ಗಲ್ಫ್

ರೊಬಾಟ್‌ಗೆ ಪೌರತ್ವ ನೀಡಿದ ಸೌದಿ ಅರೇಬಿಯಾ

Pinterest LinkedIn Tumblr


ಹೊಸದಿಲ್ಲಿ: ಸೌದಿ ಅರೇಬಿಯಾ ಸರಕಾರ ಒಂದು ರೊಬಾಟ್‌ಗೆ ತನ್ನ ಪೌರತ್ವವನ್ನು ಕೊಟ್ಟು ಚಕಿತಗೊಳಿಸಿದೆ!

ವಿಶ್ವದಲ್ಲಿಯೇ ಇದೇ ಮೊದಲ ಬಾರಿಗೆ ರೊಬಾಟ್‌ ಒಂದಕ್ಕೆ ಪೌರತ್ವವನ್ನು ನೀಡಲಾಗಿದೆ ಎಂದು ಸೌದಿ ಅರೇಬಿಯಾದ ನಾಯಕರು ಹೇಳಿಕೊಂಡಿದ್ದಾರೆ. ಭವಿಷ್ಯದಲ್ಲಿ ತೈಲ ಅವಲಂಬನೆಯ ಬದಲಿಗೆ ಇತರ ಕ್ಷೇತ್ರಗಳಲ್ಲಿ ದಾಪುಗಾಲಿಡಲು ತವಕಿಸುತ್ತಿರುವ ಸೌದಿ, ತನ್ನ ಮಹತ್ವಾಕಾಂಕ್ಷೆ ಸಾರಲು ಹಾಗೂ ಇತರ ದೇಶಗಳನ್ನು ಪ್ರಭಾವಿತಗೊಳಿಸಲು ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಸೌದಿ ಅರೇಬಿಯಾದಲ್ಲಿ ನಿಯೋಮ್‌ ಎಂಬ ಹೊಸ ಆರ್ಥಿಕ ವಿಶೇಷ ವಲಯ ನಿರ್ಮಾಣದ ಘೋಷಣೆಯ ಸಂದರ್ಭ, ಸೋಫಿಯಾ ಎಂಬ ಹೆಸರಿನ ರೊಬಾಟ್‌ಗೆ ಸೌದಿಯ ಪೌರತ್ವವನ್ನೂ ಕೊಡಲಾಗಿದೆ.

ತನಗೆ ಪೌರತ್ವ ಕೊಟ್ಟಿದ್ದಕ್ಕೆ ಪ್ರತಿಕ್ರಿಯಿಸಿರುವ ಸೋಫಿಯಾ ರೊಬಾಟ್‌, ” ಸೌದಿ ಅರೇಬಿಯಾಕ್ಕೆ ಧನ್ಯವಾದ’ ಹೇಳಿದೆ.

Comments are closed.