ಗಲ್ಫ್

‘ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ’ಗೆ ಝೈನಿ ಕಾಮಿಲ್ ಆಯ್ಕೆ

Pinterest LinkedIn Tumblr

zaini-usthad

ದುಬೈ: ಯುವ ವಿದ್ವಾಂಸ, ಸಂಘಟನಾ ದಿಗ್ಗಜ, ಭಾಷಣ ಪೀಠದ ಮಿನುಗು ತಾರೆ, ಸುನ್ನಿ ಸಾಹಿತ್ಯ ಲೋಕದ ಅದ್ವಿತೀಯ ಬರಹಗಾರ, ಮೌಲಾನಾ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರಿಗೆ 2016 ನೇ ಸಾಲಿನ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ಪ್ರಧಾನ ಮಾಡುವ “ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 9ರಂದು ನಡೆಯುವ ಯುಎಇ ರಾಷ್ಟೀಯ ದಿನಾಚರಣೆ ಸಮಾವೇಶದಲ್ಲಿ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ವಿವಿಧ ಧರ್ಮ, ಜಾತಿ ಪಂಗಡಗಳ ಜನರು ಒಗ್ಗಟಾಗಿ ಬಾಳುವಲ್ಲಿ ಶಾಂತಿ ಸಾಮರಸ್ಯ ದೊಂದಿಗೆ ಜಗತ್ತಿನ ಅತ್ಯಂತ ಸಹಬಾಳ್ವಿಕೆಯ ರಾಷ್ಟ್ರ ಕಟ್ಟುವಲ್ಲಿ ಯಶಸ್ವಿಯಾದ ಯುಎಇ ರಾಷ್ಟ್ರಪಿತ ಶೈಖ್ ಝಾಯಿದ್ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ತನ್ನ ಆಕರ್ಷಣೀಯ ವಾಕ್ ದೋರಣೆಗಳಿಂದ ಸಭಿಕರನ್ನು ಮನಗೆದ್ದು ಕಳೆದ ಎರಡುವರೆ ದಶಕಗಳಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಶಾಂತಿ ಸೌಹಾರ್ದತೆಯ ಭಾಷಣಗಳಿಂದ ಅಖಂಡ ಭಾರತ ನಿರ್ಮಾಣಕ್ಕಾಗಿ ಯುವ ಜನತೆಯನ್ನು ಸ್ಪೂರ್ತಿ ನೀಡಿ ಜಾತ್ಯಾತೀತ ಭಾರತದ ಐಕ್ಯತೆಗೆ ಭದ್ರ ಬುನಾದಿ ನೀಡುತ್ತಿರುವ ಝೈನಿ ರವರು ಧಾರ್ಮಿಕ ಕ್ಷೇತ್ರದಲ್ಲಿ ಝೈನಿ , ಕಾಮಿಲ್ ಸಖಾಫಿ ಬಿರುದನ್ನು ಪಡೆದು ಲೌಕಿಕ ವಿಷಯದಲ್ಲಿ MA ಪಧವೀಧರರಾಗಿದ್ದಾರೆ.

ಸುನ್ನಿ ಸಂಘ ಸಂಸ್ಥೆಗಳ ಬೆನ್ನೆಲುಬಾಗಿ, ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳನ್ನೂ ನಿರ್ವಹಿಸಿ ಸಂಘಟನೆಯ ಮುಂಚೂಣಿ ನಾಯಕರಾಗಿದ್ದು ಪ್ರಸ್ತುತ ಎಸ್ ವೈ ಎಸ್ ಕರ್ನಾಟಕ ಪ್ರಾಂತೀಯ ಕಾರ್ಯದರ್ಶಿ, ಕೆಸಿಎಫ್ ಅಂತರ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಹಾಗೂ ಮಿಸ್ಬಾಉಲ್ ಹುದಾ ಕೃಷ್ಣಾಪುರ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖ್ಯಾತ ಬರಹಗಾರರಾಗಿ, ವಿಶಿಷ್ಟ ವ್ಯಕ್ತಿತ್ವದೊಂದಿಗೆ ಮನೆಮಾತಾಗಿರುವ ಝೈನಿ ರವರು ಸಕಾಲಿಕ ಅಂಕಣಗಳೊಂದಿಗೆ ಹೆಸರು ವಾಸಿಯಾಗಿರುತ್ತಾರೆ, ಅನೇಕ ವಿದ್ವಾಂಸರನ್ನು ಹಾಗೂ ಬರಹಗಾರರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಭಾಷಣ ಮತ್ತು ಬರಹಗಳ ಮೂಲಕ ಮಾನವೀಯತೆಯನ್ನು ಮೆರೆದು ರಾಷ್ಟ್ರದ ಸಂಕಲ್ಪಕ್ಕೆ ಇವರು ನೀಡಿದ ಕೊಡುಗೆಯವನ್ನು ಗೌರವಿಸಿ ಕೆಸಿಎಫ್ ಈ ಬಾರಿಯ ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ ಯನ್ನು ನೀಡಲು ನಿರ್ಧರಿಸಿದೆ.

ಯುಎಇ ಯ ಸರ್ಕಾರದ ಪ್ರತಿನಿಧಿಗಳು, ಹಿರಿಯ ಉದ್ಯಮಿಗಳು, ಧಾರ್ಮಿಕ, ರಾಜಕೀಯ ಸಾಮಾಜಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.