ಗಲ್ಫ್

ಡಿ.ಕೆ.ಎಸ್.ಸಿ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಇದರ ಕರ ಪತ್ರ ಬಿಡುಗಡೆ

Pinterest LinkedIn Tumblr

notice-relice-2jpg

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ವತಿಯಿಂದ ಡಿ.ಕೆ.ಎಸ್.ಸಿ ಸಂಘಟನೆ ಯ ಪ್ರವರ್ತಕರು, ಸದಸ್ಯರು, ಹಿತೈಷಿಗಳು ಹಾಗು ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕ ಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಆಟೋಟ ಕಾರ್ಯಕ್ರಮದೊಂದಿಗೆ 2017 ಜನವರಿ 1 ರಂದು ಶಾರ್ಜಾ ಮಲಿಹ ರಸ್ತೆಯಲ್ಲಿ ಇರುವ ಉತ್ತಮ ಒಳಾಂಗಣ ಹಾಗೂ ಒರಾಂಗಣ ವ್ಯವಸ್ಥೆ ಇದ್ದು ಪ್ರಕ್ರತಿ ಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ ಇರುವ ಬಿನ್ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಸಂಘಟಿಸಿರುತ್ತದೆ.

mulaqat-notice

notice-relice-1jpg

notice-relice-3jpg

ಇದರ ಅಂಗವಾಗಿ ಪ್ಯಾಮಲಿ ಮುಲಾಖತ್ ಕಮಿಟಿ ಇದರ ಚೆಯರ್ಮೆನ್ ಜನಾಬ್.ಲತೀಫ್ ಮುಲ್ಕಿ ರವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಮೌಲೀದ್ ಪಾರಾಯಣ ದೊಂದಿಗೆ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಮರ್ಕಜ್ ಅಲ್ ಹುದಾ ಇದರ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರು “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಇದರ ಕರ ಪತ್ರ ವನ್ನು ಬಿಡುಗಡೆಗೊಳಿಸಿದರು.

ಈ ಸಮಾರಂಭದಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಹೆಜಮಾಡಿ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ಚೆಯರ್ಮೆನ್ ಜನಾಬ್.ಲತೀಫ್ ಮುಲ್ಕಿ ಹಾಗು ಕನ್ವಿನರ್ ಎಸ್.ಯೂಸುಫ್ ಅರ್ಲಪದವು ರವರು ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಸದಸ್ಯರಾದ ಜಮಾಲ್ ಕಣ್ಣಂಗಾರ್, ಡಿ.ಕೆ.ಎಸ್.ಸಿ. ಶಾರ್ಜಾ ಯುನಿಟ್ ಅಧ್ಯಕ್ಷರಾದ ಬಷೀರ್ ಕಾಪಿಕ್ಕಾಡ್ , ಕೋಶಾಧಿಕಾರಿ ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾಬಾ ಮೂಳೂರು, ದೇರಾ ಯುನಿಟ್ ಉಪಾಧ್ಯಕ್ಷರೂ ಮಿಲಾದ್ ಸ್ವಾಗತ ಸಮಿತಿ ಚೆಯರ್ಮೆನ್ ಆದ ಶಕೂರು ಮನಿಲಾ, ಯೂತ್ ವಿಂಗ್ ಅಧ್ಯಕ್ಷರಾದ ಶೈಫುದ್ದೀನ್ ಪಟೇಲ್, ಅಬುಸಾಗರ್ ಯುನಿಟ್ ಪ್ರದಾನ ಕಾರ್ಯದರ್ಶಿ ಅಶ್ರಫ್ ಸತ್ತಿಕಲ್, ಅಲ್ ಕ್ವಿಸಸ್ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಅರಂತೋಡ್, ಅಜ್ಮಾನ್ ಯುನಿಟ್ ನ ನಜೀರ್ ಕಣ್ಣಂಗಾರ್, ಸಮೀರ್ ಕೊಳ್ನಾಡ್, ಅಬ್ದುಲ್ ರಹಿಮಾನ್ ಸಜಿಪ, ಇಬ್ರಾಹಿಂ ಅಗ್ನಾಡಿ ದುಬಾಲ್, ಹಾಜಿ.ನವಾಜ್ ಕೋಟೆಕ್ಕಾರ್, ರಫೀಕ್ ಮುಲ್ಕಿ , ಅಬ್ದುಲ್ಲಾ ಪೆರುವಾಯಿ, ಅಬ್ಬಾಸ್ ಪಾಣಾಜೆ, ರಪೀಕ್ ಸಂಪ್ಯ, ಅಮಾನುಲ್ಲಾ ಕುಂದಾಪುರ, ಉಮ್ಮರ್ ಪಾಣಾಜೆ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದು ಕಮಲ್ ಅಜ್ಜಾವರ ಕಾರ್ಯಕ್ರಮ ನಿರ್ವಹಿಸಿ ಕಮರುದ್ದೀನ್ ಗುರುಪುರ ಧನ್ಯವಾದ ಸಮರ್ಪಿಸಿದರು.

Comments are closed.