ಅಂತರಾಷ್ಟ್ರೀಯ

‘ಜೈ ಸೀತಾ ರಾಮ್’ ಎಂದ ಮುಸ್ಲಿಂ ರಾಷ್ಟ್ರದ ರಾಜಕುಮಾರ: ವಿಡಿಯೋ ವೈರಲ್

Pinterest LinkedIn Tumblr


ಅಬುಧಾಬಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿರುವ ನಡುವೆಯೇ ಮುಸ್ಲಿಂ ರಾಷ್ಟ್ರದ ರಾಜಕುಮಾರ ‘ಜೈ ಸೀತಾ ರಾಮ್’ ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಅಬುಧಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್ ಅವರು ಜೈ ಸಿಯಾ ರಾಮ್ ಎಂದು ಭಾಷಣ ಆರಂಭಿಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮೊರಾರಿ ಬಾಪು ಅವರ ನೇತೃತ್ವದ ರಾಮ ಕಥಾ ಕಾರ್ಯಕ್ರಮದಲ್ಲಿ ಅಬುಧಾಬಿ ರಾಜಕುಮಾರ ಜೈ ಸಿಯಾ ರಾಮ್ ಎಂದು ಭಾಷಣ ಮಾಡಿದ್ದಾರೆ, 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿರುವ ರಾಮಕಥಾ ಕಾರ್ಯಕ್ರಮದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಯಶಸ್ವಿ ಜೋರ್ಡಾನ್, ಪ್ಯಾಲೆಸ್ತೀನ್ ಭೇಟಿಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆಯಷ್ಟೇ ದುಬೈಗೆ ತೆರಳಿದ್ದರು. ಈ ವೇಳೆ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.

ದುಬೈ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ಕ ಮಕ್ತೋಮ್ ಅವರೊಂದಿಗೆ ಹಾಗೂ ರಾಜಕುಮಾರ್ ಶೇಖ್ ಮೊಹಮ್ಮದ್ ಬುನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ದುಬೈನಲ್ಲಿ ವಿಶ್ವ ಸರ್ಕಾರಿ ಶೃಂಗವನ್ನು ಉದ್ದೇಶಿಸಿ ಕೂಡ ಅವರು ಮಾತನಾಡಲಿದ್ದಾರೆ.

ಅಬುಧಾಬಿಯಲ್ಲಿ ಶ್ರೀ ಸ್ವಾಮಿ ನಾರಾಯಣ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿಯವರು ಇದೇ ವೇಳೆ ಸಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮೋದಿಯವರು ದುಬೈನಿಂದಲೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅಬುಧಾಬಿಯಲ್ಲಿ 14 ಎಕರೆಯಷ್ಟು ಬೃಹತ್ ಜಾಗವನ್ನು ದೇಗುಲ ನಿರ್ಮಾಣಕ್ಕೆ ನೀಡಲಾಗಿದೆ. ಈ ಪೈಕಿ 5 ಎಕರೆ ವಿಸ್ತೀರ್ಣದಲ್ಲಿ ದೇಗುಲ ನಿರ್ಮಾಣವಾಗಲಿದೆ. ಉಳಿದ ಜಾಗದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಯ ಕೇಂದ್ರಗಳು ನಿರ್ಮಾಣವಾಗಲಿದ್ದು, 2020ರ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಈ ದೇಗುಲ ನಿರ್ಮಾಣ ಚಟುವಟಿಕೆಗಳಿಗೆ ಭಾರತೀಯ ಸಮುದಾಯದವರ ಸಮಿತಿಯೊಂದನ್ನು ರಚಿಸಲಾಗಿದ್ದು, ಇದರ ನೇತೃತ್ವವನ್ನು ಕನ್ನಡಿಗ ಬಿ.ಆರ್.ಶೆಟ್ಟಿ ವಹಿಸಿಕೊಂಡಿದ್ದಾರೆ.

Comments are closed.