ಗಲ್ಫ್

ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಗೆ ಸಮ್ಮಾನ

Pinterest LinkedIn Tumblr

ಇತ್ತೀಚಿಗೆ ದುಬೈಗೆ ಭೇಟಿ ನೀಡಿದ್ದ ಮಾಜಿ ಮುಖ್ಯ ಮಂತ್ರಿ ಶ್ರೀ H D ಕುಮಾರಸ್ವಾಮಿ, JDS ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಜನಾಬ್ B M ಫಾರೂಕ್ ಹಾಗೂ ಇತರ ಹಲವಾರು ರಾಜಕೀಯ ನೇತಾರರನ್ನು BCF ವತಿಯಿಂದ ಸಮ್ಮಾನಿಸಲಾಯಿತು.

ಈ ಕೆಳಗಿನ ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಎಚ್.ಡಿ ಕುಮಾರಸ್ವಾಮಿ, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು ಮತ್ತು ಜೆಡಿಎಸ್ ಅಧ್ಯಕ್ಷರು.
ಜ: B M ಫಾರೂಕ್, ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ಹಾಗೂ ಫಿಜಾ ಸಮುಹ ಸಂಸ್ಥೆಗಳ ನಿರ್ದೇಶಕರು,
ಶ್ರೀ C M ಪುಟ್ಟೂರಾಜ್, ಪಾರ್ಲಿಮೆಂಟ್ ಸದಸ್ಯರು
ಶ್ರೀ ಸಾರಾ ಮಹೇಶ್, ಶಾಸಕರು
ಶ್ರೀ K T ಶ್ರೀಕಂಠ ಗೌಡ, MLC
ಶ್ರೀ N ಅಪ್ಪಾಜಿ ಗೌಡ, MLC
ಶ್ರೀ ಕಾಂತರಾಜ್, MLC
ಶ್ರೀ ಬೆನ್ ಚಿಕ್ಕ ಸ್ವಾಮಿ, ಅನಿವಾಸಿ ಪ್ರತಿನಿಧಿ, ಅಮೇರಿಕಾ
ಶ್ರೀ ರವಿಕುಮಾರ್, ಮೇಯರ್, ಮೈಸೂರು
ಶ್ರೀ ರಾಮ ಕೃಷ್ಣ ಗೌಡ, ಆದಿ ಚುಂಚನ ಗಿರಿ
ಡಾ.ಅಮರ್ನಾಥ್ ಗೌಡ , ವಕೀಲರು
ಶ್ರೀ ಶ್ರೀನಿವಾಸ್
ಶ್ರೀ ವಿಶ್ವನಾಥ್.

ಜ: ಅಬ್ದುಲ್ ರಹ್ಮಾನ್ ಸಜಿಪರವರು ಕುರಾನ್ ಪಠಣ ಗೈದರು.
BCF ಪ್ರಧಾನ ಕಾರ್ಯದರ್ಶಿ Dr.. ಮಹಮ್ಮದ್ ಕಾಪು ರವರು BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ಪರವಾಗಿ ಅತಿಥಿಗಳನ್ನು ಸ್ವಾಗತಿಸಿದರು. ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಹೆಚ್ಚು ಡಾಕ್ಟರ್ ಇರುವ ರಾಜ್ಯವಾಗಿದ್ದು ಭಾರತದ ಮಾಹಿತಿ ತಂತ್ರಜ್ಞಾನದ ಕೇಂದ್ರವೂ ಆಗಿರುವ ಕರ್ನಾಟಕ ರಾಜ್ಯದ ಬಗ್ಗೆ BCF ಗೆ ತುಂಬಾ ಹೆಮ್ಮೆ ಇದೆ ಎಂದರು. ಜಾತ್ಯತೀತ ಜನತಾ ದಳದ ಆಳ್ವಿಕೆಯಲ್ಲಿ ಜಾತ್ಯಾತೀಯತೆಗೆ ಆ ಪಕ್ಷವು ಹೆಚ್ಚು ಪ್ರೋತ್ಸಾಹ ನೀಡಿದ್ದನ್ನು ಸ್ಲಾಘಿಸಿದರು ಮುಂಬರುವ ಮೇ ತಿಂಗಳಲ್ಲಿ ನಡೆಯುವ ಬ್ಯಾರೀಸ್ ಕಲ್ಚರಲ್ ಫೋರಮ್ ವಿಶ್ವ ಕನ್ನಡ ಕಲೆ ಮತ್ತು ಸಾಂಸ್ಕೃತಿಕ ಸಮಾವೇಶದ ಬಗ್ಗೆ ಮಾತಾಡುತ್ತ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ, ಕಲೆ ಯಾ ಶ್ರೀಮಂತಿಕೆ ಮತ್ತು ಸಾಮಾಜಿಕ ಐಕ್ಯತೆಯ ನ್ನು ಪ್ರತಿಬಿಂಬಿಸುವ ಹಾಗೂ ಸುಮಾರು ೧೫೦೦ ಕ್ಕೂ ಅಧಿಕ ಕನ್ನಡಿಗರು ಭಾಗವಹಿಸುವ ಆ ಸಮಾವೇಶಕ್ಕೆ ಶ್ರೀ ಕುಮಾರ ಸ್ವಾಮೀ ಮತ್ತ್ತು ಶ್ರೀ B M ಫಾರೂಕ್ ಸಮೇತ ಎಲ್ಲಾ ರಾಜಕೀಯ ನಾಯಕರನ್ನು ಆಹ್ವಾನಿಸಿದರು.

ತದ ನಂತರ JDS ಪ್ರಧಾನ ಕಾರ್ಯದರ್ಶಿಯೂ, ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರೂ ಫಿಜಾ ಸಮುಹ ಸಂಸ್ಥೆಗಳ ನಿರ್ದೇಶಕರೂ ಹಾಗೂ BCF ಪೋಷಕರೂ ಆದ ಕರ್ನಾಟಕದ ಪ್ರಖ್ಯಾತ ಉದ್ಯಮಿ B M ಫಾರೂಕ್ ರವರು ಮಾತಾಡಿ, ಬ್ಯಾರೀಸ್ ಕಲ್ಚರಲ್ ಫೋರಮ್ ಅನ್ನು ಗಣ್ಯರಿಗೆ ಸ್ಥೂಲವಾಗಿ ಪರಿಚಯಿಸಿದರು. ಬ್ಯಾರ ಅಂದರೆ ತುಳುವಿನಲ್ಲಿ ವ್ಯಾಪಾರ ಎಂದರ್ಥ, ಬ್ಯಾರಿಗಳ ಮುಖ್ಯ ಕಸಬು ವ್ಯಾಪಾರ ಎಂದು ಹೇಳುತ್ತಾ ಬ್ಯಾರಿ ಪದದ ಉಗಮದ ಬಗ್ಗೆ ಬೆಳಕು ಚೆಲ್ಲಿದರು. ಬ್ಯಾರಿ ಸಮುದಾಯ ಕರ್ನಾಟಕದ ಕಲೆ ಮತ್ತು ಸಾಹಿತ್ಯಕ್ಕೆ ಗಣನೀಯವಾದ ಕೊಡುಗೆಯನ್ನು ನೀಡಿದವರಾಗಿದ್ದು ಬೊಳುವಾರು ಮಹಮದ್, ಫಕೀರ್ ಮಹಮದ್ ಕಟಪಾಡಿ, ಸಾರಾ ಅಬೂಬಕರ್ ಮೊದಲಾದ ಹಿರಿಯ ಸಾಹಿತಿಗಳು ಬ್ಯಾರಿ ಸಮುದಾಯದವರೆಂದು ತಿಳಿಸಿದರು. ಅಲ್ಲದೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಚಳವಳಿ ಎರಡರಲ್ಲಿಯೂ ಬ್ಯಾರಿ ಸಮುದಾಯದವರು ಸಕ್ರಿಯರಾಗಿ ಭಾಗವಹಿಸಿದ್ದರು ಎಂದರು.

ಬ್ಯಾರಿ ಸಮಾಜದ ವಿಶೇಷತೆಯಾದ ಪ್ರೀತಿ, ಸೌಹಾರ್ದ ಮತ್ತು ಕ್ರಿಯಾಶೀಲತೆಯ ಬಗ್ಗೆ ಹೇಳುತ್ತಾ ಬ್ಯಾರೀಸ್ ಕಲ್ಚರಲ್ ಫೋರಮ್ ಅವಿರತವಾಗಿ ಕಳೆದ ೨೦ ವರ್ಷಗಳಿಂದ ಕನ್ನಡ ನಾಡಿನ ಸೇವೆಯನ್ನು ಮಾಡುತ್ತಾ ಬರುತ್ತಿದ್ದು ಈ ಸಂಸ್ಥೆಗೆ ಎಲ್ಲ ವಿಧದ ಸಹಕಾರವನ್ನು ನೀಡ ಬೇಕೆಂದು ಕರೆ ನೀಡಿದರು.ಹಾಗೂ ಮುಂಬರುವ ಬ್ಯಾರೀಸ್ ಕಲ್ಚರಲ್ ಫೋರಮ್ ವಿಶ್ವ ಕನ್ನಡ ಕಲೆ ಮತ್ತು ಸಾಂಸ್ಕೃತಿಕ ಸಮಾವೇಶದಲ್ಲಿ ತಮ್ಮ ಸಹಕಾರವನ್ನು ವಾಗ್ದಾನ ಗೈದ ರಲ್ಲದೆ ಮಾನ್ಯ ಕುಮಾರ ಸ್ವಾಮಿಯವರೊಂದಿಗೂ ಈ ಕಾರ್ಯಕ್ರಮಕ್ಕೆ ಸಹಕಾರ ನೀಡ ಬೇಕೆಂದು ಕೋರಿದರು. ಕರ್ನಾಟಕ ರಾಜಕೀಯದ ಕ್ಷಿತಿಜದಲ್ಲಿ ಜಾತ್ಯತೀತ ಜನತಾ ದಳ ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗೆ ಕೂಡಿಕೊಂಡು ಯಾವುದೇ ಪ್ರತ್ಯೇಕ ಜಾತಿ ಸಮುದಾಯದ ಓಲೈಕೆ- ವಿರೋಧದ ರಾಜಕೀಯ ಮಾಡದೆ ನೈಜ ಜಾತ್ಯಾತೀತ ರಾಜಕಾರಣದ ಮೇಲೆ ವಿಶ್ವಾಸವಿರುವ ಪಕ್ಷವಾಗಿದೆ ಎಂದರು. ಎಲ್ಲೆಲ್ಲಿ ಯಾವ ಸಮುದಾಯ ಹಿಂದುಳಿದಿದೆಯೋ ಆ ಸಮುದಾಯದ ಏಳಿಗೆಗಾಗಿ ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಪ್ರಯತ್ನಿಸುವುದು JDS ನ ನಿಲುವು ಎಂದು ಒತ್ತಿ ಹೇಳಿದರು.

BCF ಉಪಾಧ್ಯಕ್ಷರಾದ ಜ: ಎಂ. ಇ. ಮುಳೂರು ರವರು ತಮ್ಮ ಭಾಷಣದಲ್ಲಿ BCF ನ ಉದೇಶ, ಸಾಧನೆಗಳು ಮತ್ತು ಮುಂದಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲುತ್ತಾ BCF UAE ಯಲ್ಲಿರುವ ಬ್ಯಾರಿ ಸಮುದಾಯದವರಿಂದ ಸ್ಥಾಪನೆಯಾದ ಸಂಸ್ಥೆಯಾದರೂ ಅದು ಯಾವುದೇ ಜಾತಿ ಭೇದ ವಿಲ್ಲದೆ ಕರ್ನಾಟಕದ ಎಲ್ಲ ಸಮುದಾಯದವರೊಂದಿಗೆ ಕೂಡಿ ಕೊಂಡು ಹೋಗುವ ಸಂಸ್ಥೆಯಾಗಿದೆ ಎಂದರು. ಕನ್ನಡ ನಾಡಿನಿಂದ ನಾವು ದೂರ ವಾಗಿದ್ದರೂ ಬಾಲ್ಯದಲ್ಲಿ ಕೇಳಿದ ತಾಯಿಯ ಜೋಗುಳದ ಹಾಡಿನಂತೆ ಕನ್ನಡ ನಮ್ಮ ಹೃದಯದಲ್ಲಿ ಯಾವಾಗಲೂ ತುಡಿಯುತ್ತಿದೆ ಎಂದರು. BCF ಕಳೆದ ೧೫ ವರ್ಷಗಳಿಂದ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದು ಇದುವರೆಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ ಏಕೈಕ ಅನಿವಾಸಿ ಕನ್ನಡ ಪರ ಸಂಸ್ಥೆಯಾಗಿದೆ ಎಂದರು.

BCF ಉಪಾಧ್ಯಕ್ಷ ಮತ್ತು ಬ್ಯಾರೀಸ್ ಕಲ್ಚರಲ್ ಫೋರಮ್ ವಿಶ್ವ ಕನ್ನಡ ಕಲೆ ಮತ್ತು ಸಾಂಸ್ಕೃತಿಕ ಸಮಾವೇಶದ ಚಯರ್ಮನ್ ಆದ ಜ: ಅಬ್ದುಲ್ ಲತೀಫ್ ಮುಲ್ಕಿಯವರು ಮಾತಾಡುತ್ತ ಮುಂಬರುವ ಬ್ಯಾರೀಸ್ ಕಲ್ಚರಲ್ ಫೋರಮ್ ವಿಶ್ವ ಕನ್ನಡ ಕಲೆ ಮತ್ತು ಸಾಂಸ್ಕೃತಿಕ ಸಮಾವೇಶದ ವಿವರವನ್ನು ನೀಡಿದಾರರು ಹಾಗೂ ಆ ವಿಶೇಷ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಹಾರ್ದಿಕವಾಗಿ ಆಮಂತ್ರಿಸಿದರು.

ಗೌರವಾನ್ವಿತ ಮಾಜಿ ಮುಖ್ಯ ಮಂತ್ರಿ ಶ್ರೀ H D ಕುಮಾರ ಸ್ವಾಮಿಯವರು ತಮ್ಮ ಹೃದಯಾಂತರದ ಮಾತುಗಳನ್ನು ಹೇಳುತ್ತಾ ಬಹಳ ಭಾವುಕರಾಗಿ ಬ್ಯಾರೀಸ್ ಕಲ್ಚರಲ್ ಫೋರಮ್ ತಮಗೆ ತೋರಿಸಿದ ಆದರಾತಿಥ್ಯದ ಮಾನವೀಯ ಮಜಲನ್ನು ಹೊಗಳುತ್ತಾ UAE ಯಲ್ಲಿ ಬಹಳ ಉನ್ನತ ಸ್ಥಾನದಲ್ಲಿ ಯಶಸ್ವೀ ಯಾದ ಉದ್ಯೋಗ, ಉದ್ದಿಮೆ ಮಾಡುತ್ತಾ ಬಹಳ ಧೀರ್ಘ ಕಾಲದಿಂದ ಈ ನಾಡಿನಲ್ಲಿ ಕಷ್ಣ ಸಹಿಷ್ಣುಗಳಾಗಿ ನಿಯ್ಯತ್ತಿನಿಂದ ದುಡಿಯುತ್ತಿರುವ ಹಾಗೂ ಉನ್ನತ ಶಿಕ್ಸಹಣವನ್ನು ಪಡೆದಿರುವ ಇಡೀ BCF ಕಮಿಟಿ ತಂಡ ೩ ಗಂಟೆಗೂ ಹೆಚ್ಚು ಸಮಯ ನಿರಂತರವಾಗಿ ನಿಂತು ಕೊಂಡು ನಮ್ಮನ್ನು ಬಹುಮಾನಿಸಿದ ಪರಿಯನ್ನು ನೋಡಿ ನಮ್ಮ ಹ್ರದಯ ತುಂಬಿ ಬಂದಿದೆ ಎಂದು ಬಿಸಿಫ್ ಅನ್ನು ಕೊಂಡಾಡಿದರು .

ಅತಿಥಿಗಳನ್ನು ಆದರಿಸುವುದರಲ್ಲಿ ಬ್ಯಾರಿಗಳು ಬಹಳ ಮುಂದು ಎಂದು ಕೇಳಿದ್ದೆ, ಇವತ್ತು ಸಾಕ್ಷಾತ್ ಅನುಭವಿಸಿದೆ ಎಂದರು. ಅದರೊಂದಿಗೆ ಬ್ಯಾರಿ ಸಮುದಾಯದವರ ಕನ್ನಡ ಭಾಷಾ ಪ್ರೇಮವನ್ನು ಶ್ಲಾಘಿಸುತ್ತ ಇಷ್ಟೊಂದು ಸುಂದರವಾಗಿ ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರುವ ಬ್ಯಾರಿ ಭಾಂದವರನ್ನು ಅಭಿನಂದಿಸಿದರು. BCF ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಸಮಾಜ ಸೇವೆಯನ್ನು ಉಲ್ಲೇಖಿಸುತ್ತಾ ಕಷ್ಟಪಟ್ಟು ಈ ಮರಳುಗಾಡಿನಲ್ಲಿ ದುಡಿಯುತ್ತಾ ತಮ್ಮ ಹೆತ್ತ ನಾಡಿಗಾಗಿ ಸದಾ ತುಡಿಯಿಟ್ಟಿರುವ ಬ್ಯಾರಿ ಭಾಂದವರ ದೇಶ ಪ್ರೇಮವನ್ನು ಮನತುಂಬಿ ಹೊಗಳಿದರು. ಮುಂಬರುವ BCF ವಿಶ್ವ ಕನ್ನಡ ಸಂಸ್ಕೃತಿ ಮತ್ತು ಕ್ಲಲಾ ಸಮಾವೇಶಕ್ಕೆ ಖಂಡಿತವಾಗಿಯೂ ತಾವು ತಮ್ಮ ತಂಡದೊಂದಿಗೆ ಭಾಗವಹಿಸುವುದಾಗಿ ಆಶ್ವಾಸನೆ ಇತ್ತರು. ಹಾಗೂ BCF ಗೆ ಹಾಗೂ ಅದು ನಡೆಸಲು ಸಜ್ಜಾಗಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ತಮ್ಮ ಸಂಪೂರ್ಣ ಸಹಕಾರದ ಭರವಸೆ ಕೊಟ್ಟರು. ಒಂದು ಸಮಾಜದಲ್ಲಿ ಶಾಂತಿ ಸೌಹಾರ್ದ ನೆಲೆಸ ಬೇಕಾದರೆ ಎಲ್ಲ ಪಂಗಡ ವರ್ಗದ ಜನರೂ ಸುಶಿಕ್ಸಿತರಾಗುವುದು ಆವಶ್ಯ.ಈ ನಿಟ್ಟಿನಲ್ಲಿ ಮುಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಒಂದು ಮುಸ್ಲಿಂ ವಿಶ್ವ ವಿದ್ಯಾಲಯ ಸ್ಥಾಪಿಸುವರೇ ಪ್ರಯತ್ನಿಸಿ ಆ ಮೂಲಕ ಸಮಾಜದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗದ ಶೈಕ್ಷಣಿಕ ಏಳಿಗೆ ಗಾಗಿ ಶ್ರಮಿಸುವೆ ಎಂದು ಹೇಳಿದರು. BCF ಉಪಾಧ್ಯಕ್ಷರಾದ ಜನಾಬ್ ಅಫೀಕ್ ಹುಸೈನ್ ಧನ್ಯವಾದ ಗೈದರು.

Comments are closed.