ಅಂತರಾಷ್ಟ್ರೀಯ

ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು

Pinterest LinkedIn Tumblr


ಅಬುದಾಭಿ: ಕ್ರಿಸ್ ಮಸ್ ಹಬ್ಬವನ್ನು ಆಚರಿಸಲೆಂದು ದುಬೈಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳಿಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಮೂಲತಃ ಕೇರಳ ನಿವಾಸಿಗಳಾಗಿರುವ ರೋಹಿತ್ ಕೃಷ್ಣಕುಮಾರ್ (19) ಮತ್ತು ಶರತ್ ಕುಮಾರ್ (21) ಅಪಘಾತದಲ್ಲಿ ಮೃತಪಟ್ಟವರು.

ರೋಹಿತ್ ಮತ್ತು ಶರತ್ ಕುಮಾರ್ ಕ್ರಿಸ್ ಮಸ್ ಹಬ್ಬದ ಆಚರಣೆಗೆ ದುಬೈಗೆ ತೆರಳಿದ್ದರು.

ರೋಹಿತ್ ಕೃಷ್ಣಕುಮಾರ್ ಲಂಡನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಶರತ್ ಕುಮಾರ್ ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದನು. ಕ್ರಿಸ್ ಮಸ್ ಹಬ್ಬದ ಸಂಭ್ರಮಾಚರಣೆಗೆ ಇವರಿಬ್ಬರೂ ದುಬೈನಲ್ಲಿ ಭೇಟಿಯಾಗಿದ್ದರು. ಆದರೆ ನಸುಕಿನ ಜಾವ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Comments are closed.