ಗಲ್ಫ್

ದುಬೈಯಲ್ಲಿ ಜನವರಿ 7 ರಂದು ‘ಸೀತಾಪಹರಣ’ ಕನ್ನಡ ಯಕ್ಷಗಾನ ಪ್ರದರ್ಶನ

Pinterest LinkedIn Tumblr

seetaapaharana

ದುಬೈಯ ಕಾನ್ಸುಲೇಟ್ ಆಡಿಟೋರಿಯಂ’ನಲ್ಲಿ ಜನವರಿ 7ರ ಶನಿವಾರದಂದು ಸಂಜೆ 5 ಗಂಟೆಗೆ ಕೆರೆಮನೆ ಶಿವಾನಂದ ಹೆಗಡೆಯವರ ಕ್ರಿಯಾಶೀಲ ನಿರ್ದೇಶನದಲ್ಲಿ ಯಶಸ್ಸನ್ನು ಕಂಡಿರುವ ‘ಸೀತಾಪಹರಣ’ ಕನ್ನಡ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಯಕ್ಷಗಾನದ ಶ್ರೇಷ್ಠ ಕಲಾವಿದರಾದ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತರಾದ ದಿವಂಗತ ಕೆರೆಮನೆ ಶಿವರಾಮ ಹೆಗಡೆಯವರಿಂದ 1934 ರಲ್ಲಿ ಸ್ಥಾಪಿಸಲ್ಪಟ್ಟು ನಂತರ ಯಕ್ಷಗಾನ ಕ್ಷೇತ್ರದ ಮಹಾನ್ ಚೇತನ ದಿವಂಗತ ಕೆರೆಮನೆ ಶಂಭು ಹೆಗಡೆಯವರ ದಕ್ಷ ನೇತೃತ್ವದಲ್ಲಿ ಬಹಳಷ್ಟು ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದ ಹಾಗೂ ಪ್ರಸ್ತುತ ಅವರ ಮಗ ಕೆರೆಮನೆ ಶಿವಾನಂದ ಹೆಗಡೆಯವರ ಕ್ರಿಯಾಶೀಲ ನಿರ್ದೇಶನದಲ್ಲಿ ಯಶಸ್ಸನ್ನು ಕಾಣುತ್ತಿರುವ 8000ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲೆಲ್ಲ ನೀಡಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ತನ್ನ ಹನ್ನೊಂದು ಜನ ಕಲಾವಿದರೊಂದಿಗೆ ಪ್ರಪ್ರಥಮ ಬಾರಿಗೆ ದುಬೈಯಲ್ಲಿ ತಮ್ಮ “ಸೀತಾಪಹರಣ” ಯಕ್ಷಗಾನವನ್ನು ಪ್ರದರ್ಶಿಸುತ್ತಿದೆ.

Comments are closed.