ಅಂತರಾಷ್ಟ್ರೀಯ

ಮೊದಲ ಬಾರಿಗೆ ಸೌದಿಯಲ್ಲಿ ಮಹಿಳಾ ದಿನಾಚರಣೆ!

Pinterest LinkedIn Tumblr


ರಿಯಾಧ್: ಸೌದಿ ಅರೇಬಿಯಾ ತನ್ನ ದೇಶದಲ್ಲಿ ಮೊದಲನೇ ಮಹಿಳಾ ದಿನಾಚರಣೆಯನ್ನು ಫೆ.6 ರಂದು ಆಚರಿಸಿದೆ. ಇಸ್ಲಾಮಿಕ್ ರಾಜಾರ ಆಡಳಿತ ಇರುವ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ ನ ಸಾಂಸ್ಕೃತಿಕ ಕೇಂದ್ರದಲ್ಲಿ 3 ದಿನಗಳ ಕಾರ್ಯಕ್ರಮ ನಡೆಸುವ ಮೂಲಕ ಮಹಿಳಾ ದಿನಾಚರಣೆ ಮಾಡಿದೆ.
ಮಹಿಳಾ ಹಕ್ಕುಗಳ ಪರವಾಗಿರುವವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಪುರುಷ ಪ್ರಧಾನ ವ್ಯವಸ್ಥೆಗೆ ಅಂತ್ಯ ಹಾಡಲು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು. ಸೌದಿಯ ರಾಜ ಕುಟುಂಬದ ಮಹಿಳಾ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶಿಕ್ಷಣದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸಿದ್ದು ವಿಶೇಷವಾಗಿತ್ತು.
ಸೌದಿ ಅರೇಬಿಯಾದ ಮಹಿಳೆಯರ ಯಶಸ್ಸಿಗೆ ನಾವು ಸಂಭ್ರಮಾಚರಣೆ ಮಾಡಬೇಕು, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಆಕೆಯ ಸಾಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಸಾಂಕೃತಿಕ ಕೇಂದ್ರದ ವಕ್ತಾರ ಮೊಹಮ್ಮದ್ ಅಲ್-ಸೈಫ್ ಹೇಳಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡದೇ ಇರುವ ವಿಷಯಕ್ಕೆ ಸೌದಿ ಅರೇಬಿಯಾದ ರಾಜವಂಶ ತೀವ್ರ ಟೀಕೆಗೊಳಗಾಗಿತ್ತು.

Comments are closed.