ಗಲ್ಫ್

2018 ಜನವರಿ 1:ಡಿ.ಕೆ.ಎಸ್.ಸಿ ಯುಎಇ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್”

Pinterest LinkedIn Tumblr

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ವತಿಯಿಂದ ಡಿ.ಕೆ.ಎಸ್.ಸಿ ಸಂಘಟನೆ ಯ ಪ್ರವರ್ತಕರು, ಸದಸ್ಯರು, ಹಿತೈಷಿಗಳು ಹಾಗು ಕರಾವಳಿಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕ ಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕಆಟೋಟ ಕಾರ್ಯಕ್ರಮದೊಂದಿಗೆ 2018 ಜನವರಿ 1 ರಂದು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಒಳಾಂಗಣ ಹಾಗೂ ಒರಾಂಗಣ ವ್ಯವಸ್ಥೆ ಇದ್ದು ಪ್ರಕ್ರತಿಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಸಂಘಟಿಸಿರುತ್ತದೆ.

ವಿವಿಧ ಕಾರ್ಯಕ್ರಮಗಳು ಬೆಳಿಗ್ಗೆ 9 ಘಂಟೆಯಿಂದ 12ತಂಡದಿಂದ ಮಾರ್ಚ್ ಪಾಸ್ಟ್ ನೊಂದಿಗೆ ನಮ್ಮ ತಾಯ್ನಾಡು ಭಾರತ ದೇಶ ಹಾಗೂ ತಾವು ಇರುವ ಯು.ಎ.ಇ ಎರಡು ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಹಾಗೂ ವಿವಿಧತಂಡಗಳ ದಪ್ ಪ್ರದರ್ಶನ ಅಲ್ಲದೆ ಮಕ್ಕಳಿಗೆ ಹಿರಿಯರಿಗೆ ಮಹಿಳೆಯರಿಗೆ ಪ್ರತ್ಯೇಕ ವಿವಿಧ ಮನಸ್ಸಿಗೆ ಉಲ್ಲಾಸ ತರುವ ಸ್ಪರ್ಧೆಗಳು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿಗಣ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸಚಿವರಾದ ಯು.ಟಿ,ಖಾದರ್, ಮುಖ್ಯ ಸಚೇತಕರಾದ ಅಶೋಕ್ ಎಂ ಪಟ್ಟಾನ್, ಸಚಿವರಾದ ಮೊಯಿದೀನ್ ಬಾವ, ಬಿ.ಎ.ಗ್ರೂಪ್ ಅಪ್ ಕಂಪನಿ ಇದರ ಸ್ಥಾಪಕ ರಾದ ಬಿ.ಎ.ಅಹಮದ್ ಹಾಜಿ ತುಂಬೆ, ಕರ್ನಾಟಕ ರಾಜ್ಯ ಜನತಾದಳ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ನಝೀರ್ ಹುಸೈನ್ ಪಡುಬಿದ್ರೆ, ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ, ಡಿ.ಕೆ.ಎಸ್.ಸಿ 20 ನೇ ವಾರ್ಷಿಕಸಮ್ಮೇಳನ ಸಮಿತಿ ಚೆಯರ್ಮೆನ್ ಆಗಿ ಕಾರ್ಯ ನಿರ್ವಹಿಸಿದ ಬಿ.ಎಂ.ಮುಮ್ತಾಜ್ ಅಲಿ, ಕೋಶಾಧಿಕಾರಿ ಆಗಿ ಕಾರ್ಯನಿರ್ವಹಿಸಿದ ಹಾಜಿ.ಎಚ್.ಬಿ.ಮುಹಮ್ಮದ್ಕಣ್ಣಂಗಾರ್ ಅಲ್ಲದೆ ಯು.ಎ.ಇ ಯ ಪ್ರಮಖ ಉದ್ಯಮಿ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷರಾದ ಡಾ.ತುಂಬೆ ಮೊಯಿದೀನ್, ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಮೆನೇಜಿಂಗ್ ಡೈರೆಕ್ಟರ್ ನೌಫಾಲ್ ಅಹಮದ್, ಮೊಯಿದೀನ್ ವುಡ್ ವರ್ಕ್ಸ್ ಮೆನೇಜಿಂಗ್ ಡೈರೆಕ್ಟರ್ ಅಶ್ರಫ್ ತುಂಬೆ ಅಲ್ಲದೆ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಹಾಗೂ ಬಹರೈನ್, ಓಮನ್ ರಾಷ್ಟ್ರಗಳ ನೇತಾರರು ಹಾಗೂ ಯು.ಎ.ಇ ಪ್ರಮಖ ಉದ್ಯಮಿಗಳು, ಸಾಮಾಜಿಕ ನೇತಾರರು ಆಗಮಿಸಲಿದ್ದಾರೆ. ವಿಶೇಷವಾಗಿ ಕಾರ್ಯಕ್ರಮದಲ್ಲಿ ತುಂಬೆ ಆಸ್ಪತ್ರೆ ವತಿಯಿಂದ ಅರೋಗ್ಯ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಕಾರ್ಯಕ್ರಮವು ಡಿ.ಕೆ.ಎಸ್.ಸಿಯು.ಎ.ಇ ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾ ದೊಂದಿಗೆ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಡಿ.ಕೆ.ಎಸ್.ಸಿ ಪ್ಯಾಮಲಿ ಮುಲಾಖತ್ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ರವರು ತಿಳಿಸಿರುತ್ತಾರೆ.

ಸ್ತ್ರೀಯರಿಗೆ ಪ್ರತೇಕ ಸ್ಥಳಾವಕಾಶ ಮಾಡಲಾಗಿದೆ , ನಮಾಝಿಗಾಗಿ ವಿಶೇಷ ವ್ಯವಸ್ಥೆ ಹಾಗು ಬೆಳಗ್ಗಿನ ಉಪಹಾರ ಮದ್ಯಾಹ್ನದ ಊಟ ರಾತ್ರಿಯ ಭೋಜನದ ವೆವಸ್ಥೆಇರುತ್ತದೆ .

ಪ್ರವೇಶ ಪತ್ರವು DKSC ಎಲ್ಲ ಯೂನಿಟ್ ಗಳಲ್ಲಿ ಲಭ್ಯವಿರುತ್ತದೆ ಹಾಗು ಹೆಚ್ಚಿನ ಮಾಹಿತಿಗಾಗಿ ಇ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು 050 724 0659/056 9349656 /050 8417475/ 055 1596353/050 7983573/ 056 2169881

Comments are closed.