ಗಲ್ಫ್

ಒಮಾನ್: ಫೆ.11 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಸ್ಕತ್ ಗೆ ಭೇಟಿ

Pinterest LinkedIn Tumblr

ಇದೇ ಫೆ. 11ನೇ ತಾರೀಖು ಒಮಾನ್ ಗೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಭೇಟಿ ನೀಡುತಿದ್ದಾರೆ. ಫೆಬ್ರವರಿ 9ರಿಂದ 12 ತಾರೀಖಿನವರೆಗೆ ಕ್ರಮವಾಗಿ ಯು.ಎ.ಇ, ಒಮಾನ್ ಮತ್ತು ಪ್ಯಾಲೆಸ್ತೀನ್ ದೇಶಗಳಿಗೆ ಮೂರು ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಯು.ಎ.ಇ ಗೆ ಇದು ಅವರ ೨ನೇ ಭೇಟಿಯಾಗಿದ್ದರೆ, ಒಮಾನ್ ಗೆ ಮೊದಲ ಬೇಟಿಯಾಗಲಿದೆ. ಹಾಗೆಯೆ ಪ್ಯಾಲೆಸ್ತಿನ್ ಗೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಫೆ.11ರಂದು ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರಕಾರಿ ಸಮ್ಮೇಳನ (ವರ್ಲ್ಡ್ ಗವರ್ನ್ ಮೆಂಟ್‌ಸಮಿಟ್‌)ನಲ್ಲಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.

ಪ್ರಧಾನ ಮಂತ್ರಿ ಯವರು ಒಮಾನ್ ಗೆ ಭೇಟಿ ನೀಡುವ ಬಗ್ಗೆ ಬಹುದಿನಗಳಂದಿಲೂ ಚರ್ಚೆ ನಡೆಯುತಿತ್ತು. ಆದರೆ ಭೇಟಿ ಖಚಿತ ವಾಗಿರಲಿಲ್ಲ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಕಳೆದ ವರ್ಷವೇ ಒಮಾನ್ ಗೆ ಬೇಟಿಯಾಗಬೇಕಿತ್ತು. ಒಮಾನ್ ನ ಕೆಲ ಭಾರತೀಯ ಉದ್ಯಮಿಗಳು ಸಹ ಇತ್ತೀಚಿಗೆ ಪ್ರಧಾನಮಂತ್ರಿ ಯವರನ್ನು ಭೇಟಿ ಮಾಡಿ ಅವರನ್ನು ಒಮಾನ್ ಗೆ ಬೇಟಿ ಮಾಡುವಂತೆ ಆಹ್ವಾನಿಸಿದ್ದರು. ಯು.ಎ.ಇ ಯಲ್ಲಿ ಕಾರ್ಯಕ್ರಮ ಒಂದು ನಿಗದಿಯಾಗಿದ್ದರಿಂದ, ಪಕ್ಕದಲ್ಲಿರುವ ಒಮಾನ್ ಗೆ ಸಹ ಭೇಟಿ ನೀಡುವ ಕಾರ್ಯಕ್ರಮ ನಿಗದಿ ಪಡಿಸಿದರು.

ಒಮಾನ್ ನ ಬೇಟಿಯಲ್ಲಿ ಭಾರತೀಯ ಸಮುದಾಯ ವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾರತೀಯ ದೂತವಾಸ ಕಛೇರಿ ಸಕಲ ಸಿದ್ದತೆ ಯನ್ನು ನಡೆಸಿದ್ದು, ಭದ್ರತೆ ಕಾರಣದಿಂದ ಕಾರ್ಯಕ್ರಮಕ್ಕೆ ಬರುವವರಿಗಾಗಿ ಆನ್ಲೈನ್ ನಲ್ಲಿ ನೊಂದಣಿ ಮಾಡಿಸಲು ಕಛೇರಿಯ ವೆಬ್ ಸೈಟ್ ನಲ್ಲಿ ನೊಂದಣಿ ಸೌಲಭ್ಯವನ್ನು ಮಾಡಲಾಗಿದೆ. ಬಾರತೀಯ ಸಾಮಾಜಿಕ ವೇದಿಕೆಯ(Indian Social Club) ಮುಖಾಂತರವು ನೊಂದಣಿ ಮಾಡಲು ಅವಕಾಶ ಮಾಡಿ ಕೊಡಲಾಗಿದೆ.

ಒಮಾನ್ ದೇಶದ ಉಪ ಪ್ರಧಾನಿಗಳಾದ H.H. ಫಹಾದ್ ಬಿನ್ ಮಹಮೂದ್ ಅಲ್ ಸಯೀದ್ ಮತ್ತು H.H.ಸಯೀದ್ ಅಸ್ಸಾದ್ ರವನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ಸಮಯದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ, ವ್ಯಾಪಾರ ಸಂಭಂದ ಗಳ ಕುರಿತು ಚರ್ಚೆ ನಡೆಸಲಾಗುತ್ತದೆ.

ಭಾರತ ಮತ್ತು ಒಮಾನ್ ದೇಶಗಳ ನಡುವಿನ ಸಂಭಂದ ಶತಮಾನಗಳಷ್ಟು ಹಳೆಯದಾಗಿದ್ದು, ಈ ಭೇಟಿಯಿಂದ ಎರಡು ದೇಶಗಳ ದ್ವಿಪಕ್ಷೀಯ ಸಂಭಂದ ಇನ್ನು ಹೆಚ್ಚು ಬಲಗೊಳ್ಳಲಿದೆ ಎಂದು ನಂಬಲಾಗಿದೆ. ಸುಮಾರು 9 ಲಕ್ಷದಷ್ಟು ಭಾರತೀಯರು ಒಮಾನ್ ನಲ್ಲಿ ಕೆಲಸ ಮಾಡುತಿದ್ದು, ತುಂಬಾ ಸಂಖ್ಯೆಯಲ್ಲಿ ಭಾರತೀಯರು ಈ ಭೇಟಿಗಾಗಿ ಕಾತುರದಿಂದ ಕಾಯುತಿದ್ದಾರೆ.

ವರದಿ: P.S.RANGANATHA

Comments are closed.