ಗಲ್ಫ್

ದುಬೈನಲ್ಲಿ ವೇದಿಕೆ ಮೇಲೆ ಜನರನ್ನು ನಗಿಸುತ್ತಲೇ ಕುಸಿದುಬಿದ್ದು ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಸಾವು!

Pinterest LinkedIn Tumblr

ದುಬೈ: ದುಬೈನಲ್ಲಿ ಭಾರತ ಮೂಲದ ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಒಬ್ಬರು ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಜುನಾಥ್ ನಾಯ್ಡು (36) ಮೂಲತಃ ಭಾರತದವನು. ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಎಂದಿನಂತೆ ತನ್ನ ಹಾಸ್ಯ ನಟನೆ, ಮಾತುಗಳಲ್ಲಿ ತೊಡಗಿಸಿಕೊಂಡಿದ್ದ, ಹಲವು ಜನ ವೀಕ್ಷಕರು ನೆರೆದಿದ್ದರು.

ಹಾಗೇ ಮಾತನಾಡುತ್ತ ಅಲ್ಲಿಯೇ ಪಕ್ಕದ ಮೇಲಿದ್ದ ಬೆಂಚಿನ ಮೇಲೆ ಕುಳಿತುಕೊಂಡ. ಆ ಸಮಯದಲ್ಲಿ ಸಿಕ್ಕಾಪಟೆ ಆತಂಕಭರಿತನಾಗಿ ಕಾಣಿಸುತ್ತಿದ್ದ. ಬೆಂಚ್​ ಮೇಲೆ ಕುಳಿತವನು ಹಾಗೇ ನೆಲಕ್ಕೆ ಬಿದ್ದ. ಆದರೆ ಅಲ್ಲಿ ನೆರೆದಿದ್ದವರಿಗೆ ಅದು ಅಷ್ಟು ಬೇಗ ತಿಳಿಯಲಿಲ್ಲ. ಇದೂ ಕೂಡ ಅವನ ಹಾಸ್ಯ ನಟನೆಯ ಒಂದು ಭಾಗ ಎಂದೇ ತಿಳಿದರು. ಅಷ್ಟರಲ್ಲಾಗಲೇ ಅವನು ಹೃದಯ ಸ್ತಂಭನದಿಂದ ಮೃತಪಟ್ಟಿದ್ದ. ಆತನಿಗಿದ್ದ ಆತಂಕ ಕಾಯಿಲೆಯೇ ಇದಕ್ಕೆ ಕಾರಣವಾಯ್ತು.

ಅಂದು ನಡೆಯುತ್ತಿದ್ದ ಸಮಾರಂಭದಲ್ಲಿ ಮಂಜುನಾಥ್​ ಅವರದ್ದೇ ಕೊನೇ ನಟನೆಯಾಗಿತ್ತು. ಅಂದು ಮಾತನಾಡುತ್ತ ತನ್ನ ತಂದೆ, ಕುಟುಂಬದ ಬಗ್ಗೆಯೂ ಹೇಳುತ್ತಿದ್ದ. ಹಾಗೇ ತಾನು ಜೀವಮಾನ ಆತಂಕದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ ಆತ ಅಸ್ವಸ್ಥನಾದ. ಅವನು ಆತಂಕ, ತಳಮಳದ ಬಗ್ಗೆ ಮಾತನಾಡುತ್ತಲೇ ಕುಸಿದು ಬಿದ್ದಿದ್ದರಿಂದ ಅದೂ ನಟನೆಯೇ ಎಂದು ವೀಕ್ಷಕರು ಭಾವಿಸಿದರು ಎನ್ನಲಾಗಿದೆ.

ಈತ ಹುಟ್ಟಿದ್ದು ಅಬುಧಾಬಿಯಲ್ಲಿ. ನಂತರ ದುಬೈಗೆ ತೆರಳಿ ಅಲ್ಲಿ ವಾಸವಾಗಿದ್ದ. ತಂದೆ-ತಾಯಿ ಯಾರೂ ಇಲ್ಲ. ಓರ್ವ ಸಹೋದರನಿದ್ದಾನೆ. ಯಾವುದೇ ಸಂಬಂಧಿಕರೂ ಇಲ್ಲ. ಹೀಗೆ ಕಲೆ, ಹಾಸ್ಯದಲ್ಲೇ ತೊಡಗಿಸಿಕೊಂಡು ಅದೇ ನನ್ನ ಕುಟುಂಬ ಎಂದು ಭಾವಿಸಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Comments are closed.