ಗಲ್ಫ್

ದುಬೈಯಲ್ಲಿ ಯಶಸ್ವಿಯಾಗಿ ನಡೆದ ” ಮೂಳೂರು ಜಮಾಅತ್ ವೆಲ್ಫೇರ್ ಫೋರಮ್ ಮೀಟ್ 2017 “

Pinterest LinkedIn Tumblr

ದುಬೈ: ಸಮುದಾಯದ ಅಭಿವೃದ್ಧಿ ಹಾಗು ಜಮಾಅತಿನ ಉನ್ನತಿಯ ದಿಸೆಯಲ್ಲಿ  ದುಬೈಯಲ್ಲಿ ಹುಟ್ಟಿಕೊಂಡಿರುವ ಮೂಳೂರು ಜಮಾಅತ್ ವೆಲ್ಫೇರ್ ಫೋರಮ್ (ಎಂಜೆಡಬ್ಲ್ಯೂಎಫ್)ನ ಸಭೆ ಶುಕ್ರವಾರ ದುಬೈಯ  ಮುಸಲ್ಲಾ ಟವರ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಯುಎಇ ಯಲ್ಲಿ ವಾಸಿಸುತ್ತಿರುವ ಮೂಳೂರು ಜಮಾಅತ್ ಗೆ ಒಳಪಟ್ಟ ಮೂಳೂರು ಮತ್ತು ಪರಿಸರದ ಇತರ ಪ್ರದೇಶದ ಅನಿವಾಸಿ ಕನ್ನಡಿಗರನ್ನು ಒಂದು ಗೂಡಿಸಿ ಶೈಕ್ಷಣಿಕ, ಧಾರ್ಮಿಕ ಸಾಂಸ್ಕೃತಿಕ ಮೊದಲಾದ ಕ್ಷೇತ್ರದಲ್ಲಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಉದೇಶದ ಜೊತೆಗೆ ಜುಮಾ ಮಸೀದಿ ಹಾಗೂ ಜಮಾಅತ್ ಗೆ ಒಂದು ಸ್ಥಾಯಿ ವರಮಾನ ಬರುವಂತೆ ಏನಾದರೂ ಯೋಜನೆಯನ್ನು ರೂಪಿಸಿ ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ನಿರೀಕ್ಷೆಗೂ ಮೀರಿ ಮೂಳೂರು ಜಮಾಅತಿನ ಹಾಗು ಸುತ್ತಮುತ್ತಲಿನ ಹಿತೈಷಿಗಳು ಭಾಗವಹಿಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಿದರು.
ಜ: ನೌಫಾಲ್ ಮೂಳೂರು ಅವರ ಕಿರಾತ್ ನೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಹು:  ಕೋಟೇಶ್ವರ ಜಾಫರ್ ತಂಗಳ್ ಅವರ ದುವಾದೊಂದಿಗೆ ಆರಂಭಗೊಂಡಿತು.

MJWF ಇದರ ಪ್ರಧಾನ ಕಾರ್ಯ ದರ್ಶಿ ಜನಾಬ್ ಇಬ್ರಾಹಿಂ ಕಳತೂರು ಸ್ವಾಗತ ಭಾಷಣ ಮಾಡುತ್ತಾ ಅತಿಥಿಗಳ ಪರಿಚಯ ನೀಡುತ್ತಾ ಸ್ವಾಗತಿಸಿದರು ಹಾಗೂ MJWF ಇದರ  ಸ್ಥೂಲ ಪರಿಚಯ ನೀಡಿದರು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಊರಿನಿಂದ ಆಗಮಿಸಿದ್ದ ಮೂಳೂರು ಜುಮ್ಮಾ ಮಸ್ಜಿದ್ ಖತೀಬ್ ಬಹು: ಅಲ ಹಾಜ್ ಅಬ್ದುಲ್ ರಹ್ಮಾನ್  ಮದನಿ ಅವರು ಕಾರ್ಯಕ್ರಮದ ಉದ್ಘಾಟನೆಗೈದರು. ಅವರು ತಮ್ಮ ಪ್ರಭಾಷಣದಲ್ಲಿ ಇಸ್ಲಾಮ್ ಸಮಾಜ ಸೇವೆಗೆ ಕೊಟ್ಟ ಮಹತ್ವದ ಬಗ್ಗೆ ಸವಿವರವಾಗಿ ತಿಳಿ ಹೇಳಿದರು. ಈ ಪರಊರು ಗಲ್ಫ್ ಪ್ರದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ದೇಶ ಪ್ರೇಮ ಹಾಗೂ ಜನ ಪರ ಕಾಳಜಿಯನ್ನು ಪ್ರಶಂಶಿಸುತ್ತಾ ಇನ್ನು ಮುಂದೆಯೂ ಇದೆ ರೀತಿ ಮಾನವೀಯ ನೆಲೆಯಲ್ಲಿ ಸಮಾಜದ ಅಗತ್ಯಕ್ಕೆ ಸ್ಪಂದಿಸುತ್ತಾ MJWF ಇದರ ಕನಸಾದ ಸ್ಥಾಯಿ ವರಮಾನ ಒದಗಿಸುವ ಕಟ್ಟಡದ ನಿರ್ಮಾಣಕ್ಕೆ ಎಲ್ಲರೂ ಸಹಕರಿಸ ಬೇಕೆಂದು ಕೋರಿದರು.

ಅಂದಿನ ಕಾರ್ಯಕ್ರಮಕ್ಕಾಗಿ ವಿಶೇಷ ಅತಿಥಿಯಾಗಿ ಊರಿನಿಂದ ಆಗಮಿಸಿದ್ದ ಮೂಳೂರು ಜಮಾತ್ ಅಧ್ಯಕ್ಷರಾದ ಬಹು: ಅಲ ಹಾಜ್ M H B ಮಹಮ್ಮದ್ ರವರು ತಮ್ಮ  ಪ್ರಾಸ್ತಾವಿಕ ಭಾಷಣದಲ್ಲಿ ಮುಳೂರು ಜಮಾತಿನ ಸಮಗ್ರ ಪರಿಚಯ ಹಾಗೂ ಮುಂದಿನ ಅಭಿವರ್ಧಿ ಯೋಜನೆಗಳತ್ತ ಬೆಳಕು ಚೆಲ್ಲಿ ಸಂಕ್ಷಿಪ್ತ ವಿವರ ನೀಡಿದರು. ಹಲವಾರು ಅವಧಿಗಳಿಲ್ಲಿ ಮೂಳೂರು ಜಮಾತಿನ ಅಧ್ಯಕ್ಷರಾಗಿ ತಮ್ಮ ಕಾರ್ಯಾಯಾವಧಿಯಲ್ಲಿ ತಾವು ಕೈಕೊಂಡ ಹಲವಾರು ಜಮಾತ್ ಮತ್ತು ಮಸೀದಿಯ ಅಭಿವ್ರಿದ್ಧಿ ಯೋಜನೆಗಳಲ್ಲಿ ತನಗೆ ಸಹಾಯ ಮಾಡಿದವನ್ನು ಸ್ಮರಿಸಿದರು.

ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಗೌರವಾಧ್ಯಕ್ಷ ರಾದ ಜ: M.E.ಮೂಳೂರು ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಇದರ ಧ್ಯೇಯ ಧೋರಣೆಗಳ ವಿಚಿವರಣೆ ನೀಡುತ್ತಾ ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಕೇಂದ್ರವಾಗಿ ಮೂಳೂರು ಜಮಾತಿನ ಪಾತ್ರ ಹಾಗೂ  ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಾ ಮೂಳೂರಿನ ಸುಧೀರ್ಘ ಇತಿಹಾಸದತ್ತ ಬೆಳಕು ಚೆಲ್ಲಿ ಅಂತಹ ಒಂದು ಘನವೆತ್ತ ಜಮಾತಿನ ಸದಸ್ಯರಾಗಿ ನೆರವೇರಿಸ ಬೇಕಾದ ಕರ್ತವ್ಯದ ಬಗ್ಗೆ  ಒತ್ತಿ ಹೇಳಿದರು.

ಮೂಳೂರು ಜಮಾತಿಗೆ ಒಂದು ಸ್ಥಾಯಿ ವರಮಾನ ಬರುವಂತೆ ಯೋಜಿಸಲಾದ ಕಟ್ಟಡಕ್ಕೆ ಬೇಕಾಗಿ 50 ಸೆಂಟ್ಸ್ ಸ್ಥಳವನ್ನು ಉದಾರ ದಾನ ಮಾಡಿದ ಮೊಹಮ್ಮದ್ ಯೂಸುಫ್ ಮೂಳೂರು ಅವರಿಗೆ ಅಲ್ಲಾಹು ಆಯುರಾರೋಗ್ಯ ವನ್ನು ನೀಡಲಿ ಎಂದು ಪ್ರಾರ್ಥಿಸಿದರು ಹಾಗೂ ಈ ಸ್ಥಳದಲ್ಲಿ ಒಂದು ಕಟ್ಟಡ ಸಮುಚ್ಛಯವನ್ನು ನಿರ್ಮಿಸುವರೇ ಎಲ್ಲರೂ ಸಾಧ್ಯವಾದಷ್ಟು ಎಲ್ಲರೂ ಕೈ ಜೋಡಿಸ ಬೇಕೆಂದು ಕೋರಿದರು.

ಮೂಳೂರು ಜಮಾಅತ್ ವೆಲ್ಫೇರ್ ಫೋರಮ್ (ಎಂಜೆಡಬ್ಲ್ಯೂಎಫ್ ) ಅಧ್ಯಕ್ಷರಾದ ಮುಹಮ್ಮದ್ ಯೂಸುಫ್ ಮೂಳೂರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಭೆಯನ್ನುದ್ದೇಶಿಸಿ ಮಾತಾಡುತ್ತಾ ತಾನು ಹುಟ್ಟಿ ಬೆಳೆದು ಬಂದ ಹಾಗೂ ತನ್ನ ಹಿರಿಯರು ಅಂತ್ಯ ವಿಶ್ರಮಿಸಿದ ಆ ಮೂಳೂರು ಜಮಾತಿನ ಪ್ರತಿ ತನ್ನ ಜವಾಬ್ದಾರಿಯ ಬಗ್ಗೆ ಪ್ರಸ್ತಾಪಿಸುತ್ತಾ ಇಂತಹ ಒಂದು ದಾನ ಜಮಾತಿಗಾಗಿ ಮಾಡಲು ಒದಗಿಸಿ ಕೊಟ್ಟ ಅಲ್ಲಾಹುವಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಮುಂದಕ್ಕೆ ನಿರ್ಮಾಣವಾಗಲಿರುವ ವಸತಿ ಸಮುಚ್ಚಯದ ಕಾರ್ಯಕ್ಕೆ ಎಲ್ಲರೂ ಸಹಕರಿಸ ಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ “ಅಲ್ ಖಮರ್ ವೆಲ್ಪೇರ್ ಎಸೋಸಿಯೇಶನ್ ದುಬೈ” ಇದರ ಅಧ್ಯಕ್ಷ ಜ: ಅಬ್ದುಲ್  ಸಮದ್ ಬೀರಾಲಿ,  ದುಬೈ ಬ್ಯಾರೀಸ್ ಕಲ್ಚರಲ್ ಫೋರಮ್’ನ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, DKSC ಮತ್ತು BCF  ಉಪಾಧ್ಯಕ್ಷ  ಜ:  ಲತೀಫ್ ಮುಲ್ಕಿ, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ UAE  ಪ್ರಧಾನ ಕಾರ್ಯದರ್ಶಿಜ: ಯೂಸುಫ್ ಆರ್ಲಪದವು,  ಅಬುಧಾಬಿ BWF ಇದರ ಪದಾಧಿಕಾರಿ ಮೊಹಮ್ಮದ್ ಸಿದ್ದಿಕ್ ಉಮರ್,  ತವಕ್ಕಲ್ ಓವರ್ಸೀಸ್ ಮತ್ತು  ಅಲ್ ಇಸ್ಲಾಮೀಯ ಅಸೋಸಿಯೇಷನ್ ಇದರ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗಕ್ಕಿವಹಿಸಿದ್ದರು. ಡಾ ಕಾಪು ಮಹಮ್ಮದ್, ಜ ಅಬ್ದುಲ್ ಲತೀಫ್ ಮುಲ್ಕಿ  ಹಾಗೂ ಜ ಯೂಸುಫ್ ಅರ್ಲಪದವು ರವರು ಸಮಯೋಚಿತವಾಗಿ ಮಾತಾಡಿದರು.

ಈ ಸಂದರ್ಭದಲ್ಲಿ ಮೂಳೂರು ಜಮಾತ್ ಖತೀಬ್ ಅಲ್ ಹಾಜ್ ಅಬ್ದುಲ್ ರಹ್ಮಾನ್ ಅಲ್ ಮದನಿ, ಜಮಾತ್ ಪ್ರೆಸಿಡೆಂಟ್ ಅಲ್ ಹಾಜ್ M H B ಮೊಹಮ್ಮದ್ ಹಾಗೂ ಕಳೆದ ಸುಮಾರು 25 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಕ್ಷೇತ್ರದಲ್ಲಿ ಗಣನೀಯವಾದ ಸಮಾಜ ಸೇವೆಯನ್ನು ಸದ್ದಿಲ್ಲದೇ ಮಾಡುತ್ತಿದ್ದು ಸಮಾಜ ಸೇವೆಗೆ ಸಂಬಂಧಪಟ್ಟಂತೆ  ಮೂಳೂರಿನ ಆಸುಪಾಸಿನ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಹಾಗೂ MJWF ನ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಂತೆ ಬಹಳಷ್ಟು ಸಹಕರಿಸಿದ ಅಲ್ ಕಮರ್ ವೆಲ್ಫೇರ್ ಅಸೋಸಿಯೇಷನ್ ( AQWA)  ಅನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯ ಕ್ರಮ ಯಶಸ್ವಿಯಾಗುವಂತೆ MJWF ದಾಧಿಕಾರಿಗಳೊಂದಿಗೆ ಅಲ್ ಕಮರ್ ಅಸೋಸಿಯೇಷನ್ ಇದರ  ಅಧ್ಯಕ್ಷ ರಾದ ಅಬ್ದುಕ್ಲ್ ಸಮದ್ ಬೀರಾಲಿ  ಮತ್ತು ಪದಾಧಿಕಾರಿಗಳಾದ ಅಮಾನುಲ್ಲಾ ಅಹ್ಮದ್, ಇಕ್ರಂ ಮಹಮೂದ್, ಜುನೈದ್, ಹಂಝ ಹಮ್ಮಬ್ಬ, ಸುಲೇಮಾನ್ ಮೂಳುರ್,  ಸಮೀರ್, ಲತೀಫ್ ಬಾಬಾ ಮುಸಬ್ಬ, ಅಬ್ದುಲ್ ಹಮೀದ್ ಮಹಮೂದ್, ಅಬ್ದುಲ್ ರಶೀದ್ ಮಹಮೂದ್ ಶಾಬಾನ್, ಹಾಗೂ  ಇತರ ಹಲವಾರು ಸಹ್ರದಯೀ ತರುಣರು ಸಹಕರಿಸಿದ್ದರು.

ಸಭೆಗೂ ಮುನ್ನ ಅಲ್ ಖಮರ್ ವೆಲ್ಪೇರ್ ಎಸೋಸಿಯೇಶನ್ನ ಸದಸ್ಯರಿಂದ ಅತ್ಯಾಕರ್ಷಕ ದಫ್ ಕಾರ್ಯಕ್ರಮ ನಡೆಯಿತು. Mr.ಜಾಬೀರ್ ಹಕೀಮ್  ಕಾರ್ಯಕ್ರಮವನ್ನು ನಿರೂಪಿಸಿದರು.   ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಳತೂರು ಧನ್ಯವಾದ ಸಮರ್ಪಣೆ ಗೈದರು. ರಾತ್ರಿಯ ಭೋಜನದ ವ್ಯವಸ್ಥೆಯನ್ನು  ಏರ್ಪಡಿಸಲಾಗಿತ್ತು.

Comments are closed.