ಅಂತರಾಷ್ಟ್ರೀಯ

ಅರಬ್‌ ದೇಶಗಳಲ್ಲಿ ಮೂರನೇ ಎರಡು ಭಾಗದಷ್ಟು ಉದ್ಯಮಗಳು ಆರು ತಿಂಗಳಲ್ಲಿ ವ್ಯವಹಾರಗಳು ಸ್ಥಗಿತ: ಅಧ್ಯಯನ ವರದಿ

Pinterest LinkedIn Tumblr


ದುಬಾೖ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ದುಬಾೖ ಸೇರಿದಂತೆ ಪ್ರಮುಖ ನಗರಗಳಲ್ಲಿ ಉದ್ಯೋಗ ಕಡಿತದ ಮಹಾಪರ್ವ ಶುರುವಾಗಿದ್ದು, ಕೋವಿಡ್‌-19 ಸೃಷ್ಟಿಸಿರುವ ಅವಾಂತರದಿಂದ ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಉದ್ಯೋಗ ಕ್ಷೇತ್ರದಲ್ಲಿ ಮಹತ್ತರವಾದ ಬೆಳವಣಿಗೆಗಳಾಗುತ್ತಿವೆ ಎಂದು ವರದಿಯಾಗಿದೆ.

ಉದ್ಯೋಗಗಳು ಕಣ್ಮರೆಯಾಗುತ್ತಿದ್ದು, ಮುಂಬರುವ 6 ತಿಂಗಳಲ್ಲಿ ನಾನಾ ಉದ್ಯಮ-ವ್ಯವಹಾರಗಳು ಸ್ಥಗಿತಗೊಳ್ಳಲಿವೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಮಧ್ಯಪ್ರಾಚ್ಯದ ವಾಣಿಜ್ಯ ಕೇಂದ್ರಗಳಲ್ಲಿ ಇತ್ತೀಚಿನ ಆರ್ಥಿಕ ಒತ್ತಡಗಳ ಪರಿಣಾಮ ವ್ಯಾಪಾರ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತವಾಗಿದೆ. ಮಧ್ಯಪೂರ್ವದಲ್ಲಾಗುತ್ತಿರುವ ಆರ್ಥಿಕ ನಷ್ಟ-ಕಷ್ಟಗಳನ್ನು ಹಲವು ಸಮೀಕ್ಷೆಗಳು ತೆರೆದಿಟ್ಟಿದೆ.

ದುಬಾೖ ಚೇಂಬರ್‌ ಆಫ್‌ ಕಾಮರ್ಸ್‌ವಿವಿಧ ಕ್ಷೇತ್ರಗಳ ಸುಮಾರು 1,228ಕ್ಕೂ ಹೆಚ್ಚು ಸಿಇಒಗಳನ್ನು ಸಂದರ್ಶಿಸಿ ಮಾಡಿದ ಸಮೀಕ್ಷೆ ಪ್ರಕಾರ ಮೂರನೇ ಎರಡು ಭಾಗದಷ್ಟು ಉದ್ಯಮಗಳು ಮುಂಬರುವ ಆರು ತಿಂಗಳಲ್ಲಿ ಪರಿಪೂರ್ಣ ಮಟ್ಟದಲ್ಲಿ ತಮ್ಮ ವ್ಯವಹಾರಗಳು ಸ್ಥಗಿತಗೊಳ್ಳುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಶೇ.27ರಷ್ಟು ಮಂದಿ ಮುಂದಿನ ತಿಂಗಳೊಳಗೆ ವ್ಯಾಪಾರವನ್ನು ಕಳೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನುಳಿದ ಶೇ.43ರಷ್ಟು ಜನರು ಉದ್ಯೋಗ ಕಡಿತವಾಗುವ ಭಯದಲ್ಲಿದ್ದು, ಶೇ.20ರಷ್ಟಕ್ಕಿಂತ ಕಡಿಮೆ ಮಟ್ಟದ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಉದ್ಯಮಗಳು ಇಂತಹದೇ ದುಗುಡವನ್ನು ಹೊರಹಾಕಿವೆ. ಆ ಮೂಲಕ ಬರುವ ಆರು ತಿಂಗಳ ಕಾಲಾವಧಿಯಲ್ಲಿ ತೈಲ ಸಮೃದ್ಧ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಪ್ರಮುಖ ವಾಣಿಜ್ಯ ನಗರಗಳು ಶೇ.70ರಷ್ಟು ಉದ್ಯಮ ಸ್ಥಗಿತಕ್ಕೆ ಸಾಕ್ಷಿಯಾಗಲಿವೆ.

Comments are closed.