Photot: Ashok Belman
ದುಬೈ: ಬಿಲ್ಲವ ಫ್ಯಾಮಿಲಿ ದುಬೈ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣಗುರು ಪೂಜಾ ಕಾರ್ಯಕ್ರಮವು ಶುಕ್ರವಾರ ಬರ್-ದುಬೈಯ ಸಿಂಧಿ ಸೆರೆಮನಿ ಹಾಲ್ ನಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಪ್ರವೀಣ್ ಭಟ್ ಕಾರ್ಯಕ್ರಮದಲ್ಲಿ ಪೂಜಾ ವಿಧಿ-ವಿಧಾನವನ್ನು ನಡೆಸಿಕೊಟ್ಟರು. ಬಿಲ್ಲವ ಫ್ಯಾಮಿಲಿಯ ಎಲ್ಲ ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮೊಗವೀರ ದುಬೈಯವರು ಭಜನೆಯನ್ನು ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟ ಹಾಗು ಪ್ರಸಾದ ವಿತರಿಸಲಾಯಿತು.
Comments are closed.