ಅಂತರಾಷ್ಟ್ರೀಯ

ನಟಿಯರು, ಮಾಡೆಲ್‌ಗಳಿಂದ ವೇಶ್ಯಾವಾಟಿಕೆ!

Pinterest LinkedIn Tumblr

sex
ಶಾರ್ಜಾ: ಸೆಕ್ಸ್ ರಾಕೆಟ್ ನಡೆಸುತ್ತಿದ್ದವರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದ ಇಬ್ಬರು ಯುವತಿಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಲೆಯಾಳಿ ಯುವಕರು ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಸೆಕ್ಸ್ ರಾಕೆಟ್ ಜಾಲದಲ್ಲಿ ಹೈಪ್ರೋಫೈಲ್ ನಟಿಯರು ಸೇರಿದಂತೆ, ಮಾಡೆಲ್‌ಗಳು ಕೂಡಾ ವೃತ್ತಿ ನಿರತರಾಗಿದ್ದಾರೆ. ಗ್ರಾಹಕರೊಂದಿಗೆ ಸೆಕ್ಸ್ ನಡೆಸುತ್ತಿರುವ ದೃಶ್ಯಗಳ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಿರುವನಂತಪುರಂ ಜಿಲ್ಲೆಯ ಕನಿಯಾಪುರಂ ಮೂಲದ ನಿವಾಸಿಯಾದ ಶಾನವಾಸ್ ಎನ್ನುವ ವ್ಯಕ್ತಿ ಸೆಕ್ಸ್ ರಾಕೆಟ್ ಕಿಂಗ್‌ಪಿನ್ ಆಗಿದ್ದಾನೆ. ಹಲವಾರು ವಿದೇಶಿ ಮಹಿಳೆಯರು ಕೂಡಾ ಸೆಕ್ಸ್ ರಾಕೆಟ್‌ ಜಾಲಕ್ಕೆ ಸಿಲುಕಿದ್ದಾರೆ. ಶಾರ್ಜಾದಲ್ಲಿ ಸರಕಾರಿ ಸೇವೆಯಲ್ಲಿರುವ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್ ರಾಕೆಟ್ ಜಾಲಕ್ಕೆ ನೂಕಿದ್ದಾನೆ ಎನ್ನಲಾಗಿದೆ.

ಈಗಾಗಲೇ ನೂರಕ್ಕೂ ಹೆಚ್ಚು ಯುವತಿಯರಿಗೆ ವಿವಾಹವಾಗುವುದಾಗಿ ನಂಬಿಸಿ ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಎಂದು ಯುವತಿಯರು ಆರೋಪಿಸಿದ್ದಾರೆ. ಪೊಲೀಸರು ಆರೋಪಿ ಶಾನವಾಸ್ ಬಂಧನಕ್ಕೆ ಜಾಲ ಬೀಸಿದ್ದು, ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.