ಗಲ್ಫ್

ಜೂನ್ 21ರಂದು ದುಬೈಯಲ್ಲಿ ‘ಕಟೀಲು ಕ್ಷೇತ್ರ ಮಹಾತ್ಮೆ’ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ

Pinterest LinkedIn Tumblr

ದುಬೈ: ಯಕ್ಷ ಮಿತ್ರರು ದುಬಾಯಿ ಇವರ ಆಶ್ರಯದಲ್ಲಿ ಜೂನ್ 21 ರಂದು ದುಬೈಯ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಿರುವ ‘ಯಕ್ಷ ಸಂಭ್ರಮ-2019 ‘ ಕಾರ್ಯಕ್ರಮದಲ್ಲಿ ‘ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸಂಜೆ 5 ಗಂಟೆಗೆ ಪ್ರದರ್ಶನಗೊಳ್ಳಲಿರುವ ಯಕ್ಷಗಾನದಲ್ಲಿ ಭಾಗವತರಾಗಿ ಬಲಿಪ ಪ್ರಸಾದ್ ಭಟ್ ಹಾಗು ದುಬೈಯ ಕೃಷ್ಣ ಪ್ರಸಾದ್ , ಚೆಂಡೆ ಮದ್ದಳೆಯಲ್ಲಿ ಜನಾರ್ಧನ ತೋಳ್ಪಡಿತ್ತಾಯ ಹಾಗು ಮುರಾರಿ ಕಾದಂಬಳಿತ್ತಾಯ, ವಿಶೇಷ ವೇಷಾಧಾರಿಯಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅಕ್ಷಯ್ ಕುಮಾರ್ ಮಾರ್ನಾಡ್, ಲೋಕೇಶ್ ಮುಚ್ಚುರು, ವೇಷಭೂಷಣ ಮತ್ತು ವರ್ಣಾಲಂಕಾರ ರಮೇಶ್ ಶೆಟ್ಟಿ ಬಾಯಾರು ಹಾಗು ವಸಂತ.

ಯುಎಇಯಲ್ಲಿ ಕಳೆದ 16 ವರ್ಷಗಳಿಂದ ಯಕ್ಷಮಿತ್ರರು ತಮ್ಮ ತಂಡ ಕಟ್ಟಿಕೊಂಡು ಪ್ರತೀವರ್ಷ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನ ನೀಡುವುದರ ಮೂಲಕ ಸಾವಿರಾರು ಮಂದಿ ಪ್ರೇಕ್ಷಕರು ಹಾಗೂ ಅನಿವಾಸಿ ಕನ್ನಡಿಗರಲ್ಲಿ ಯಕ್ಷಗಾನದ ಬಗ್ಗೆ ಅಭಿಮಾನ ಮೂಡಿಸುತ್ತಿದ್ದಾರೆ.

ಭಾಗವತರಾದ ಬಲಿಪ ಪ್ರಸಾದ್ ಭಟ್ ಹಾಗು ದುಬೈಯ ಕೃಷ್ಣ ಪ್ರಸಾದ್ , ಚೆಂಡೆ ಮದ್ದಳೆಯಲ್ಲಿ ಜನಾರ್ಧನ ತೋಳ್ಪಡಿತ್ತಾಯ ಹಾಗು ಮುರಾರಿ ಕಾದಂಬಳಿತ್ತಾಯ, ವಿಶೇಷ ವೇಷಾಧಾರಿಯಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅಕ್ಷಯ್ ಕುಮಾರ್ ಮಾರ್ನಾಡ್, ಲೋಕೇಶ್ ಮುಚ್ಚುರು, ವೇಷಭೂಷಣ ಮತ್ತು ವರ್ಣಾಲಂಕಾರ ರಮೇಶ್ ಶೆಟ್ಟಿ ಬಾಯಾರು ಹಾಗು ವಸಂತರವರು ಈಗಾಗಲೇ ದುಬೈಗೆ ಆಗಮಿಸದ್ದು, ಯಕ್ಷಗಾನದ ತಯಾರಿ ನಡೆಸುತ್ತಿದ್ದಾರೆ.

Comments are closed.