ಗಲ್ಫ್

ದುಬೈಗೆ ‘ಯಾನ’ದ ಪಯಣ ! ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಂಡ ‘ಯಾನ’ ಸಿನೆಮಾ ಆಗಸ್ಟ್ 2 ರಂದು ದುಬೈಯಲ್ಲಿ ಬಿಡುಗಡೆ

Pinterest LinkedIn Tumblr

ದುಬೈ: ಕರ್ನಾಟಕದಾದ್ಯಂತ ಸಿನಿರಸಿಕರ ಮನಗೆದ್ದ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ “ಯಾನ” ಕನ್ನಡ ಸಿನೆಮಾ ಆಗಸ್ಟ್ 2 ರಂದು ಕನಸಿನ ನಗರಿ ದುಬೈಯಲ್ಲಿ ಬಿಡುಗಡೆಯಾಗಲಿದೆ.

ವಿಜಯ ಲಕ್ಷ್ಮಿ ಸಿಂಗ್ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ಯಾನ ಚಿತ್ರ ಕರ್ನಾಟಕದ 100 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಜುಲೈ 12 ರಂದು ಬಿಡುಗಡೆಯಾಗಿದ್ದು, ಚಿತ್ರ ಭರ್ಜರಿ ಪ್ರದರ್ಶನದ ಓಟವನ್ನು ಮುಂದುವರಿಸಿದೆ.

https://www.facebook.com/harish.sherigar.5/videos/10206350385394849/?t=3

ನಟ ಜೈಜಗದೀಶ್‌ ಹಾಗು ವಿಜಯ ಲಕ್ಷ್ಮಿ ಸಿಂಗ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ‘ಯಾನ’ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ನೀಡಿದ್ದು, ಅವರ ಮೊದಲ ಚಿತ್ರವೇ ಯಶಸ್ವಿನತ್ತ ದಾಪುಗಾಲಿ ಇಟ್ಟಿದೆ. ಚಿತ್ರದಲ್ಲಿ ನಾಯಕರಾಗಿ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ನಟಿಸಿದ್ದಾರೆ.

ದುಬೈಯ ಹಯ್ಯತ್ ರೀಜೆನ್ಸಿಯ ಗ್ಯಾಲರಿಯಾ ಸಿನಿಮಾ ಮಂದಿರದಲ್ಲಿ ಆಗಸ್ಟ್ 2 ರಂದು ಸಂಜೆ 4 ಗಂಟೆಗೆ ಚಿತ್ರ ಪ್ರದರ್ಶನ ಕಾಣಲಿದೆ.

For Tickets What’s App to 0556609466 or Call Balakrishna: 0553912535-Martin : 0556044982

ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು, ರವಿಶಂಕರ್ ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಸಿನಿಮಾ ಯಶಸ್ವಿ ಓಟವನ್ನು ಮುಂದುವರಿಸಿದ್ದು, ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ, ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿ ರಸಿಕರ ಮನತಟ್ಟಿದೆ.

ಕರ್ನಾಟಕದ ಕನ್ನಡ, ಇಂಗ್ಲಿಷ್ ಮಾಧ್ಯಮಗಳು ‘ಯಾನ’ ಸಿನಿಮಾ ಬಗ್ಗೆ ಬಹುಪರಾಕ್ ಎಂದಿವೆ. ಬಹುತೇಕ ಎಲ್ಲ ಪತ್ರಿಕೆ, ದೃಶ್ಯ ಮಾಧ್ಯಮಗಳು ‘ಯಾನ’ವನ್ನು ಮುಕ್ತಕಂಠದಿಂದ ಕೊಂಡಾಡಿವೆ.

ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿ ‘ಯಾನ’ದಂಥ ಚಿತ್ರಗಳು ಪ್ರದರ್ಶನ ಕಂಡಿಲ್ಲ, ಯಾನದ ಕಥೆಯೇ ಎಲ್ಲಾ ವರ್ಗದವರ ಮನಸ್ಸನ್ನು ತಟ್ಟುವಂತಿದೆ. ಚಿತ್ರದ ಕಥೆ, ಸಂಭಾಷಣೆ, ಹಾಡು, ಸಂಗೀತ, ಛಾಯಾಗ್ರಹಣ, ನಟನೆ, ಪಾತ್ರಗಳು ಸೇರಿದಂತೆ ಎಲ್ಲವೂ ಚಿತ್ರದ ಯಶಸ್ಸಿಗೆ ಸಾಥ್ ಕೊಟ್ಟಿವೆ ಎಂದು ಮಾಧ್ಯಮಗಳು ಗುಣಗಾನ ಮಾಡಿವೆ.

ಚಿತ್ರದ ಜೋಶ್ವ ಶ್ರೀಧರ್‌ ಸಂಗೀತ, ಹಿನ್ನೆಲೆ ಸಂಗೀತ, ಕರಮ್‌ ಚಾವ್ಲಾರ ಛಾಯಾಗ್ರಹಣವನ್ನು ಮಾಧ್ಯಮಗಳು ಮೆಚ್ಚಿದ್ದು, ಸಿನೆಮಾವನ್ನು ನೋಡಿ ಆಸ್ವಾದಿಸುವಂತೆ ಹೇಳಿದೆ.

ಮೂವರು ಹುಡುಗಿಯರ ಬದುಕಿನ ಪಯಣವೇ ಈ ಸಿನಿಮಾ. ಬದುಕಿನಲ್ಲಿ ಬಂದು ಹೋಗಬಹುದಾದ ಘಟನೆಗಳೇ ಯಾನ ಕತೆ. ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಗೋವಾ, ಉತ್ತರಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಈ ಸಿನಿಮಾದಲ್ಲಿ ಒಟ್ಟು ಏಳು ಹಾಡುಗಳಿವೆ. ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ ಕೂಡ ಗೀತೆಗಳನ್ನು ಬರೆದಿದ್ದಾರೆ. ಇನ್ನೂ ವಿಶೇಷ ಎಂದರೆ ನಾಯಕ, ನಾಯಕಿಯರು ಅಷ್ಟೇ ಅಲ್ಲದೆ ತಂತ್ರಜ್ಞರು ಸೇರಿ ಒಟ್ಟು 40 ಮಂದಿ ಹೊಸಬರಿಗೆ ಸಿನಿಮಾದಲ್ಲಿ ಅವಕಾಶ ಕಲ್ಪಿಸಲಾಗಿದೆ.

Comments are closed.