ಗಲ್ಫ್

ಬುರೈದಾ: ಮುಂಬೈ ಮೂಲದ ವ್ಯಕ್ತಿಯ ಅಫಘಾತ; ರಕ್ತದಾನದ ಮೂಲಕ ನೆರವು ನೀಡಿದ ಇಂಡಿಯನ್ ಸೋಶಿಯಲ್ ಫಾರಂ

Pinterest LinkedIn Tumblr

buraida-1

ಸೌದಿ ಅರೇಬಿಯಾದ ಬುರೈದ ನಗರದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮುಂಬೈ ಘಾಟ್ಕೋಪರ್ ಮೂಲದ ಫರ್ಹಾನ್ ರವರು ದಿನಾಂಕ 15-11-2016 ರಂದು ರಸ್ತೆ ದಾಟುವ ಸಂಧರ್ಭದಲ್ಲಿ ಅಫಘಾತಕ್ಕೀಡಾಗಿದ್ದರು. ಅಫಘಾತದಲ್ಲಿ ಗಂಭೀರವಾಗಿ ಗಾಯಾಗೊಂಡ ಅವರ ಎರಡೂ ಕಾಲುಗಳ ಮೂಳೆ ಮುರಿದುಕೊಂಡಿದ್ದವು. ಅವರಿಗೆ ತಕ್ಷಣ ಶಸ್ತ್ರಕ್ರಿಯೆಯ ಅವಶ್ಯಕತೆ ಮಾಡಬೇಕಾದುದರಿಂದ ರಕ್ತದ ಅವಶ್ಯಕತೆ ಎದುರಾಯಿತು. ಅವರ ಸಂಬಂಧಿಗಳು ಮತ್ತು ಸ್ನೇಹಿತರು ರಕ್ತದಾನಿಗಳಿಗಾಗಿ ನಿರಂತರ ಹುಡುಕಾಡುತ್ತಿದ್ದರು.

buraida-2

buraida-3

buraida-4

isf

ಈ ವಿಷಯವನ್ನು ತಿಳಿದ ಇಂಡಿಯನ್ ಸೋಶಿಯಲ್ ಫಾರಂ ಬುರೈದ ಘಟಕವು ರವೂಫ್ ಕಲಾಯಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ, ಈ ವಿಷಯದಲ್ಲಿ ಸಂಪೂರ್ಣ ಸಹಾಯ ಮಾಡುವ ಭರವಸೆ ನೀಡಿದರು.

ಅದೇ ರೀತಿ ಇಂಡಿಯನ್ ಸೋಶಿಯಲ್ ಫಾರಂ ಬುರೈದ ಘಟಕದ ಸದಸ್ಯರಾದ ಆಯಾಝ ಕಾಟಿಪಳ್ಳ, ಇಕ್ಬಾಲ್ ಪುತ್ತೂರು ಮತ್ತು ಇತರರ ಸಹಕಾರದಿಂದ ಒಟ್ಟು ನಾಲ್ಕು ಯೂನಿಟ್ ರಕ್ತವನ್ನು ಫರ್ಹಾನ್ ರವರಿಗೆ ನೀಡಲಾಯಿತು.

ಅದೇ ರೀತಿ ಇಂಡಿಯನ್ ಸೋಶಿಯಲ್ ಫಾರಂ ಬುರೈದ ಘಟಕದ ಸದಸ್ಯರು ನಿರಂತರ ಆಸ್ಪತ್ರೆಗೆ ಭೇಟಿ ನೀಡಿ ಫರ್ಹಾನ್ ರವರ ಆರೋಗ್ಯ ಸ್ಥಿತಿಯನ್ನು ವಿಚಾರಿಸುತ್ತಿದ್ದಾರೆ. ಇಂಡಿಯನ್ ಸೋಶಿಯಲ್ ಫಾರಂನ ಈ ಅಮೂಲ್ಯ ಕಾರ್ಯಕ್ಕೆ ಫರ್ಹಾನ್ ಮತ್ತು ಅವರು ಸಂಬಂಧಿಗಳು ತುಂಬು ಹೃದಯದ ಕೃತಘ್ನತೆ ಸಲ್ಲಿಸಿದ್ದಾರೆ.

Comments are closed.