Photo: Ashok Belman
ದುಬೈ: ಇಲ್ಲಿನ ದುಬೈ ಬಿಲ್ಲವ ಫ್ಯಾಮಿಲಿಯ 20ನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದುಬೈಯ ಕರಾಮದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಮಿನಲ್ಲಿ ಶುಕ್ರವಾರದಂದು ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಮುಂಬೈಯ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಏನ್.ಟಿ.ಪೂಜಾರಿ, ಮಂಗಳೂರು ಶ್ರೀ ಗುರು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷಚಂದ್ರಶೇಖರ್, ಓಮನ್ ಬಿಲ್ಲವ ಸಂಘದ ಅಧ್ಯಕ್ಷ ಯಸ್.ಕೆ.ಪೂಜಾರಿ, ಹರೀಶ್ ಅಮೀನ್ ಹಾಗು ವಿಶೇಷ ಅತಿಥಿಯಾಗಿ ನಟ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಪೂಜಾರಿ ವಹಿಸಿದರು. ದೀಪ ಬೆಳಗಿಸುವ ಮೂಲಕ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಕಟ್ಟೆ ತಂಡದವರಿಂದ ಹಾಸ್ಯ ಕಾರ್ಯಕ್ರಮ ಹಾಗು zee ಟಿವಿಯ ಸರಿಗಮ ಖ್ಯಾತಿಯ ಲಹರಿ ಕೋಟ್ಯಾನ್ ತಮ್ಮ ಸುಮಧುರ ಕಂಠದ ಮೂಲಕ ಸಂಗೀತದ ಸುಧೆ ಹರಿಸಿದಳು.
ಜೊತೆಗೆ ದುಬೈಯವರೇ ಆದ ರಮೇಶ್ ಸುವರ್ಣ ತಂಡವರಿಂದ ಹಾಸ್ಯಮಯ ಕಾರ್ಯಕ್ರಮ ಹಾಗು ಬಿಲ್ಲವ ಸಮುದಾಯದ ಯುವಕ-ಯುವತಿಯರಿಂದ, ಮಕ್ಕಳಿಂದ ವಿವಿಧ ರೀತಿಯ ಡ್ಯಾನ್ಸ್, ಮನೋರಂಜನಾನಾ ಕಾರ್ಯಕ್ರಮ ಪ್ರದರ್ಶನ ಗೊಂಡಿತು.
ಇದೇ ಸಂದರ್ಭದಲ್ಲಿ ರಾಜಶೇಖರ ಕೋಟ್ಯಾನ್, ಸುನಿಲ್ ಕುಮಾರ್, ಲಹರಿ ಕೋಟ್ಯಾನ್ ಹಾಗು ಉಮಾನಾಥ್ ಕೋಟ್ಯಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಫ್ಯಾಮಿಲಿಯ ಜೀತೆಂದ್ರ ಸುವರ್ಣ, ಮೋಹನ್ ಅತ್ತಾವರ್, ಪ್ರಕಾಶ್ ಪೂಜಾರಿ, ದೀಪಕ್ ಪೂಜಾರಿ, ಆನಂದ್ ಬೈಲೂರು ಉಪಸ್ಥಿತರಿದ್ದರು.