ಗಲ್ಫ್

ಒಮನ್‌ನಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ: ಪ್ರಧಾನಿ ಮೋದಿ

Pinterest LinkedIn Tumblr

ಮಸ್ಕಟ್: ಇಂದು ಒಮನ್‌ನಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಒಮನ್ ದೇಶದಲ್ಲಿದ್ದಾರೆ. ಮಸ್ಕಟ್ ಸುಲ್ತಾನ್ ಖಬೂಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು ಒಮನ್ ನಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ ಎಂದರು.

ಉದ್ಯೋಗ ನಿಮಿತ್ತ ದೇಶವನ್ನು ಬಿಟ್ಟು ಇಲ್ಲಿ ಬಂದು ದುಡಿಯುತ್ತಿರುವ ನಾಗರಿಕರು ಈಗ ಭಾರತಕ್ಕೆ ಭೇಟಿ ನೀಡಿದರೆ ನಿಮಗೆ ಯುವ ಭಾರತ, ನವ ಭಾರತ ಕಂಡು ಬರುತ್ತದೆ. ಈಗ ದೇಶದಲ್ಲಿ ಸುಲಲಿತ ಆಡಳಿತ ವ್ಯವಸ್ಥೆ ಬಂದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ನಮ್ಮ ಶ್ರೇಣಿ ಕೂಡ ಹೆಚ್ಚಾಗಿದೆ. ಸುಲಲಿತ ಆಡಳಿತ ವಿಷಯದಲ್ಲಿ ವಿಶ್ವದಲ್ಲಿಯೇ ಭಾರತ 50ಕ್ಕೂ ಹೆಚ್ಚು ಸ್ಥಾನ ಮೇಲೇರಿದೆ ಎಂದರು.

ನಾನೊಬ್ಬ ಚಾಯ್ ವಾಲಾ. ಹೀಗಾಗಿ ನನಗೆ ಬಡವರ ಕಷ್ಟ ಸುಖ ಚನ್ನಾಗಿದೆ ಗೊತ್ತಿದೆ. ಇದೀಗ ದೇಶದಲ್ಲಿ ಕೆಲವು ಯೋಜನೆಗಳನ್ನು ಕೇವಲ 90 ಪೈಸೆಗೆ ಒದಗಿಸಲಾಗುತ್ತಿದೆ. ಈ ಮೊತ್ತಕ್ಕೆ ಚಹಾ ಕೂಡ ಬರುವುದಿಲ್ಲ. ಆದರೆ ಇದೇ ಮೊತ್ತಕ್ಕೆ ನಾವು ಯೋಜನೆ ಪೂರೈಸುತ್ತಿದ್ದೇವೆ ಎಂದು ಹೇಳಿದರು.

Comments are closed.