಧಿ ಗುರು ದರ್ಬಾರ್‌ ದೇಗುಲದ ಟ್ರಸ್ಟಿಗಳಲ್ಲಿ ಒಬ್ಬರಾದ ಭಾರತೀಯ ಮೂಲದ ಉದ್ಯಮಿ ರಾಜು ಸರೊಫ್‌ ಮಾಹಿತಿ ನೀಡಿದ್ದಾರೆ. ಸಿಂಧಿ ಗುರು ದರ್ಬಾರ್‌ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ ನಲ್ಲಿರುವ ಪುರಾತನ ಹಿಂದೂ ದೇಗುಲವಾಗಿದ್ದು, 1950ರಿಂದಲೇ ಕಾರ್ಯ ನಿರ್ವಹಿಸುತ್ತಿದೆ.

ಖಲೀಜ್‌ ಟೈಮ್ಸ್‌ ವರದಿ ಪ್ರಕಾರ ನೂತನ ಹಿಂದೂ ದೇಗುಲವು 25 ಸಾವಿರ ಚದರಡಿಯಲ್ಲಿ ಸುಮಾರು 75 ದಶಲಕ್ಷ ದಿಹ್ರಾಮ್‌ ವೆಚ್ಚದಲ್ಲಿ (1,48,86,24,396 ಕೋಟಿ ರೂಪಾಯಿ) ನಿರ್ಮಾಣಗೊಳ್ಳುತ್ತಿದೆ. ಈ ದೇಗುಲದ ವಾಸ್ತುಶಿಲ್ಪವು ಅರಬ್‌ ನಾಡಿನ ವಿನ್ಯಾಸವನ್ನು ಹೊಂದಿರಲಿದೆ.

ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿರುವ ಕಟ್ಟಡವಾಗಿದ್ದು, ಭಾರತದ ಹಿಂದೂ ವಾಸ್ತುಶಿಲ್ಪ ಮತ್ತು ಹಿಂದೂ ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಲಾಗುತ್ತಿದೆ.

Comments are closed.