ಗಲ್ಫ್

ಜಿ.ಎಸ್.ಬಿ. ಸಭಾ ಕುವೈತ್ ವತಿಯಿಂದ ಶಾಸಕ ವೇದವ್ಯಾಸ ಕಾಮತ್’ಗೆ ಸನ್ಮಾನ ಸಮಾರಂಭ

Pinterest LinkedIn Tumblr

ಕುವೈತ್: ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಕುವೈತ್ ಪ್ರವಾಸದಲ್ಲಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಶ್ರೀಯುತ ವೇದವ್ಯಾಸ ಕಾಮತ್ ರವರನ್ನು ಜಿ.ಎಸ್.ಬಿ. ಸಭಾ ಕುವೈತ್‍ನ ಸದಸ್ಯರು ಕುವೈತ್‍ನ ರಿಗೈನಲ್ಲಿ ಮಾಲಾರ್ಪಣೆ, ಪುಷ್ಪಗುಚ್ಛದೊಂದಿಗೆ ಆದರದಿಂದ ಸ್ವಾಗತಿಸಿ, ಶಾಲು ಹೊದೆಸಿ, ಫಲ-ಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಸಭಾದ ಅಧ್ಯಕ್ಷ ಫಲಿಮಾರು ವಿಶ್ವನಾಥ ಪ್ರಭು ಅಧ್ಯಕ್ಷತೆ ವಹಿಸಿದ್ದರೆ, ಉಪಾಧ್ಯಕ್ಷ ಶ್ರೀ ಗಿರೀಶ ಶೆಣೈ ಶಾಸಕರ ಪರಿಚಯ ಭಾಷಣ ಮಾಡಿದರು. ಸಭಾದ ಮಾಜಿ ಅಧ್ಯಕ್ಷರುಗಳಾದ ಡಾ|ಸುರೇಂದ್ರ ನಾಯಕ್ ಕಾಪಾಡಿ ಮತ್ತು ಶ್ರೀ ಗೋಕುಲ್ ದಾಸ್ ಭಟ್ ಹಾಗೂ ಸಲಹಾ ಸಮಿತಿ ಸದಸ್ಯರುಗಳಾದ ಅನಿಲ್ ಪ್ರಭು, ರಾಜಾರಾಮ್ ಪೈ ಕಟೀಲು, ಪ್ರಕಾಶ್ ಪೈಯವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಪರದೇಶದಲ್ಲೂ ಸಮಾಜ ಬಾಂಧವರ ಸಂಘಟನೆ ಹಾಗೂ ಒಗ್ಗಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಭಾದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು, ವಿದ್ಯಾರ್ಥಿವೇತನ, ಬಡವರು, ರೋಗಿಗಳು ಮತ್ತು ಅಶಕ್ತರಿಗೆ ನೀಡುತ್ತಿರುವ ನೆರವಿನ ಬಗ್ಗೆ ತಿಳಿದು ಶ್ಲಾಘಿಸಿದರು. ಸಭಾದ ಸಾರ್ವಜನಿಕ ಸಂಪರ್ಕಾಧಿಕಾರಿ ಗಣೇಶ್ ಪಡಿಯಾರ್ ಮತ್ತು ಕಾರ್ಯದರ್ಶಿ ಶ್ರೀಮತಿ ಸ್ಫೂರ್ತಿ ದೀಪಕ್ ಕಾಮತ್ ಕಾರ್ಯಕ್ರಮವನ್ನು ನಿರ್ವಹಿಸಿದ್ದು, ಕೋಶಾಧಿಕಾರಿ ವಿನಾಯಕ ಶೆಣೈಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ: ಸುರೇಶ್ ರಾವ್ ನೇರಂಬಳ್ಳಿ

Comments are closed.