ಗಲ್ಫ್

35 ವರ್ಷಗಳ ಬಳಿಕ ಸೌದಿಯ ಮೊದಲ ಚಿತ್ರಮಂದಿರ ಮತ್ತೆ ಪ್ರಾರಂಭ

Pinterest LinkedIn Tumblr

ಸೌದಿ ಅರೇಬಿ: ಧಾರ್ಮಿಕ ಕಾರಣಗಳಿಂದ 35 ವರ್ಷಗಳ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ಸೌದಿ ಅರೇಬಿಯಾದ ಮೊದಲ ಚಿತ್ರಮಂದಿರ ಬುಧವಾರ ರಾತ್ರಿಯಿಂದ ಮತ್ತೆ ಪ್ರಾರಂಭವಾಗಿದೆ.

ರಾಜಧಾನಿ ರಿಯಾದ್​ನಲ್ಲಿ ಮೊದಲ ಪ್ರದರ್ಶನ ನಡೆದಿದ್ದು, ಸೌದಿ ಹಾಗೂ ವಿದೇಶಿ ವೀಕ್ಷಕರು ಮಾರ್ವೆಲ್​ ಅಭಿನಯದ ಸೂಪರ್​ ಹಿಟ್​ ಚಿತ್ರ ಬ್ಲ್ಯಾಕ್​ ಪ್ಯಾಂಥರ್​ ಚಿತ್ರವನ್ನು ವೀಕ್ಷಿಸಿದ್ದಾರೆ.

ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವ್ವಾದ್​ ಅಲವಾಡ್​ ಅವರು ಸೆಲೆಬ್ರೆಟಿ ಹಾಗೂ ಕೆಲವು ಸಿನಿಮಾ ನಿರ್ಮಾಪಕರೊಂದಿಗೆ ಚಿತ್ರ ವೀಕ್ಷಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ಸೌದಿ ಜನರಲ್ಲಿ ಸಿನಿಮಾ ಆಸಕ್ತಿ ಹೆಚ್ಚಿದ್ದು, ಇದರ ಪ್ರತಿಬಿಂಬವಾಗಿ ಸೌದಿಯ ಆಡಿಯೋ ವಿಸುವಲ್​ ಟ್ವಿಟರ್​ ಅಕೌಂಟ್​ಗೆ ಹೊಸ ಫಾಲೋವರ್ಸ್​ ಹೆಚ್ಚುತ್ತಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ.​

ವಿಸನ್​ 2030ರ ಅಡಿಯಲ್ಲಿ ಸೌದಿ ಅರೇಬಿಯಾದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮವನ್ನು ಸೌದಿ ರಾಜ ಮಹಮ್ಮದ್​ ಬಿನ್​ ಸಲ್ಮಾನ್​ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಕಮರ್ಷಿಯಲ್​ ಚಲನಚಿತ್ರಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ.

ಸೌದಿ ಅರೆಬೀಯಾದಲ್ಲಿ ಚಿತ್ರಮಂದಿರ ಪ್ರಾರಂಭವಾಗಿರುವುದು ಸೌದಿ ಸಾಮ್ರಾಜ್ಯದ ಇತಿಹಾಸ, ಸಾಂಸ್ಕೃತಿಕ ಜೀವನ ಹಾಗೂ ಸಾಮ್ರಾಜ್ಯದ ಮನರಂಜನಾ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವ್ವಾದ್​ ಅಲವಾಡ್ ತಿಳಿಸಿದ್ದಾರೆ.

2030ರೊಳಗೆ 350 ಚಿತ್ರಮಂದಿರ ಹಾಗೂ 2,500 ಸ್ಕ್ರೀನಿಂಗ್​ಗಳನ್ನು ತೆರೆಯಲು ಸೌದಿ ಅರೆಬೀಯಾ ನೂತನ ಯೋಜನೆಯನ್ನು ರೂಪಿಸಿದೆ.

Comments are closed.