ಗಲ್ಫ್

ಪೆಟ್ರೋಲ್ – ಡೀಸೆಲ್ ದರ ಮತ್ತೊಮ್ಮೆ ಏರಿಕೆ;ಮುಂಬೈ ನಲ್ಲಿ ಪ್ರತಿ ಲೀಟರ್ ಗೆ 86.24 ರೂ.!

Pinterest LinkedIn Tumblr

ದೆಹಲಿ: ತೈಲ ದರ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ದೇಶದ ಜನತೆಗೆ ಮತ್ತೊಂದು ಹೊಡೆತ ಬಿದ್ದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ.

ಮಂಗಳವಾರದಂದು ಪೆಟ್ರೋಲ್ ದರ 16 ಪೈಸೆ ಹಾಗೂ ಡೀಸೆಲ್ ದರ 14 ಪೈಸೆ ಪ್ರತಿ ಲೀಟರ್ ಗೆ ಏರಿಕೆಯಾಗಿದ್ದು, ಸತತವಾಗಿ 16 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

ದೆಹಲಿಯಲ್ಲಿ ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ದರ 78.43 ರೂಪಾಯಿಯಾಗಿದ್ದು, ಮುಂಬೈ ನಲ್ಲಿ 86.24 ರೂಪಾಯಿಯಾಗಿದ್ದು ದೆಹಲಿಯಲ್ಲಿ ಡೀಸೆಲ್ ದರ 69.31 ರೂಪಾಯಿಯಾಗಿದ್ದರೆ, ಮುಂಬೈ ನಲ್ಲಿ 73.79 ರೂಪಾಯಿಯಷ್ಟಾಗಿದೆ.

ಅತ್ತ ಇಂಧನ ಸಚಿವಾಲಯ ಪೆಟ್ರೋಲ್ ಡೀಸೆಲ್ ಫ್ಯೂಚರ್ ಟ್ರೇಡಿಂಗ್ ಗೆ ತಾತ್ವಿಕ ಒಪ್ಪಿಗೆ ನೀಡುತ್ತಿದ್ದಂತೆಯೇ ದರವೂ ಏರಿಕೆಯಾಗಿದೆ.

Comments are closed.