ಕೆ ಐ ಸಿ ಜಬಲ್ ಅಲಿ ಘಟಕ ನವೀಕರಣ ಹಾಗೂ ಮೌಲೂದ್ ಮಜಲಿಸ್ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷರಾದ ಜ ! ಆದಮ್ ಮುಕ್ರಂಪಾಡಿ ಯವರ ಅದ್ಯಕ್ಷತೆಯಲ್ಲಿ ಜಬಲ್ ಅಲಿ ಯಲ್ಲಿರುವ ಅಶ್ರಫ್ ಅಮ್ಜದಿ ಯವರ ಕಚೇರಿಯಲ್ಲಿ ನಡೆಯಿತು .
ಬಹು! ಅಬ್ದುಲ್ ಹಮೀದ್ ಮುಸ್ಲಿಯಾರ್ ರವರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ ಬಹು! ಅಶ್ರಫ್ ಅಮ್ಜದಿ ಯವರು ಸ್ವಾಗತಿಸಿದರು.
ಕೆ ಐ ಸಿ ಕೇಂದ್ರ ಸಮಿತಿ ಯ ಅಧ್ಯಕ್ಷರಾದ ಜ! ಮೊಯಿದೀನ್ ಕುಟ್ಟಿ ಕಕ್ಕಿಂಜೆ ಯವರು ಮಾತನಾಡಿ ಕೆ ಐ ಸಿ ಯ ಸಂಪೂರ್ಣ ಚಿತ್ರಣವನ್ನು ವಿವರಿಸಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಮುಂದಕ್ಕೆ ಖರ್ಚು ವೆಚ್ಚಗಳು ಹೆಚ್ಚುತ್ತಿದ್ದು ತಮ್ಮೆಲ್ಲರ ಸಂಪೂರ್ಣ ಸಹಾಯ ಸಹಕಾರವನ್ನು ಬಯಸುತ್ತಿದ್ದು , ತಾವೆಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಿ ಕೆ ಐ ಸಿ ಯನ್ನು ಉನ್ನತಿಯಿಂದ ಉನ್ನತಿಗೆ ಕೊಂಡೊಯ್ಯಲು ಸಹಕರಿಸಬೇಕೆಂದು ಕರೆಯಿತ್ತು ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು .
ಜ! ಅಬ್ದುಲ್ ರಹಿಮಾನ್ ಬಪ್ಪಲಿಗೆಯವರು ಗತ ವರ್ಷದ ವರದಿಯನ್ನು ಮಂಡಿಸಿದರು . ಜ! ಸಿದ್ದಿಕ್ ಕೊಡನೀರ್ ರವರು ಲೆಕ್ಕ ಪತ್ರವನ್ನು ಮಂಡಿಸಿದರು .ಕೆ ಐ ಸಿ ದುಬೈ ಸಮಿತಿಯ ಅಧ್ಯಕ್ಷರಾದ ಜ ! ಅಶ್ರಫ್ ಖಾನ್ ಮಾಂತೂರ್ ರವರು ಮಾತನಾಡಿ ಕೆ ಐ ಸಿ ಯ ಅನಿವಾರ್ಯತೆಯ ಕುರಿತು ಸವಿವರವಾಗಿ ವಿವರಿಸಿ ಇನ್ನೂ ಹೆಚ್ಚಿನ ಸಹಕಾರವನ್ನು ಕೋರಿದರು .
ಸಭಾಧ್ಯಕ್ಷರಾದ ಜ! ಆದಮ್ ಮುಕ್ರಂಪಾಡಿ ಯವರು ಮಾತನಾಡಿ ಅಲ್ಲಾಹು ನಮಗೆ ನೀಡಿದ ಸಂಪತ್ತಿನಿಂದ ಒಂದಂಶವನ್ನು ಬಡ ಹಾಗೂ ಅನಾಥ ಮಕ್ಕಳು ವಿದ್ಯೆ ಕಲಿಯುತ್ತಿರುವ ಸ್ಥಾಪನೆಗೆ ಸಹಾಯ ಮಾಡಿದರೆ ನಾಳೆ ಪರಲೋಕದಲ್ಲಿ ಅದು ನಮಗೆ ಸಾಕ್ಷಿಯಾಗುತ್ತದೆ .ಆದುದರಿಂದ ಪ್ರತಿಯೊಬ್ಬರೂ ಹೆಚ್ಚಿನ ಉತ್ಸುಕತೆಯಿಂದ ಪರಿಶ್ರಮಿಸಿ ಕೆ ಐ ಸಿ ಯನ್ನು ಉತ್ತುಂಗಕ್ಕೇರಿಸಬೇಕೆಂದು ಕರೆಯಿತ್ತು ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಸಮಿತಿಯನ್ನು ಬರ್ಕಾಸ್ತು ಗೊಳಿಸುದರು .
ನಂತರ ಮಾತನಾಡಿದ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಜ! ಮುಸ್ತಫಾ ಗೂನಡ್ಕ ರವರು ಮಾತನಾಡಿ ಜಬಲ್ ಅಲಿ ಘಟಕದ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ , ಸಮುದಾಯದಲ್ಲಿ ಇರುವ ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಧಾರ್ಮಿಕ ಮತ್ತು ಲೌಕಿಕ ವಿದ್ಯಾರ್ಜನೆಯನ್ನು ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪುಸಿ ಇಸ್ಲಾಮಿನ ಚರ್ಯೆಯನ್ನು ರಾಜ್ಯಯಾದ್ಯಂತ ಪ್ರಸರಿಸಲು ಯೋಗ್ಯರಾದ ಆಲಿಮ್ ಗಳನ್ನು ಸಮಾಜಕ್ಕೆ ಅರ್ಪಿಸುವುದೇ ಕೆ ಐ ಸಿ ಯ ಗುರಿಯಾಗಿದೆ . ಆದುದರಿಂದ ತಾವೆಲ್ಲರೂ ಹೆಚ್ಚಿನ ಮುತುವರ್ಜಿಯಿಂದ ಶ್ರಮ ವಹಿಸಿ ಕೆ ಐ ಸಿ ಯ ಬೆಳವಣಿಗೆಯಲ್ಲಿ ಕೈ ಜೋಡಿಸಬೇಕೆಂದು ಕರೆಯಿತ್ತು
2016 – 2017 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲು ಚಾಲನೆ ನೀಡಿದರು .
ಗೌರವಾಧ್ಯಕ್ಷರು : ಜ! ಯಾಕುಬ್ ಕುಂದಾಪುರ
ಅಧ್ಯಕ್ಷರು : ಜ! ಆದಮ್ ಮುಕ್ರಂಪಾಡಿ
ಉಪಾಧ್ಯಕ್ಷರು : ಜ! ಶರಫುದ್ದೀನ್ ತಾಯೆಲ್
: ಜ ! ಮಹಮ್ಮದ್ ಅಲಿ ಫರಂಗಿಪೇಟೆ
: ಜ! ಮಜೀದ್ ಮುಕ್ರಂಪಾಡಿ
: ಜ ! ಇಸ್ಮಾಯಿಲ್ ಭಟ್ಕಳ
ಪ್ರ . ಕಾರ್ಯದರ್ಶಿ : ಜ ! ಅಬ್ದುಲ್ ರಹಿಮಾನ್ ಬಪ್ಪಳಿಗೆ
ಕಾರ್ಯದರ್ಶಿ. : ಜ! ಇರ್ಷಾದ್ ಸುಳ್ಯ
: ಜ! ಶಾಫಿ ದೇರಳಕಟ್ಟೆ
ಕೋಶಾಧಿಕಾರಿ : ಮಹಮ್ಮೆದ್ ಸನ
ಲೆಕ್ಕ ಪರಿಶೋಧಕರು : ಬಹು ! ಅಶ್ರಫ್ ಅಮ್ಜದಿ
ಸಂಘಟನಾ ಕಾರ್ಯದರ್ಶಿ : ಜ ! ಸಿದ್ದಿಕ್ ಕೊಡನೀರ್
ಜ! ಮೊಯಿದೀನ್ ದೇಲಂಪಾಡಿ
ಜ! ಸಿದ್ದಿಕ್ ದೇರಳಕಟ್ಟೆ
ಜ! ಶಾಫಿ ಸೀತಾಂಗೋಳಿ
ಸಂಚಾಲಕರು : ಜ ! ಅಬ್ದುಲ್ ಹಮೀದ್ ಸವಣೂರು
: ಜ! ಅಜ್ಮತ್
:ಜ ! ನೌಶಾದ್ ಸಂಪ್ಯ
: ಜ! ನಿಶಾದ್ ಇಡಬೆಟ್ಟು
: ಜ !ಅಝೀಜ್ ಕುಕ್ಕಾಜೆ
: ಜ ! ಶಾಫಿ ಕಂಡಲ್
: ಜ!ನಾಸರ್ ಕಲ್ಲಡ್ಕ
: ಜ! ತಾಜುದ್ದೀನ್ ಆದೂರು
; ಜ! ಹಫೀಜ್
: ಜ! ಹಮೀದ್ ಕಾಸರಗೋಡು
ಇವರುಗಳನ್ನು ಆರಿಸಲಾಯಿತು .
ಈ ಸಂದರ್ಭದಲ್ಲಿ ಕೆ ಐ ಸಿ ಕೇಂದ್ರ ಸಮಿತಿಯ ಪ್ರ. ಕಾರ್ಯದರ್ಶಿ ಜ! ನೂರ್ ಮಹಮ್ಮೆದ್ ನೀರ್ಕಜೆ , ಕಾರ್ಯಾಧ್ಯಕ್ಷರಾದ ಜ! ಷರೀಫ್ ಕಾವು , ಕಾರ್ಯದರ್ಶಿ ಜ! ಅಶ್ರಫ್ ಪರ್ಲಡ್ಕ , ಕಿಸೈಸ್ ಘಟಕ ಅಧ್ಯಕ್ಷರಾದ ಜ! ಷರೀಫ್ ಕೊಡನೀರ್, ಅಶ್ರಫ್ ಅಮ್ಜದಿ, ಯಾಕುಬ್ ಕುಂದಾಪುರ, ಅಬ್ದುಲ್ ರಹಿಮಾನ್ ಬಪ್ಪಳಿಗೆ, ಹಮೀದ್ ಮುಸ್ಲಿಯಾರ್ ,ಶಾಫಿ ಸೀತಾಂಗೋಳಿ, ಮೊದಲಾದವರು ಸಂದರ್ಭಯೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು . ಜ! ಜಾಬಿರ್ ಬೆಟ್ಟಂಪಾಡಿ ವಂದನಾರ್ಪಣೆ ಗೈದು ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು .
Comments are closed.