ಗಲ್ಫ್

ಒಮಾನ್‌ನಲ್ಲಿ “ಮೆಕ್ನು’ ಚಂಡ ಮಾರುತದ ಆರ್ಭಟಕ್ಕೆ ಇಬ್ಬರು ಭಾರತೀಯರು ಸೇರಿದಂತೆ 10 ಮಂದಿ ಬಲಿ

Pinterest LinkedIn Tumblr

ಸಲಾಲಾ(ಒಮಾನ್‌): “ಮೆಕ್ನು’ ಚಂಡ ಮಾರುತ ಶನಿವಾರ ಬೆಳಗ್ಗಿನ ಜಾವ ಅರಬಿ ದ್ವೀಪ ಕಲ್ಪಕ್ಕೆ ಅಪ್ಪಳಿಸಿದ್ದರಿಂದ ಒಮಾನ್‌ ಹಾಗೂ ಯೆಮೆನ್‌ನಲ್ಲಿ ಭಾರೀ ಮಳೆಯಾಗಿದೆ. ಚಂಡ ಮಾರುತದ ಆರ್ಭಟಕ್ಕೆ ಇಬ್ಬರು ಭಾರತೀಯರ ಸಹಿತ 10 ಮಂದಿ ಸಾವಿಗೀಡಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.

ಐವರು ಯೆಮೆನಿಗಳು, ಮೂವರು ಒಮಾನಿಗಳು ಹಾಗೂ ಇಬ್ಬರು ಭಾರತೀಯರು ಸಾವಿಗೀಡಾಗಿದ್ದಾರೆ. ನಾಪತ್ತೆಯಾದವರಲ್ಲಿ ಯೆಮೆನಿಗಳು, ಭಾರತೀಯರು ಹಾಗೂ ಸುಡಾನಿಗಳು ಸೇರಿದ್ದಾರೆ ಎಂದು ರಾಯrರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಸಿಗೆ 170-180 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡ ಮಾರುತದ ಹೊಡೆತಕ್ಕೆ ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದ್ದು, ಒಮಾನ್‌ನ ಎರಡನೇ ಅತೀ ದೊಡ್ಡ ನಗರ ಸಲಾಲಾದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣ, ಸಲಾಲಾ ಬಂದರನ್ನು ಮುಚ್ಚಲಾಗಿದೆ.

Comments are closed.