ಗಲ್ಫ್

ಕೆ ಸಿ ಎಫ್ ದುಬೈ ನಾರ್ತ್ ಝೋನ್ ವತಿಯಿಂದ ಡಿಸೆಂಬರ್ 8 ರಂದು ಮೀಲಾದ್ ಸಮಾವೇಶ

Pinterest LinkedIn Tumblr

ಪುಣ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾವು ವಸಲ್ಲಮ್ ರವರ ಜನ್ಮ ದಿನಾಚರಣೆಯನ್ನು ಪರಿಶುದ್ಧ ರಬೀವುಲ್ ಅವ್ವಲ್ತಿಂಗಳಲ್ಲಿ ಇಡೀ ಜಗತ್ತು ಸಂಭ್ರಮದಿಂದ ಆಚರಿಸುವಾಗ ಕನ್ನಡಿಗ ಪ್ರವಾಸಿಗಳ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನಾರ್ತ್ ಝೋನ್ ಡಿಸೆಂಬರ್ 8 ರಂದು ದೇರಾ ನಗರದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಸಂಜೆ 6️ ರಿಂದ 11 ತನಕ ‘ ‘ಮೆಹಫಿಲೇ ಮುಸ್ತಫಾ ‘ ಎಂಬ ಹೆಸರಿನಲ್ಲಿ ಸಹಿಷ್ಟುನತೆಯ ಸಂದೇಶ ವಾಹಕ ಎಂಬ ಘೋಷ ವಾಕ್ಯದೊಂದಿಗೆ ಬ್ರಹತ್ ಮೀಲಾದ್ ಸಮಾವೇಶ ನಡೆಯಲಿದೆ ಎಂದು ಮೀಲಾದ್ ಸ್ವಾಗತ ಸಮಿತಿ ಚೈರ್ಮಾನ್ ಜನಾಬ್ ಅಶ್ರಫ್ ಹಾಜಿ ಅಡ್ಯಾರ್ ತಿಳಿಸಿದರು .

ಕೆ ಸಿ ಎಫ್ ನಾರ್ತ್ ಝೋನ್ ವತಿಯಿಂದ ನಡೆಯಲಿರುವ ಮೀಲಾದ್ ಸಮಾವೇಶದ ಪತ್ರಿಕಾ ಗೋಷ್ಠಿ ಇತ್ತೀಚಿಗೆ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತ್ತು.

ಪ್ರಸ್ತುತ ಸಮಾವೇಶದಲ್ಲಿ ದುವಾ ಆಶಿರ್ವಾಚನನೀಡಲು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಯು ಪ್ರಖ್ಯಾತ ಆಧ್ಯಾತ್ಮಿಕ ಗುರುವರ್ಯರು ಆದ ಸಯ್ಯದುನ ಫಝಲ್ ಕೋಯಮ್ಮ ತಂಗಳ್ ಕೂರತ್ ಆಗಮಿಸಲಿದ್ದಾರೆ.

ಮುಖ್ಯ ಪ್ರಭಾಷಣಗಾರರಾಗಿ ದಾರುಲ್ ಆಶ್ ಆರಿಯ ಜನರಲ್ ಮೆನೇಜರ್ ಬಹು : ಮುಹಮ್ಮದ್ ಅಲಿ ಸಖಾಫಿ ಭಾಗವಹಿಸಲಿದ್ದಾರೆ , ಕರ್ನಾಟಕ ರಾಜ್ಯ SYS ರಾಜ್ಯಾಧ್ಯಕ್ಷರಾದ ಬಹು : ಜಿಮ್ ಮುಹಮ್ಮದ್ ಕಾಮಿಲ್ ಸಖಾಫಿ ಪ್ರಸ್ತುತಸಮಾವೇಶದಲ್ಲಿ ಸಂದೇಶ ಭಾಷಣ ಮಾಡಲಿದೆ ಅಲ್ಲದೆ ದುಬೈ ಅರಬ್ ಪೌರರು ಸಮೇತ ಸಾಮಾಜಿಕ , ಧಾರ್ಮಿಕ ರಂಗದ ಗಣ್ಯರು ಭಾಗವಹಿಸಲಿದೆ. ಕಾರ್ಯಕ್ರಮದಲ್ಲಿ ವಿಶೇಷ ತರಬೇತಿ ಹೊಂದಿದ ತಂಡದಿಂದ ಬುರ್ದಾ ಆಲಾಪನೆಯು ನಡೆಯಲಿದೆ ಎಂದು ತಿಳಿಸಿದರು ಪತ್ರಿಕಾ ಗೋಷ್ಠಿಯಲ್ಲಿಝೋನ್ ಪ್ರೆಸಿಡೆಂಟ್ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮೊಗೇರು ,ಸಂಘಟನಾ ವಿಭಾಗದ ಛೇರ್ಮನ್ ಅಬ್ದುಲ್ ಅಝೀಝ್ ಲತೀಫಿ , ಕೆ ಸಿ ಎಫ್ ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್ , ಹಾಜಿ ಮೂಸ ಬಸರ, ಉಪಸಿತರಿದ್ದರು ಕೊನೆಯಲ್ಲಿ ಸ್ವಾಗತ ಸಮಿತಿ ಜನರಲ್ ಕನ್ವಿನರ್ ಹಾಜಿ ನವಾಝ್ ಕೋಟೆಕ್ಕಾರ್ ವಂದಿಸುದರೊಂದಿಗೆ ಪತ್ರಿಕಾ ಗೋಷ್ಠಿ ಕೊನೆಗೊಳಿಸಲಾಯಿತು .

Comments are closed.