ಗಲ್ಫ್

ಎಚ್ಚರಿಕೆ…! ಯುಎಇಯಲ್ಲಿರುವ ಅನಿವಾಸಿ ಭಾರತೀಯರೇ ಇನ್ನು ಮುಂದೆ ಈ ಸಂಸ್ಥೆಗಳ ಮೂಲಕ ತಾಯ್ನಾಡಿಗೆ ಹಣ ಕಳುಹಿಸಬೇಡಿ

Pinterest LinkedIn Tumblr

ದುಬೈ: ಕೆಲವು ಕರೆನ್ಸಿ ಎಕ್ಸ್ ಚೇಂಜ್ ಸಂಸ್ಥೆಗಳ ಲೈಸೆನ್ಸ್ ಗಳನ್ನು ಯುಎಇ ಸೆಂಟ್ರಲ್ ಬ್ಯಾಂಕ್ ಕೆಳಗಿನ ದರ್ಜೆಗೆ ಇಳಿಸಿದ್ದು, ಈ ಸಂಸ್ಥೆಗಳ ಮೂಲಕ ಹಣ ರವಾನಿಸದಂತೆ ದೇಶದ ನಿವಾಸಿಗಳಿಗೆ ಸೂಚನೆ ನೀಡಿದೆ.

Taher Exchange Est., Al Hadha Exchange, Al Hemriya Exchange, Dubai Express Exchange, Sanaa Exchange, Cosmos Exchange ಹಾಗು Bin Bakheet Exchange Est ನ ಲೈಸೆನ್ಸ್ ಗಳನ್ನು ಬ್ಯಾಂಕ್ ಕೆಳಗಿನ ದರ್ಜೆಗೆ ಇಳಿಸಿದೆ.

“ವೇತನಕ್ಕೆ ಸಂಬಂಧಿಸಿದ ಪಾವತಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ಈ ಮೇಲಿನ ಸಂಸ್ಥೆಗಳ ಲೈಸೆನ್ಸ್ ಗಳನ್ನು ಕೆಳದರ್ಜೆಗೆ ಇಳಿಸಲಾಗಿದೆ. ಕೇಂದ್ರೀಯ ಬ್ಯಾಂಕ್ ನೀಡಿದ್ದ ರಿಯಾಯಿತಿ ಅವಧಿಯಲ್ಲೂ ಸ್ಟೇಟಸನ್ನು ನಿಯಮಿತಗೊಳಿಸಲು ಈ ಸಂಸ್ಥೆಗಳು ವಿಫಲವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಕೇಂದ್ರೀಯ ಬ್ಯಾಂಕ್ ನ ಪ್ರಕಟನೆ ತಿಳಿಸಿದೆ.

ವಿದೇಶಿ ಕರೆನ್ಸಿಗಳ ಮಾರಾಟ ಹಾಗು ಖರೀದಿಗಳನ್ನು ನಡೆಸಲು ಈ ಸಂಸ್ಥೆಗಳಿಗೆ ಅವಕಾಶವಿದೆ.

Comments are closed.