ಗಲ್ಫ್

ಶಾರ್ಜಾ ಕರ್ನಾಟಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಯು.ಎ.ಇ. ಮಟ್ಟದ ಗೀತಾಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧಿಗಳು

Pinterest LinkedIn Tumblr

KSS Singin Competition Finalist

ಶಾರ್ಜಾ ಕರ್ನಾಟಕ ಸಂಘದ 14ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ 2016 ನವೆಂಬರ್ 18ರಂದು ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಯು.ಎ.ಇ. ಮಟ್ಟದ ಗೀತಾಗಾಯನ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಸ್ಪರ್ಧಿಗಳು “ಮಯೂರ ಕುಮಾರ”, “ಮಯೂರ ಕುಮಾರಿ” ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಪ್ರತಿಭಾನ್ವಿತ ಮಕ್ಕಳ ವಿಭಾಗದ ಸ್ಪರ್ಧಿಗಳ ಚುಟುಕು ಪರಿಚಯ…

sannidi-v-shetty

ಕು. ಸನ್ನಿಧಿ ವಿಶ್ವನಾಥ್ ಶೆಟ್ಟಿ
ದುಬಾಯಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಗಾಯಕ, ನೃತ್ಯಪಟು ಶ್ರೀ ವಿಶ್ವನಾಥ್ ಶೆಟ್ಟಿ, ಗಾಯಕಿ, ನೃತ್ಯ, ಅಭಿನಯದ ಪ್ರತಿಭಾನ್ವಿತ ಶ್ರೀಮತಿ ಉಷಾ ಶೆಟ್ಟಿ ದಂಪತಿಗಳ ಮಗಳು ಕು. ಸನ್ನಿಧಿ ಶೆಟ್ಟಿ. ನಾಲ್ಕನೆಯ ತರಗತಿಯಲ್ಲಿ ಅವರೋನ್ ಇಂಗ್ಲೀಷ್ ಸ್ಕೂಲ್ ದುಬಾಯಿಯಲ್ಲಿ ವ್ಯಾಸಂಗ ಮಾಡುತಿರುವ ವಿದ್ಯಾರ್ಥಿನಿ.

ಶಾರ್ಜಾ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ತನ್ನ ಒಂದೂವರೆ ವಯಸಿನಲ್ಲಿ ಗುಡ್ಡಗಾಡು ಜನಾಂಗದ ಛದ್ಮವೇಷ ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಸರ್ವರ ಮನಸೆಳೆದಿರುವ ಪುಟ್ಟ ಕಂದಮ್ಮ ನಂತರದ ದಿನಗಳಲ್ಲಿ ಗಾಯನ, ನೃತ್ಯ, ಅಭಿನಯದಲ್ಲಿ ಅವಕಾಶ ದೊರೆತು ಎಳೆಯವ ವಯಸಿನಲ್ಲೇ ದೊಡ್ಡ ದೊಡ್ಡ ವೇದಿಕೆಯನ್ನು ಏರಿದವಳು.

sannidi-vishwanath-shetty

ಯು.ಎ.ಇ. ಬಂಟ್ಸ್ ಸ್ನೇಹಮಿಲನದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಜನೆ, ದುಬಾಯಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದುಬಾಯಿಯಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯ ಭಜನಾ ತಂಡದ ಅತಿ ಕಿರಿಯ ವಯಸ್ಸಿನ ಭಜನಾ ಸಂಗೀತದ ಕಿರಿಯ ಗಾಯಕಿಯಾಗಿ ಸರ್ವರ ಮೆಚ್ಚುಗೆಗೆ ಸನ್ನಿಧಿ ಪಾತ್ರಳಾಗಿದ್ದಾಳೆ.

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನೃತ್ಯ ತಂಡದ ಕಿರಿಯ ನೃತಗಾರ್ತಿಯಾಗಿ ಭಾಗವಹಿಸಿ ಬಹುಮಾನ ಪಡೆಯುವಲ್ಲಿ ಪಾಲುಧಾರಲಾಗಿದ್ದಾಳೆ. ದುಬಾಯಿಯಲ್ಲಿ ನಡೆದ “ಎಂಕ್ ಮಾತೆರ್ಲಾ ಬೋಡು” ತುಳು ನಾಟಕದಲ್ಲಿಯೂ ಸಹ ಅತೀ ಕಿರಿಯ ಬಾಲಕಲಾವಿದೆಯಾಗಿ ಬಹುಮುಖ ಪ್ರತಿಭೆ ಇರುವ ಸನ್ನಿದಿ ಶಾಲೆಯಲ್ಲಿ ನಡೆದ ಹಲವಾರು ಛದ್ಮವೇಷ, ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ತನ್ನದಾಗಿಸಿ ಕೊಂಡಿದ್ದಾಳೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಮಕ್ಕಳ ವಿಭಾಗದಲ್ಲಿ ಆಯ್ಕೆಯಾಗಿದ್ದಾಳೆ.

amoga-varsha

ಕು. ಅಮೋಘವರ್ಷ ಭಟ್

ದುಬಾಯಿ ಡಿ.ಪಿ.ಎಸ್. ಸ್ಕೂಲ್ ನಲ್ಲಿ 3ನೇ ತರಗತಿಯ ವಿದ್ಯಾರ್ಥಿ ತನ್ನ 9ನೇ ವಯಸ್ಸಿನಲ್ಲೇ ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಮೃದಂಗ, ಗಿಟಾರ್ ನುಡಿಸುವ ಅಭ್ಯಾಸ ಮಾಡುತಿದ್ದಾನೆ. ತನ್ನ ಕಿರಿಯ ವಯಸಿನಲ್ಲೇ ಯು.ಎ.ಇ.ಯಲ್ಲಿ ನಡೆದ ಬೃಹತ್ ಕಾರ್ಯಕ್ರಮದ ವೇದಿಕೆಯಲ್ಲಿ ತನ್ನ ಗಾಯನದ ಮೂಲಕ ಸರ್ವರ ಮನಸೆಳೆದಿದ್ದಾನೆ. ಕರ್ನಾಟಕ ಸಂಘ ಶಾರ್ಜಾದ ಆಸ್ರ್ಯದಲ್ಲಿ ನಡೆದ 12ನೇ ಕನ್ನಡ ಸಾಂಸ್ಕೃತಿಕ ಸಮ್ಮೇಳನ, ಧ್ವನಿ ಪ್ರತಿಷ್ಠನಾದ ಆಶ್ರಯದಲ್ಲಿ ನಡೆದ 2ನೇ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ, ಬಸವ ಸಮಿತಿಯ ಆಶ್ರಯದಲ್ಲಿ ಬಸವ ಜಯಂತಿ, ಕನ್ನಡ ಮಿತ್ರರು ಅಯೊಜಿಸಿದ ಕನ್ನಡ ಪಾಠ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ಎಳೆಯ ಕಂಠಸಿರಿಯಲ್ಲಿ ಗಾಯನ ಕಾರ್ಯಕ್ರಮ ನೀಡಿದ್ದಾನೆ.

amoghavarsha-bhat-pict

ಅಮೋಗವರ್ಷ ಭಟ್ ಸಂದರ್ಶನ 105.4 ರೇಡಿಯೋ ಸ್ಪೈಸ್ ನಲ್ಲಿ ಪ್ರಸಾರವಾಗಿದೆ. ಯು.ಎಸ್. ರೇಡಿಯೊ ಚಾನೆಲ್ 1170 ಂಒ ಡಾ. ರಾಜ್ ಸ್ಪೇಷಲ್ ಕಾರ್ಯಕ್ರಮದಲ್ಲಿ “ಹಾಡು ಸಂತೋಷಕ್ಕೆ” ಗೀತೆ ಮತ್ತು ಹಿಂದಿ ಗೀತೆ “ಗಾತಾ ರಹೆ ಮೆರಾ ದಿಲ್” ಪ್ರಸಾರವಾಗಿದೆ.

ಯುಎ.ಎಇ. ಬಿಗ್ ಐಡಿಯಾ ಗ್ರೂಪ್ ಆಯೋಜಿಸಿದ್ದ ಅಮೇಜಿಂಗ್ ಸ್ಟಾರ್ಸ್ – 2015 ಅಮೋಗವರ್ಷನ ಪ್ರತಿಭೆಗೆ “ಎಮರ್ಜಿಂಗ್ ಟಾಲೆಂಟ್” ಪುರಸ್ಕಾರ. ಶಾಲಾ ಗಾಯನ ಸ್ಪರ್ಧೆಯಲ್ಲಿ ಟಿಎಮೆಸ್ ಐಡೊಲ್ ಮತ್ತು ಸಾಂಗ್ ಬರ್ಡ್ ಪುರಸ್ಕಾರ, ಶೈಕ್ಷಣಿಕ ವಿಭಾಗದಲ್ಲಿ “ಗೋಲ್ಡನ ಸ್ಟಾರ್” ಪಡೆದಿರುವ ಅತಿ ಕಿರಿಯ ವಯಸ್ಸಿನ ಪ್ರತಿಭಾನ್ವಿತ ಕಿರಿಯ ಗಾಯಕ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಮಕ್ಕಳ ವಿಭಾಗದಲ್ಲಿ ಆಯ್ಕೆಯಾಗಿದ್ದಾನೆ.

sindhu-kamath

ಕು. ಸಿಂಧೂ ಸತೀಶ್ ಕಾಮತ್
ಕು. ಸಿಂಧೂ ಸತೀಶ್ ಕಾಮತ್ ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶ್ರೀ ಸತೀಶ್ ಕಾಮತ್ ಮತ್ತು ಶ್ರೀಮತಿ ಧನಲಕ್ಷ್ಮೀ ಕಾಮತ್ ದಂಪತಿಗಳ ಪುತ್ರಿ. ಇಂಡಿಯನ್ ಹೈಸ್ಕೂಲ್ ದುಬಾಯಿ ಎಂಟನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಕಳೆದ ನಾಲ್ಕು ವರ್ಷಗಳಿಂದ ಶ್ರೀ ಸುಭೋದ್ ಗೊಡ್ಬೋಲೆಯವರಿಂದ ಮತ್ತು ಮೊದಲ ಎರಡು ವರ್ಷ ದಿ. ಚಿತ್ರಾ ಗೋಷ್ ರವರಿಂದ ಹಿಂದೂಸ್ಥಾನಿ ಸಂಗೀತವನ್ನು ಕಲಿಯುತಿದ್ದಾಳೆ.

ಅಂತರ ತರಗತಿ ಗಾಯನ ಸ್ಪ್ರಧೆಯಲ್ಲಿ ನಾಲ್ಕು ವರ್ಷದಿಂದ ಬಹುಮಾನ ತನ್ನದಾಗಿಸಿ ಕೊಂಡಿದ್ದಾಳೆ.

sindhu-satish-kamath-pict

ಪ್ತಹಮ ಸ್ತಾನದಲ್ಲಿ ಸಮೂಹ ನೃತ್ಯ ಸ್ಪರ್ಧೆ, ಹಿಂದಿ ಭಾಷಣ ಸ್ಪರ್ಧೆ, ಕ್ರಿಯಾತ್ಮಕ ಕರಕುಶಲ ಸ್ಪರ್ಧೆ, ಯು.ಎ.ಇ. ಅಮ್ಚಿಗೆಲೆ ಗಾಯನ ಸ್ಪರ್ಧೆಯಲ್ಲಿ ಜಯಗಳಿಸಿದ್ದಾಳೆ.

ಪ್ರತಿನಿತ್ಯ ಕನ್ನಡ, ಹಿಂದಿ, ಮರಾಠಿ, ಸಂಸ್ಕೃತ ಭಾಷೆಗಳ ಶ್ಲೋಕಗಳ ಪಠಣದ ಮೂಲಕ ತನ್ನ ಗಾಯನ ಅಭ್ಯಾಸಕ್ಕೆ ಹೆಚ್ಚಿನ ತರಭೇತಿ ಪಡೆದು ಕೊಳ್ಳುವ ಸಿಂದೂ ಸತೀಶ್ ಕಾಮತ್ ಸುಮಧುರ ಕಂಠ ಸಿರಿಯ ಬಾಲ ಪ್ರತಿಭೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಮಕ್ಕಳ ವಿಭಾಗದಲ್ಲಿ ಆಯ್ಕೆಯಾಗಿದ್ದಾಳೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಪ್ರತಿಭಾನ್ವಿತ ಮಹಿಳಾ ಗಾಯಕಿಯರ ಚುಟುಕು ಪರಿಚಯ…

akshatha-rao

ಅಕ್ಷತಾ ಪಿ. ರಾವ್
ಅಕ್ಷತಾ ರಾವ್ ಗಾಯನ ಪ್ರತಿಭೆ 2ನೇ ತರಗತಿಯಲ್ಲಿರುವಾಗಲೇ ಬೆಳಕಿಗೆ ಬಂದಿತು. ಶಾಲಾ ಪ್ರತಿಭಾ ದಿನದ ಗಾಯನ ಸ್ಪರ್ಧೆಯಲ್ಲಿ 2ನೇ ಬಹುಮಾನ ಅಭಿಸಿತು. ಪ್ರಾರಂಭದ ಹಂತದಲ್ಲಿ ಜಯಗಳಿಸಿದ್ದು ಮುಂದಿನ ಗಾಯನ ಪಯಣದ ಭದ್ರ ಬುನಾದಿಯಾಯಿತು.

ಲಘು ಸಂಗೀತದ ಪಾಠ ಕಲಿಯುದರೊಂದಿಗೆ ಶಾಲೆಯಲ್ಲಿ ನಡೆಯುತಿದ್ದ ಸ್ಪರ್ಧೆಗಳು, ಅಂತರಶಾಲಾ ಸ್ಪರ್ಧೆಗಳು ಬಹುಮಾನ ಗಳಿಸುವುದರಲ್ಲಿ ಹೆಚ್ಚಿನ ಸಹಕಾರಿಯಾಯಿತು.

akshata-rao-panel

2010ರಲ್ಲಿ ರೇಡಿಯೊದಲ್ಲಿ ಗಾಯನ ಸ್ಪರ್ಧೆ ಸ್ಪರ್ಧಿಗಳಿಗೆ ನೇರ ಪ್ರಸಾರದ ಮೂಲಕ ನಡೆದು ಕೇಳುಗರು ಸಾರ್ವಜನಿಕವಾಗಿ ಓಟಿಂಗ್‍ನ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿದಾಗ ಪ್ರಥಮ ರನ್ನರ್ ಅಪ್ ಆಗಿ ದುಬಾಯಿಯಲ್ಲಿ ಅಕ್ಷತಾ ಗಾಯಕಿಯಾಗಿ ಪರಿಚಯವಾದಳು.

2012 ರಲ್ಲಿ ಪ್ರಖ್ಯಾತ ಸಂಗೀತ ನಿರ್ದೆಶಕ ಗುರುಕಿರಣ್‍ರೊಂದಿಗೆ ವೇದಿಕೆಯಲ್ಲಿ ಸಹಗಾಯಕಿಯಾಗಿ ಧ್ವನಿಗೂಡಿಸಿದ್ದು ಅಕ್ಷತಳಾ ಗಾಯನಕ್ಕೆ ಹೆಚ್ಚು ಮೆರಗು ದೊರೆತಂತಾಯಿತು.

ದುಬಾಯಿಯಲ್ಲಿ ನಡೆಯುವ ಅದ್ಧೂರಿ “ದೂಮ್ ದಮಾಕ” 2013 ಮತ್ತು 2016ರಲ್ಲಿ ಸ್ಯಾಂಡಲ್‍ವುಡ್, ಬಾಲಿವುಡ್ ಗಾಯಕರ ಜೊತೆಗೂಡಿ ಗಾಯನದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಠಿಸಿ ಕೊಂಡಿದ್ದಾಳೆ.

2014 ಗಾಯನ ಲೋಕದಲ್ಲಿ ದಾಖಲೆಯಾದ ವರ್ಷ ಗಲ್ಫ್ ದೇಶದಲ್ಲಿ ಶೋಧನ್ ಪ್ರಸಾದ್ ನಿರ್ಮಾಣವಾದ ಮೊದಲ ತುಳು ಚಲನ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಅವಕಾಶ ಮೊದಲ ಬಾರಿಗೆ ಬೆಳ್ಳಿ ಪರದೆಯ ಮೂಲಕ ಚಿತ್ರಪ್ರಪಂಚದಲ್ಲಿ ಸುಮಧುರ ಗೀತೆ ವಿಶ್ವವ್ಯಾಪಿಯಾಯಿತು. ಅಕ್ಷತಾಳ ತುಳು ಚಿತ್ರ ಗೀತೆ ಯೂಟ್ಯೂಬ್ ನಲ್ಲಿ ಒಂದುವರೆ ಲಕ್ಷಗಿಂತಲೂ ಹೆಚು ಆಲಿಸಿದ್ದಾರೆ.

ತುಳು ಸಿನೆಮೋತ್ಸವ ಪ್ರಶಸ್ತಿಗೆ ಪ್ರಖ್ಯಾತ ಗಾಯಕಿ ಅನುರಾಧ ಭಟ್, ಮತ್ತು ಚಿತ್ರಾರೊಂದಿಗೆ ಅಕ್ಷತಳಾ ಹೆಸರು ಆಯ್ಕೆಯಾಗಿತ್ತು. ತುಳು ಕಿರು ಚಿತ್ರ “ಬೊಳ್ಕಿರ್” ಮತ್ತು ಪರ್ಬ ದಲ್ಲಿ ಗಾಯನ ಅವಕಾಶ ಪ್ರಖ್ಯಾತ ಗಾಯಕ ರಮೇಶ್ ಚಂದ್ರ ರೊಂದಿಗೆ ಗಾಯನದ ಅವಕಾಶ. 2015 ರಲ್ಲಿ “ಎಕ್ಕ ಸಕ್ಕ” ತುಳು ಸಿನೆಮಾದಲ್ಲಿ ಹಾಡಿರುವ ಗೀತೆ ತುಂಬಾ ಜನಪ್ರಿಯವಾಗಿದೆ.

ಸಂಗೀತ ಕಲಿಕೆಯಲ್ಲಿ “ಸಂಗೀತ್ ಭೂಷಣ್” ಮುಗಿಸಿ ಹಿಂದೂಸ್ಥಾನಿ ಸಂಗೀತದಲ್ಲಿ “ವಿರಾಸತ್” ತರಭೇತಿಯನ್ನು ಶ್ರೀ ಸುರೇಶ್ ವಾಡೆಕರ್ ಜಿ ಯವರ ಅಜಿವಸನ್ ಮುಂಬೈಯಲ್ಲಿ ಪಡೆಯುತಿದ್ದಾಳೆ.

ತನ್ನ ಅಪೂರ್ವ ಕಂಠಸಿರಿಯ ಮೂಲಕ ಅಂತಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

madhura

ಮಧುರಾ ವಿಶ್ವನಾಥ್
ಕರ್ನಾಟಕ ಕಡಲತೀರದ ಪ್ರಖ್ಯಾತ ವಿಧ್ವಾನ್ ಮೂದ್ನೂರ್ ವಿ. ರಘುರಾಮ್ ರವರ ಮಗಳಾಗಿದ್ದು ತಂದೆಯವರಿಂದಲೇ ಕರ್ನಾಟಿಕ್ ಸಂಗೀತಾಭ್ಯಾಸವನ್ನು ಪಡೆದವರು ಶ್ರೀಮತಿ ಮಧುರಾ ವಿಶ್ವನಾಥ್. ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಿಸಿ ಬೆಳೆದು ಬಂದಿರುವುದರಿಂದ ಬಾಲ್ಯದಿಂದಲೇ ಕ್ರಮಬದ್ಧವಾಗಿ ಸಂಗೀತದ ವಿವಿಧ ಹಂತವನ್ನು ಪೂರ್ಣಗೊಳಿಸಿದ್ದಾರೆ. ಸುಮಧುರ ಕಂಠಸಿರಿಯನ್ನು ವರದಾನವಾಗಿ ಪಡೆದಿರುವ ಮಧುರಾ ವಿಶ್ವನಾಥ್ರವರು ಭಾರತದ ವಿವಿಧ ಭಾಗಗಳಲ್ಲಿ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸನ್ಮಾನ ಗೌರವ ಪಡೆದಿದ್ದಾರೆ. ಹಲವಾರು ಬಾರಿ ಟಿ.ವಿ.ಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಹಲವು ಧ್ವನಿ ಸುರುಳಿಯಲ್ಲಿ ತಮ್ಮ ಕಂಠಸಿರಿಯಲ್ಲಿ ಮೂಡಿಬಂದಿರುವ ಗೀತೆಗಳು ಜನಪ್ರಿಯತೆಯನ್ನು ಗಳಿಸಿದೆ.

madhura-vishwanath

ಯು.ಎ.ಇ. ಯಲ್ಲಿ ಹಲವುಬಾರಿ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದಾರೆ. ದುಬಾಯಿಯಲ್ಲಿ ಸಾಮೂಹಿಕ ವರಮಹಾ ಲಕ್ಷ್ಮೀ ಪೂಜಾ ಸಮಾರಂಭ, ದುಬಾಯಿಯಲ್ಲಿ ಸಾರ್ವಜನಿಕೆ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ, ದುಬಾಯಿಯಲ್ಲಿ ಗಣಪತಿ ಉತ್ಸವ ಹಾಗೂ ಇನ್ನಿತರ ಜಾತಿ ಸಮುದಾಯಗಳ ಪೂಜಾ ಸಮಾರಂಭ ಹಾಗೂ ಇನ್ನಿತರ ಹಲವು ಕಾರ್ಯಕ್ರಮಗಳಲ್ಲಿ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿರುವ ಮಧುರಾ ವಿಶ್ವನಾಥ್ ಇಂಜಿನಿಯರ್ ಪದವಿದರೆಯಾಗಿದ್ದಾರೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಆಯ್ಕೆಯಾಗಿದ್ದಾರೆ.

vaishnavi-shetty

ವೈಷ್ಣವಿ ಅರುಣ್ ಶೆಟ್ಟಿ
ಶ್ರೀ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಕವಿತಾ ಶೆಟ್ಟಿದಂಪತಿಗಳ ಮಗಳಾಗಿರುವ ವೈಷ್ಣವಿ ಶೆಟ್ಟಿಯವರು ತಮ್ಮ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಕೊಡಗು ಜಿಲ್ಲೆಯಲ್ಲಿ ಹಾಗೂ ಕಾಲೇಜು ಹಂತವನ್ನು ಮಂಗಳೂರಿನ ಸೈಂಟ್ ಅಲೋಸಿಯಸ್ ನಲ್ಲಿ, ಎಂ.ಬಿ.ಎ.ಯನ್ನು ಶ್ರೀನಿವಾಸ್ ಇನಿಸ್ಟಿಟ್ಯೂಟ್ ಟೆಕ್ನಾಲಜಿ ಮುಗಿಸಿದ್ದಾರೆ. ಪ್ರಸ್ತುತ ಜೆ.ಕೆ. ಟೈರ್’ಸ್ ನಲ್ಲಿ ಉದ್ಯೋಗಿಯಾಗಿದ್ದಾರೆ.

vaishnavi-shetty-panel

ತಮ್ಮ ಸಂಗೀತ ಅಭ್ಯಾಸವನ್ನು ಕೊಡಗಿನಲ್ಲಿ ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ವಿಧೂಷಿ ನಿರ್ಮಲಾ ಬೋಪಣ್ಣರವರಲ್ಲಿ ಅಭ್ಯಾಸ ಮಾಡಿದರು. ತಮ್ಮ ಅತೀ ಕಿರಿಯ 3ನೇ ವಯಸ್ಸಿನಿಂದಲೆ ಸಂಗೀತದಲ್ಲಿ ಅಸಕ್ತಿಯನ್ನು ಮೂಡಿಸಿಕೊಂಡು ಶಾಲಾ ಕಾಲೇಜು ಹಂತದಲ್ಲೇ ಭಾವಗೀತೇ, ಜಾನಪದ ಗೀತೆ, ಭಕ್ತಿ ಗೀತೆ ಚಿತ್ರಗೀತೆಗಳ ತಾಲೂಕು ಮಟ್ಟ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ಸುಮಧುರ ಕಂಠಸಿರಿಯಲ್ಲಿ ಹಲವು ಬಾರಿ ರೇಡಿಯೊದಲ್ಲಿ ಸಹ ಗೀತೆಗಳ ಮೂಲಕ ಕೇಳುಗರ ಮನಗೆದ್ದಿದ್ದಾರೆ.

ಯು.ಎ.ಇ.ಯಲ್ಲಿ ನಡೆಯುವ ಹಲವಾರು ಸಮಾರಂಭಗಳಲ್ಲಿ ತಮ್ಮ ಗಾಯನದ ಮೂಲಕ ಅತ್ಯುತ್ತಮ ಗಾಯಕಿ ಎಂಬ ಪ್ರಸಂಸೆಗೆ ಪಾತ್ರರಾಗಿದ್ದಾರೆ. ಯು.ಎ.ಇ. ಬಂಟ್ಸ್ ಸ್ನೇಹಮಿಲನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ದುಬಾಯಿಯಲ್ಲಿ ಸಾಮೂಹಿಕ ಶ್ರೀ ವರಮಹಾಅಕ್ಷ್ಮೀ ದಸಮಾನೋತ್ಸವ ಪೂಜಾ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಇತ್ತಿಚೆಗೆ ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಏರ್ಪಡಿಲಾದ ಯು.ಎ.ಇ. ಮಟ್ಟದ ಸಮೂಹ ಗೀತೆ ಸ್ಪರ್ಧೆಯಲ್ಲಿ ತಮ್ಮ ಕಂಠಸಿರಿಯಲ್ಲಿ ಧ್ವನಿಗೂಡಿಸಿ ತಮ್ಮ ತಂಡಕ್ಕೆ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಆಯ್ಕೆಯಾಗಿದ್ದಾರೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಪ್ರತಿಭಾನ್ವಿತ ಪುರುಷ ಗಾಯಕರ ಚುಟುಕು ಪರಿಚಯ…

raghavendra-prabhakar

ರಾಘವೇಂದ್ರ
ರಾಘವೇಂದ್ರ ರವರು ಮೂಲತ ಬೆಂಗಳೂರಿನವರು. ಇವರ ತಾಯಿ ಮತ್ತು ಅಜ್ಜಿಯವರು ಗಾಯಕಿಯರು. ಸಂಗೀತ ಪ್ರಂಪರೆಯೆ ಕುಟುಂಬದಲ್ಲಿ ಜನಿಸಿದರಿಂದ ಬಾಲ್ಯದಿಂದಲೇ ಸಂಗೀತದ ಕಡೆಗೆ ಓಲವುಮೂಡಿಸಿ ಕೊಂಡು ಸಂಗೀತಾಭ್ಯಾಸವನ್ನು ಮಾಡುತ್ತಾ ಶಾಲಾ ಹಂತದಲ್ಲೇ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದರು.

ಕಾಲೇಜು ಹಂತದಲ್ಲಿ ಕಾರ್ಯಕ್ರಮಗಳಲ್ಲಿ ಗೀತೆಯ ಮೂಲಕ ಪ್ರಸಿದ್ದಿಯನ್ನು ಪಡೆಯುವುದರ ಜೊತೆಗೆ ಹಲವಾರು ಸ್ಪರ್ಧೆಗಳಲ್ಲಿ ಜಯಗಳಿಸುತಿದ್ದರು. ಕ್ರೈಸ್ಟ್ ಕಾಲೇಜಿನ ಬೆಸ್ಟ್ ಸಿಂಗರ್, ಬಿಐಟಿಎಸ್ ಪಿಲನಿ ಬೆಸ್ಟ್ ಸಿಂಗರ್, ನ್ಯಾಶನಲ್ ಲಾ ಸ್ಕೂಲ್ ಬೆಸ್ಟ್ ಸಿಂಗರ್, 2006 ರಲ್ಲಿ ಬಾಲ್ಟಿಮೋರ್ ಅಕ್ಕ ಸಮ್ಮೇಳನದಲ್ಲಿ ತಮ್ಮ ಗಾಯನದ ಮೂಲಕ ಸರ್ವರ ಮೆಚ್ಚುಗೆ ಪಡೆದಿದ್ದಾರೆ.

ಮಲ್ಟಿ ನ್ಯಾಶನಲ್ ಅಯಿಲ್ ಅಂಡ್ ಗ್ಯಾಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ರಾಘವೇಂದ್ರ ರವರುತಮ್ಮ ಅಪೂರ್ವ ಕಂಠಸಿರಿಗಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

krishna-prasad

ಕೃಷ್ಣ ಪ್ರಸಾದ್ ರಾವ್
ಕರ್ನಾಟಕದ ಕಡತೀರದ ತುಳುನಾಡಿನ ಶ್ರೀ ಜನಾರ್ಧನ್ ರಾವ್ ಮತ್ತು ಶ್ಯಾಮಲ ರಾವ್ ದಂಪತಿಗಳ ಮಗನಾಗಿ ಜನಿಸಿ ಉತ್ತಮ ಪರಿಸರದಲ್ಲಿ ಬೆಳೆದು ಬಾಲ್ಯದಲ್ಲೇ ಸಂಗೀತ, ಕಲೆ, ಸಾಹಿತ್ಯದ ಬಗ್ಗೆ ಅಪಾರ ಒಲವು ಮೂಡಿಸಿಕೊಂಡು ಬೆಳೆದು ಬಂದವರು. ಶಾಲಾ ಕಾಲೇಜು ಹಂತದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷೋತ್ಸವದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದವರು.

kri

ಮಾಂಬಡಿ ಸುಬ್ರಹ್ಮಣ್ಯ ಭಟ್ ಮತ್ತು ಗಿರೀಶ್ ನಾವಡ ಮತ್ತು ದೀಪಕ್ ಪೇಜಾವರ ರಿಂದ ಯಕ್ಷಗಾನದ ಹಿಮ್ಮೇಳ ಮುಮ್ಮೇಳದ ತರಭೇತಿಯನ್ನು ಪಡೆದವರು. ಚೆಂಡೆ ವಾದನ, ಮೃದಂಗ, ಚಕ್ರತಾಳ ಹಾಗೂ ವಿವಿಧ ಕಥಾಪಾತ್ರಗಳಿಗೆ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಅಭಿನಯಿಸಿದ ಅಪ್ರತಿಮ ಕಲಾವಿದ. ಗಾಯನ ಲೋಕದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿದವರು. ಕೆಲವು ವರ್ಷಗಳ ಹಿಂದೆ ಶಾರ್ಜಾ ಕರ್ನಾಟಕ ಸಂಘದ “ಮಯೂರ ರಾಜ ” ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ರನ್ನರ್ ಅಪ್ ಸ್ಥಾನ ಪಡೆದವರು. ದುಬಾಯಿಯಲ್ಲಿ ಯಕ್ಷ ಮಿತ್ರರ ಆಶ್ರಯದಲ್ಲಿ ನಡೆಯುವ ವಿಜೃಂಬಣೆಯ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಮುಮ್ಮೇಳದಲ್ಲಿ ತಮ್ಮ ಪ್ರತಿಬೆಯನ್ನು ಅನಾವರಣ ಗೊಳಿಸಿದ್ದಾರೆ.

ಇವರ ಧರ್ಮಪತ್ನಿ ವಿಧ್ವಾನ್ ರಂಜನಿ ರಾವ್ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯದಲ್ಲಿ ಪ್ರವೀಣೆಯಾಗಿದ್ದು ಕೃಷ್ಣ ಪ್ರಸಾದ್ ರಾವ್ ರವರಲ್ಲಿರುವ ಕಲೆಗೆ ಸಾಥ್ ನೀಡುತ್ತಿದ್ದಾರೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಆಯ್ಕೆಯಾಗಿದ್ದಾರೆ.

shahid

ಶಾಹಿದ್ ಶಬಾಜ್

ಕರ್ನಾಟಕ ಕಡಲ ತೀರದ ರಮಣಿಯ ದೃಶ್ಯ ಲೋಕ ಕಾರವಾರದ ಕುಮುಟಾ ದವರು. ತಂದೆ ಮಹಮ್ಮದ್ ಅಕ್ವಿಲ್ ಖಾಜಿ, ತಾಯಿ ಫರಿಧಾ ಅಕ್ವಿಲ್ ಖಾಜಿ, ಶಾಹಿದ್ ಶಬಾಜ್ ಕುಮುಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ. ಎಸ್ಸಿ. ಪದವಿದರರು ತಮ್ಮ ಪ್ರೌಢಶಾಲಾ ಹಂತದಲ್ಲೇ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಕವ್ವಾಲಿ ಹಾಡುವುದರ ಮೂಲಕ ಪ್ರಥಮ ಬಹುಮಾನ ಪಡೆದು ತಮ್ಮ ಗಾಯನದ ಹಾದಿಯಲ್ಲಿ ಯಶಸ್ವಿ ಮೊದಲ ಹೆಜ್ಜೆಯನ್ನಿಟವರು. ಕಾಲೇಜು ಹಂತದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹಿಂದಿ ಗೀತೆಗೆ ಪ್ರಥಮ ಬಹುಮಾನ ಪಡೆದವರು. ಮೈಸೂರು ದಸರಾ ಗಾಯನ ಸ್ಪರ್ಧೆಯಲ್ಲಿ 2010 ಮತ್ತು 2012 ರಲ್ಲಿ ಎರ್ಡು ಬಾರಿಯೂ ಪ್ರಥಮ ಸ್ಥಾನ ಚಿನ್ನದ ಪದಕದೊಂದಿಗೆ ಜಯ ಗಳಿಸಿದವರು.ಯು.ಎ.ಇ. ಯಲ್ಲಿ ದಾನ್ಯೂಬ್ ಆಯೋಜಿಸಿದ್ದ ಪ್ರತಿಷ್ಠಿತ “ವಾಯಿಸ್ ಆಫ್ ಯು.ಎ.ಇ.” ಗಾಯನ ಸ್ಪರ್ಧೆಯ ವಿಜೇತರಿವರು.

ಶ್ರೀಲಂಕದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರೀಲಂಕದ ಡೈಲಿ ಮಿರರ್ ನ್ಯೂಸ್ ನಲ್ಲಿ ಸಂದರ್ಶನ ಲೇಖನ ಪ್ರಕಟವಾಗಿದೆ.

ಅಂತಿಮ ಸುತ್ತಿನಲ್ಲಿ ಭಾಗವಹಿಸಲು ತಮ್ಮ ಅಪೂರ್ವ ಕಂಠ ಸಿರಿಯ ಪ್ರತಿಭೆಯ ಮೂಲಕ ಆಯ್ಕೆಯಾಗಿದ್ದಾರೆ.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.