ಗಲ್ಫ್

ಬಹರೈನ್‍ನಲ್ಲಿ ಗಣೇಶನ ವಿಗ್ರಹ ಪುಡಿಗೈದ ವೀಡಿಯೋ ವೈರಲ್; ಮಹಿಳೆ ವಿರುದ್ಧ ಪ್ರಕರಣ: ಕೃತ್ಯ ಖಂಡಿಸಿದ ಬಹರೈನ್‍ ನ ದೊರೆಯ ಸಲಹೆಗಾರ

Pinterest LinkedIn Tumblr

ಮನಾಮ: ಬಹರೈನ್‍ ನ ರಾಜಧಾನಿ ಮನಾಮ ಇಲ್ಲಿನ ಜುಫ್ಫೈರ್ ಪ್ರದೇಶದ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಗಣೇಶನ ವಿಗ್ರಹಗಳಿಗೆ ಹಾನಿಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಉದ್ದೇಶಪೂರ್ವಕ ಹಾನಿ ಹಾಗೂ ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆಯೊಂದಕ್ಕೆ ಅವಮಾನಿಸಿದ ಆರೋಪ ಆಕೆಯ ಮೇಲೆ ಹೊರಿಸಲಾಗಿದೆ.

ಈ ಘಟನೆಯ ವೀಡಿಯೋ ವೈರಲ್ ಆದಂತೆಯೇ 54 ವರ್ಷದ ಆ ಮಹಿಳೆಗೆ ರವಿವಾರ ಸಮನ್ಸ್ ಕಳುಹಿಸಲಾಗಿತ್ತು ಎಂದು ಬಹರೈನ್‍ ‍ನ ಆಂತರಿಕ ಸಚಿವಾಲಯ ತಿಳಿಸಿದೆ.

ತಾನು ಗಣೇಶನ ಪ್ರತಿಮೆಗಳನ್ನು ಹಾನಿಗೊಳಿಸಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆಂದೂ ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.

ವೀಡಿಯೋದಲ್ಲಿ ಮಹಿಳೆ ಮಳಿಗೆಯೊಂದರ ಶೆಲ್ಫ್ ‍ಗಳಲ್ಲಿರಿಸಲಾಗಿದ್ದ ಗಣೇಶನ ಪ್ರತಿಮೆಗಳನ್ನು ನೋಡಿ ಅವುಗಳನ್ನು ಕೆಳಕ್ಕೆ ಬೀಳಿಸುತ್ತಿರುವುದು ಕಾಣಿಸುತ್ತದೆ. ಈ ಘಟನೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಬಹರೈನ್‍ ನ ದೊರೆಯ ಸಲಹೆಗಾರ ಖಾಲಿದ್ ಅಲ್-ಖಲೀಫಾ ಅವರು ಘಟನೆ ಕುರಿತು ಪ್ರತಿಕ್ರಿಯಿಸಿ ಮಹಿಳೆಯ ಕೃತ್ಯ ಅಸ್ವೀಕಾರಾರ್ಹ ಎಂದಿದ್ದಾರೆ.

Comments are closed.