ಗಲ್ಫ್

ಅದ್ಧೂರಿಯಾಗಿ ವಿಜೃಂಭಿಸಿದ ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ

Pinterest LinkedIn Tumblr

Photo: Ashok Belman

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಕರ್ನಾಟಕ ಸಂಘ ಶಾರ್ಜಾ 15ನೇ ವಾರ್ಷಿಕೋತ್ಸವ ಮತ್ತು “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ” ಪ್ರಧಾನ ಸಮಾರಂಭ 2017 ನವೆಂಬರ್ 17ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.

 

ಕನ್ನಡ ಧ್ವಜರೋಹಣದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಶರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಸಂಘದ ಪೋಷಕರಾದ ಶ್ರೀ ಮಾರ್ಕ ಡೆನಿಸ್ ಡಿ’ಸೋಜಾ ರವರು ಧ್ವಜ ಅರಳಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಸಲಹೆಗಾರರಾದ ಶ್ರೀ ಎಂ. ಇ. ಮೂಳೂರು ರವರು ಶುಭ ಸಂದೇಶವನ್ನು ನೀಡಿದರು.

ಕ್ಲಾಸಿಕಲ್ ರಿದಂಸ್ ತಂಡದ ವತಿಯಿಂದ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ರಾಡಿಕಲ್ ಡ್ಯಾನ್ಸ್ ಸ್ಟುಡಿಯೋ ತಂಡ, ಬಿಲ್ಲಾವಾಸ್ ದುಬಾಯಿ ತಂಡದವರ ನೃತ್ಯ ಹಾಗೂ ಊರಿನಿಂದ ಅತಿಥಿಯಾಗಿ ಆಗಮಿಸಿದ ಗಾಯಕಿ ಕು. ಲಹರಿ ಕೋಟ್ಯಾನ್, ಯು.ಎ.ಇ. ಮಟ್ಟದಲ್ಲಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಗಾಯಕ ಗಾಯಕಿರಾದ ಕು. ಸನ್ನಿಧಿ ವಿಶ್ವನಾಥ್ ಶೆಟ್ಟಿ, ಶ್ರೀಮತಿ ಮಧುರಾ ವಿಶ್ವನಾಥ್, ಶ್ರೀ ಶಾಹಿದ್ ಶಹಬಾಜ್ , ಗಲ್ಫಿನ ಖ್ಯಾತ ಉದ್ಯಮಿ, ಸಿನೆಮಾ ನಿರ್ಮಾಪಕ ಹಾಗು ಹೆಸರಾಂತ ಗಾಯಕ ಆಗಿರುವ ಶ್ರೀ ಹರೀಶ್ ಶೇರಿಗಾರ್, ಶ್ರೀಮತಿ ಸಾಯಿ ಮಲ್ಲಿಕಾ, ಕು. ಅಕ್ಷತಾ ರಾವ್ ಹಾಗೂ ಕು. ಅಮೋಘ ವರ್ಷ ಇವರುಗಳು ತಮ್ಮ ಸುಮಧುರ ಕಂಠದಿಂದ ಕನ್ನಡ ಚಲನಚಿತ್ರ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಜ್ಯೋತಿ ಬೆಳಗಿಸುವುದರ ಮೂಲಕ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಸಮಾರಂಭಕ್ಕೆ ಚಾಲನೆ ನೀಡಿದರು. ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸುಗಂಧ ರಾಜ್ ಬೇಕಲ್ ಸರ್ವರನ್ನು ಸ್ವಾಗತಿಸಿದರು.

 

2004 ರಿಂದ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕಾರ ಪಡೆದಿರುವವರನ್ನು ವೇದಿಕೆಗೆ ಬರಮಾಡಿಕೊಂಡು ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಯು. ಟಿ. ಖಾದರ್ ರವರು ಪದಕ ಪ್ರಧಾನಿಸಿದರು. ಪದಕ ಪಡೆದಿರುವ ಪುರಸ್ಕೃತರು ಶ್ರೀಮತಿ ಸುಜಾತ ಶ್ಯಾಂ ಸುಂದರ್, ಶ್ರೀಯುತರುಗಳಾದ ಮಾರ್ಕ ಡೆನಿಸ್ ಡಿ’ಸೋಜಾ, ಇರ್ಶಾದ್ ಮೂಡಬಿದ್ರಿ, ಬಿ. ಜಿ. ಮೋಹನ್ ದಾಸ್, ಬಿ. ಕೆ. ಗಣೇಶ್ ರೈ, ಪ್ರಕಾಶ್ ರಾವ್ ಪಯ್ಯಾರ್, ಜೇಮ್ಸ್ ಮೆಂಡೋನ್ಸಾ, ಶೋಧನ್ ಪ್ರಸಾದ್, ಹರೀಶ್ ಶೇರಿಗಾರ್, ಎಂ. ಇ. ಮೂಳೂರ್, ಸುಧೀರ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಜೋಸೆಫ್ ಮಥಿಯಸ್.

ಪ್ರತಿಷ್ಠಿತ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರಧಾನ

ಕರ್ನಾಟಕ ಸಂಘ ಶಾಜಾ ಪ್ರತಿವರ್ಷ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಯನ್ನು ಡಾ. ಬಿ. ಆರ್. ಶೆಟ್ಟಿಯವರು ಮತ್ತು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಮಾನ್ಯ ಸಚಿವರಾದ ಶ್ರೀ ಯು. ಟಿ. ಖಾದರ್ ಅಹ್ವಾನಿತ ಅತಿಥಿಗಳು, ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಸಮ್ಮುಖದಲ್ಲಿ ಪ್ರಧಾನಿಸಿದರು. ಸಮಾರಂಭದಲ್ಲಿ ಗೌರವ ಅತಿಥಿಗಳಾದ ವಂದನೀಯ ಗುರುಗಳಾದ ಮ್ಯಾಕ್ಸಿಮ್ ಪಿಂಟೊ, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವಕೇಟ್ ವೈ. ಎ. ರಹೀಂ, ಯು. ಎ. ಇ. ಎಕ್ಸ್ಚೆಂಜ್ ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಅಜ್ಮಾನ್ ಗಲ್ಫ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ಡಾ. ಸದಾಶಿವ ಬಂಗೇರಾ, ಪ್ರಮುಖ ಪ್ರಾಯೋಜಕರು ಶ್ರೀ ಹರೀಶ್ ಶೇರಿಗಾರ್, ಕರ್ನಾಟಕ ಸಂಘ ಶಾರ್ಜಾ ಪೋಷಕರು ಶ್ರೀ ಮಾರ್ಕ್ ಡೆನಿಸ್ ಡೆನಿಸ್, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸುಗಂಧ ರಾಜ್ ಬೇಕಲ್ ಸನ್ಮಾನ ಪ್ರಕ್ರೀಯೆಯಲ್ಲಿ ಭಾಗಿಗಳಾಗಿದ್ದರು. ಗಣ್ಯ ಅತಿಥಿಗಳನ್ನು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಇರ್ಷಾದ್ ಮೂಡಬಿದರೆಯವರು ಸನ್ಮಾನ ಸಮಾರಂಭಕ್ಕೆ ರಚಿಸಿದ ಚುಟುಕುಗಳನ್ನು ವಾಚಿಸಿ ಶ್ರೀ ಬಿ. ಕೆ. ಗಣೇಶ್ ರೈ ಕಾರ್ಯಕ್ರಮ ನಿರೂಪಣೆ ಕಾರ್ಯವನ್ನು ನೆರವೇರಿಸಿದರು.

ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶ್ರೀ ಶಶಿಕಾಂತ್ ದಂಪತಿಗಳಿಗೆ ಸನ್ಮಾನ

ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶ್ರೀ ಶಶಿಕಾಂತ್ ಹಾಗೂ ಶ್ರೀಮತಿ ಲತಾ ಶಶಿಕಾಂತ್ ಕಾನಂಗಿ ದಂಪತಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲಾವಿದರು ಗುರುಗಳಾದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ರವರಿಗೆ “ಯಕ್ಷ ಮಯೂರ” ಬಿರುದು ಪ್ರಧಾನ
ಯು.ಎ.ಇಯಲ್ಲಿ ಹಲವಾರು ವರ್ಷಗಳಿಂದ ಯಕ್ಷಗಾನ ಕಲೆಗೆ ಶಾಸ್ತ್ರೀಯ ಸ್ಪರ್ಶ ನೀಡಿ ಮಕ್ಕಳಿಂದ ವಿವಿಧ ವಯೋಮಿತಿಯ ಹವ್ಯಾಸಿ ಕಲಾವಿದರನ್ನು ಪೂರ್ಣ ಪ್ರಮಾಣದ ಕಲಾವಿದರನ್ನಾಗಿ ತಯಾರುಗೊಳಿಸಿರುವ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ರವರಿಗೆ “ಯಕ್ಷ ಮಯೂರ” ಬಿರುದು ಪ್ರಧಾನಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಗೌರವ ಅತಿಥಿಗಳಿಗೆ ಗೌರವ ಸಮರ್ಪಣೆ
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಬಿ. ಆರ್. ಶೆಟ್ಟಿಯವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶೀ ಯು. ಟಿ. ಖಾದರ್ ರವರಿಗೆ, ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್ ಪಿಂಟೊ, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವಕೇಟ್ ವೈ. ಎ. ರಹೀಂ, ಜಿ.ಎಂ.ಸಿ. ಹಾಸ್ಪಿಟಲ್ ಡಾ. ಸದಾಶಿವ ಬಂಗೆರಾ, ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಭಾಗಿಗಳಾಗಿರುವ ಕಲಾವಿದರು, ಗಾಯಕರು, ಪ್ರಾಯೋಜಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜನಮನ ಸೆಳೆದ “ಮಯೂರ ನಾಟ್ಯ ಮಂಜರಿ” ಯು.ಎ.ಇ. ಮಟ್ಟದ ಕನ್ನಡ ಸಮೂಹ ನೃತ್ಯ ಸ್ಪರ್ಧೆ

ಸಂಘಟನೆಗಳ ನೃತ್ಯ ತಂಡಗಳಿಗೆ ಯು.ಎ.ಇ. ಮಟ್ಟದಲ್ಲಿ ಕನ್ನಡ ಸಮೂಹ ನೃತ್ಯ ಸ್ಪರ್ಧೆಯನ್ನು ಶ್ರೀಮತಿ ಸುಜಾತ ಶ್ಯಾಂಸುಂದರ್ ರಾವ್, ಶ್ರೀಮತಿ ಸೌಮ್ಯ ಸುಧೀರ್, ಶ್ರೀ ಗುರುವಿಂದರ್ ಸಿಂಗ್ ರವರು ತೀರ್ಪುಗಾರರಾಗಿ ಸ್ಪರ್ಧೆಯನ್ನು ನಡೆಸಿಕೊಟ್ಟರು. “ಮಯೂರ ನಾಟ್ಯ ಮಂಜರಿ” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ತಂಡ ಒಶಿಯನ್ ಕಿಡ್ಸ್, ನಂತರದ ಸ್ಥಾನಗಳು ನಾಟ್ಯ ಲಾಸ್ಯ, ರಿದಂಸ್ ಶಾರ್ಜಾ, ಅತ್ಯುತ್ತಮ ನೃತ್ಯ ನಿರ್ದೇಶನ ಒಶಿಯನ್ ಕಿಡ್ಸ್ ನ ಪ್ರವೀಣ್, ಅತ್ಯುತ್ತಮ ಪ್ರದರ್ಶನ ನೀಡಿರುವ ತಂಡ ಒಶಿಯನ್ ಕಿಡ್ಸ್. ಸಮಾರಂಭದ ಕೊನೆಯಲ್ಲಿ ಪ್ರಶಸ್ತಿ ಬಹುಮಾನ ನೀಡಿ ಗೌರವಿಸಲಾಯಿತು.

ಯಕ್ಷಮಿತ್ರರು ಬಾಲಕಲಾವಿದರ “ದಾಶರಥಿ ದರ್ಶನ” ಅದ್ಭುತ ಯಕ್ಷಗಾನ ಪ್ರದರ್ಶನ

ಯಕ್ಷಮಿತ್ರರು ಅರ್ಪಿಸಿದ ಶ್ರೀ ಶೇಖರ್ ಡಿ ಶೆಟ್ಟಿಗಾರ್ ನಿರ್ದೇಶನದಲ್ಲಿ, ಬಾಲಕಲಾವಿದರ “ದಾಶರಥಿ ದರ್ಶನ” ಅದ್ಭುತ ಯಕ್ಷಗಾನ ಪ್ರದರ್ಶ ಪ್ರೇಕ್ಷಕರ ಅಭಿನಂದನೆಗೆ ಪಾತ್ರವಾಯಿತು. ಯಶಸ್ವಿ ಪ್ರದರ್ಶನದ ನಂತರ ಯಕ್ಷಮಿತ್ರರು ಸಂಘಟನೆ ಪ್ರಮುಖರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರನ್ನು ಗೌರವಿಸಲಾಯಿತು.

ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ಅತ್ಯಂತ ಸೊಗಸಾಗಿ ನಿರೂಪಣೆ ಮಾಡಿದವರು ಶ್ರೀಮತಿ ಆರತಿ ಆಡಿಗ ಮತ್ತು ಊರಿನಿಂದ ಅತಿಥಿಯಾಗಿ ಆಗಮಿಸಿದ ಶ್ರೀ ಯೋಗೇಶ್ ನಿರ್ಜಾನ್ ರವರು.

ಕರ್ನಾಟಕ ಸಂಘ ಶಾರ್ಜಾದ ಸರ್ವ ಸದಸ್ಯರ ಹಲವು ದಿನಗಳ ಪೂರ್ವ ತಯಾರಿ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

ಬಿ. ಕೆ. ಗಣೇಶ್ ರೈ

Comments are closed.