ರಿಯಾದ್: ಇತ್ತೀಚೆಗಷ್ಟೇ, ತನ್ನ ದೇಶದ ಮಹಿಳೆಯರಿಗೆ ಕಾರು ಚಲಾಯಿಸುವ, ಫುಟ್ಬಾಲ್‌ಕ್ರೀಡಾಂಗಣ ಪ್ರವೇಶಿಸುವ ಅವಕಾಶ ಸಹಿತ, ವಿವಿಧ ಮೂಲಭೂತ ಹಕ್ಕುಗಳನ್ನು ನೀಡಿರುವ ಸೌದಿ ಅರೇಬಿಯಾ ಸರಕಾರ, ಇದೀಗ, ತನ್ನ ಸೇನೆಯಲ್ಲೂ ಮಹಿಳೆಯರನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ರಿಯಾದ್, ಮೆಕ್ಕಾ, ಅಲ್‌ಖಾಸಿಮ್‌ಹಾಗೂ ಅಲ್‌ಮದೀನಾ ಪ್ರಾಂತ್ಯಗಳಲ್ಲಿರುವ ಸೇನಾ ವಲಯಗಳಲ್ಲಿ ಸೈನಿಕರ ತತ್ಸಮಾನ ಹುದ್ದೆಗಳಿಗಾಗಿ ಈ ಪ್ರಾಂತ್ಯದ ಮಹಿಳೆಯ ರಿಂದ ಸೌದಿಯ ಭದ್ರತಾ ಇಲಾಖೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾ ಗುವ ವರು, ಸೈನಿಕರಂತೆ ಯುದ್ಧಗಳಲ್ಲಿ ಭಾಗಿಯಾಗಬೇಕಿಲ್ಲ. ರಕ್ಷಣಾ ಇಲಾಖೆಯ ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸಬೇ ಕಾ ಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆದರೆ, ಅರ್ಜಿ ಸಲ್ಲಿಸುವವರಿಗೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದ್ದು, ಅರ್ಜಿದಾರರು ಸೌದಿ ಅರೇಬಿಯಾ ನಾಗರಿಕತ್ವ ಹೊಂದಿರಬೇಕು. ವಯಸ್ಸು 25ರಿಂದ 35ರೊಳಗಿರಬೇಕು. ಹೈಸ್ಕೂಲ್‌ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಆರೋಗ್ಯವಂತರೆಂದು ಸಾಬೀತಾಗಬೇಕು ಎಂದು ತಾಕೀತು ಮಾಡಲಾಗಿದೆ. ಇದಲ್ಲದೆ, ಅರ್ಜಿ ಸಲ್ಲಿಸುವ ಮಹಿಳೆಯರು, ತಾವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಪ್ರಾಂತ್ಯದಲ್ಲಿ ಖಾಯಂ ವಿಳಾಸ ಹೊಂದಿರಲೇಬೇಕು ಹಾಗೂ ಪುರುಷ ರಕ್ಷಕನ ಆಶ್ರಯದಲ್ಲಿರಬೇಕು ಎಂದು ಸೂಚಿಸಲಾಗಿದೆ.