ಗಲ್ಫ್

ಇಲ್ಲಿ ಮಾಸ್ಕ್ ಹಾಕದಿದ್ದರೆ 60 ಸಾವಿರ ರೂ. ದಂಡ ! ಕೊರೋನಾ ತಡೆಗಟ್ಟುವಿಕೆಗೆ ಈ ದೇಶದಲ್ಲಿ ಹಾಕಲಾಗಿರುವ ದಂಡ 60 ಸಾವಿರ ರೂ.ನಿಂದ 20 ಲಕ್ಷ ರೂ.ವರಗೆ…

Pinterest LinkedIn Tumblr

ದುಬೈ: ಈ ದೇಶದಲ್ಲಿ ಮಹಾಮಾರಿ ಕೊರೋನಾ ತಡೆಗಟ್ಟುವಿಕೆ ವಿಧಿಸಲಾಗಿರುವ ನಿಯಮವನ್ನು ಉಲ್ಲಂಘಿಸಿದವರಿಗೆ 60 ಸಾವಿರದಿಂದ 20 ಲಕ್ಷ ರೂಪಾಯಿ ವರಗೆ ದಂಡ ವಿಧಿಸಲಾಗುತ್ತೆ. ಇದನ್ನು ಕೇಳಿ ಒಮ್ಮೆಗೆ ನೀವು ಶಾಕ್ ಆಗಬಹುದು. ಆದರೆ ಈ ನಿಯಮದಿಂದಲೇ ಈ ದೇಶದಲ್ಲಿ ಜನ ಕಟ್ಟುನಿಟ್ಟಾಗಿ ಕೊರೋನಾ ತಡೆಗಟ್ಟುವಿಕೆ ನಿಯಮವನ್ನು ಪಾಲಿಸುತ್ತಾರೆ. ಅಷ್ಟಕ್ಕೂ ಈ ದೇಶ ಭಾರತೀಯರೇ ಹೆಚ್ಚಾಗಿರುವ ಯುಎಇ !

ಯುಎಇಯಲ್ಲಿ ಮಹಾಮಾರಿ ಕೊರೋನಾ ತಡೆಗಟ್ಟುವಿಕೆ ಬೇರೆ ದೇಶಗಳಿಗೆ ಹೋಲಿಸಿದರೆ ಅತ್ಯಂತ ಪರಿಣಾಮಕಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಈ ದೇಶದಲ್ಲಿ ಮಹಾಮಾರಿ ಕೊರೋನಾ ತಡೆಗಟ್ಟುವಿಕೆಗೆ ವಿಧಿಸಲಾಗಿರುವ ಕಾನೂನು-ನಿಯಮಗಳನ್ನು ಉಲ್ಲಂಘಿಸಿದರೆ ಬೃಹತ್ ಮೊತ್ತದ ದಂಡ. ಈ ದಂಡವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾದ ಕಾರಣ ಇಲ್ಲಿ ಜನ ಕೊರೋನಾ ತಡೆಗಟ್ಟುವಿಕೆಗೆ ವಿಧಿಸಲಾಗಿರುವ ಎಲ್ಲಾ ರೀತಿಯ ನೀತಿ-ನಿಯಮಗಳನ್ನು ಗಾಳಿಗೆ ತೂರದೆ ಪಾಲಿಸುತ್ತಿದ್ದಾರೆ.

ಮಹಾಮಾರಿ ಕೊರೋನಾ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ 60 ಸಾವಿರ ರೂಪಾಯಿ (3 ಸಾವಿರ ದಿರಹಮ್ಸ್ ) ದಂಡ ಕಟ್ಟಬೇಕು. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ಯುಎಇಯ ದಂಡಕ್ಕೆ ಹೋಲಿಸಿದರೆ ಈ ದಂಡದ ಮೊತ್ತ ಏನೂ ಇಲ್ಲ… ಇದೇ ಕಾರಣಕ್ಕೆ ಭಾರತದಲ್ಲಿ ಮಹಾಮಾರಿ ಕೊರೋನಾ ತಡೆಗಟ್ಟುವಿಕೆಗೆ ಜನ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಮತ್ತು ಇಲ್ಲಿನ ನಿವಾಸಿಗಳು ಮತ್ತು ಸಂದರ್ಶಕರ(ವಿಸಿಟರ್ಸ್) ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಯುಎಇ ಜಾರಿಗೆ ತಂದ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಬಹಳಷ್ಟು ಪರಿಣಾಮ ಬೀರಿದೆ.

ಯುಎಇಯಲ್ಲಿ ಕೋವಿಡ್ -19 ತಡೆಗಟ್ಟಲು ವಿಧಿಸಿರುವ ದಂಡವನ್ನೊಮ್ಮೆ ನೋಡಿ…

ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳಿಗೆ ವಿಧಿಸಲಾಗಿರುವ ದಂಡ…..

  1. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ 1 ಲಕ್ಷ ರೂಪಾಯಿ(5 ಸಾವಿರ ದಿರಹಮ್ಸ್ ) ದಂಡ
  2. ಕುಟುಂಬೇತರರೊಂದಿಗೆ ಕಾರಿನಲ್ಲಿ ಹೋಗುವಾಗ ಮಾಸ್ಕ್ ಹಾಕ್ದಿದ್ದರೆ 60 ಸಾವಿರ ರೂಪಾಯಿ (3 ಸಾವಿರ ದಿರಹಮ್ಸ್)ದಂಡ
  3. ಕಾರಿನಲ್ಲಿ ಮೂವರಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋದರೆ ಕಾರು ಚಾಲಕನಿಗೆ 60 ಸಾವಿರ ರೂಪಾಯಿ(3 ಸಾವಿರ ದಿರಹಮ್ಸ್ )ದಂಡ
  4. ಸಾಮಾಜಿಕ ಅಥವಾ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರೆ 1 ಲಕ್ಷ ರೂಪಾಯಿ(5 ಸಾವಿರ ದಿರಹಮ್ಸ್ ) ದಂಡ
  5. ಮದುವೆ ಅಥವಾ ಪಾರ್ಟಿಯಂತಹ ಸಮಾರಂಭವನ್ನು ಅಥವಾ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ 2 ಲಕ್ಷ ರೂಪಾಯಿ(10 ಸಾವಿರ ದಿರಹಮ್ಸ್ ) ದಂಡ

ಕೋವಿಡ್ ಪರೀಕ್ಷೆಗಾಗಿ ವಿಧಿಕಃಸಲಾಗಿರುವ ದಂಡ…

  1. ವೈದ್ಯಕೀಯ ಪರೀಕ್ಷೆಗಳನ್ನು ಮಾಡಲು ಸೂಚಿಸಿದ್ದರೂ ಅದನ್ನು ನಿರಾಕರಿಸುವವರಿಗೆ 1 ಲಕ್ಷ ರೂಪಾಯಿ(5 ಸಾವಿರ ದಿರಹಮ್ಸ್ ) ದಂಡ
  2. ಕೋವಿಡ್ ಸ್ಮಾರ್ಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ನಿರಾಕರಿಸಿದವರಿಗೆ 2 ಲಕ್ಷ ರೂಪಾಯಿ(10 ಸಾವಿರ ದಿರಹಮ್ಸ್ ) ದಂಡ
  3. ಆರೋಗ್ಯ ಅಪ್ಲಿಕೇಶನ್ ಅನ್ನು ಹ್ಯಾಕಿಂಗ್ ಮಾಡಲು ಅಥವಾ ಅದರ ಸಾಫ್ಟ್‌ವೇರ್ ಅನ್ನು ಹಾಳುಮಾಡಲು 4 ಲಕ್ಷ ರೂಪಾಯಿ(20 ಸಾವಿರ ದಿರಹಮ್ಸ್ ) ದಂಡ
  4. ಥರ್ಮಲ್ ಸ್ಕ್ರೀನಿಂಗ್ ನಿರಾಕರಿಸಿದವರಿಗೆ 4 ಲಕ್ಷ ರೂಪಾಯಿ(20 ಸಾವಿರ ದಿರಹಮ್ಸ್ ) ದಂಡ
  5. ರೋಗಿಗಳ ಆರೋಗ್ಯ ಡೇಟಾವನ್ನು ನಕಲು ಮಾಡಿದರೆ, ಪ್ರಕಟಿಸಿದರೆ ಅಥವಾ ಸೋರಿಕೆ ಮಾಡಿದರೆ 4 ಲಕ್ಷ ರೂಪಾಯಿ(20 ಸಾವಿರ ದಿರಹಮ್ಸ್ ) ದಂಡ
  6. ಹೋಮ್ ಕ್ವಾರಂಟೈನ್ ನಿರಾಕರಿಸುವವರಿಗೆ 10 ಲಕ್ಷ ರೂಪಾಯಿ(50 ಸಾವಿರ ದಿರಹಮ್ಸ್ ) ದಂಡ
  7. ಪುನರಾವರ್ತಿತ ಉಲ್ಲಂಘನೆ ಮಾಡಿದವರಿಗೆ 20 ಲಕ್ಷ ರೂಪಾಯಿ(1 ಲಕ್ಷ ದಿರಹಮ್ಸ್ ) ದಂಡ ಮತ್ತು 6 ತಿಂಗಳ ಜೈಲು

Comments are closed.