ಗಲ್ಫ್

ದುಬೈಗೆ ಆಗಮಿಸಿದ ಶ್ರೀ ಮಹಂತ್‌ ಸ್ವಾಮಿ ಮಹಾರಾಜ್‌ಗೆ ಭವ್ಯ ಸ್ವಾಗತ; ನಾಳೆ ಅಬುಧಾಬಿ ದೇವಾಲಯದ ಶಂಕು ಸ್ಥಾಪನೆ

Pinterest LinkedIn Tumblr

ದುಬೈ: ಬೋಚಸನ್ವಾಸಿ ಶ್ರೀ ಅಕ್ಷರ್ -ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (BAPS) ಅಧ್ಯಕ್ಷ ಹಾಗೂ ಪ್ರಸ್ತುತದ ಗುರುವಾಗಿರುವ ಶ್ರೀ ಮಹಂತ್‌ ಸ್ವಾಮಿ ಮಹಾರಾಜ್‌ ಅವರು 11 ದಿನಗ ಭೇಟಿಗಾಗಿ ದುಬೈಗೆ ಆಗಮಿಸಿದ್ದಾರೆ.

ಅಲ್ ಮಕ್ತುಮ್ ಇಂಟರ್ನ್ಯಾಷನಲ್ ಏರ್ಪೋರ್ಟ್’ಗೆ ಆಗಮಿಸಿದ ಮಹಂತ್‌ ಸ್ವಾಮಿ ಮಹಾರಾಜ್‌’ರನ್ನು ಯುಎಇ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಅನಂತರ ದುಬೈಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶ್ರೀ ಮಹಂತ್‌ ಸ್ವಾಮಿ ಮಹಾರಾಜ್‌ ಅವರು ಆಶೀರ್ವಚನ ನೀಡಿದರು.

ಅಬುಧಾಬಿಯ ದುಬೈ-ಅಬುಧಾಬಿ ಹೆದ್ದಾರಿಯ ಪಕ್ಕದಲ್ಲಿ ಅಬು ಮುರೈಖಾ ಎಂಬಲ್ಲಿ ಸಂಪೂರ್ಣ ಹಿಂದೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಶ್ರೀ ಮಹಂತ್‌ ಸ್ವಾಮಿ ಮಹಾರಾಜ್‌ ಅವರು ಏಪ್ರಿಲ್ 20 ರಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲೇ ಇಲ್ಲಿನ 13.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಬೇಕಿರುವ ದೇವಸ್ಥಾನದ ಯೋಜನೆಗೆ ಅಬುದಾಬಿ ಸರ್ಕಾರ ಅನುಮೋದನೆ ನೀಡಿತ್ತು. ನಾಗರಿಕ ಸಂಸ್ಥೆ ಹಾಗೂ ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಹಿಂದೂ ಧರ್ಮದ ಬೋಚಸನ್ವಾಸಿ ಶ್ರೀ ಅಕ್ಷರ್ -ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದೆ.

Comments are closed.