ಅಂತರಾಷ್ಟ್ರೀಯ

ಅಕ್ಟೋಬರ್ 11ರಿಂದ 14ರ ವರೆಗೆ ಅಜ್ಮಾನ್ ನಲ್ಲಿ ಅರಬ್ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್

Pinterest LinkedIn Tumblr

TDI APL Pressmeet

ಯುಎಇಯಲ್ಲೇ ಅತಿದೊಡ್ಡ ದೇಹದಾಢ್ರ್ಯ ಚಾಂಪಿಯನ್‍ಶಿಪ್ ‘ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್’ ಯಶಸ್ವಿಯಾಗಿ ನಡೆಸಿದ ಬಳಿಕ ಟೀಮ್ ದುಬೈ ಇಂಡಿಯನ್ಸ್ ಇದೀಗ ಬೃಹತ್ ಟೆನ್ನಿಸ್ ಬಾಲ್ ಕ್ರಿಕೆಟ್ ಉತ್ಸವವನ್ನು ಆಯೋಜಿಸಲು ಮುಂದಾಗಿದೆ. ಟೆನ್ನಿಸ್ ಬಾಲ್ ಕ್ರಿಕೆಟ್ ‘ಅರಬ್ ಪ್ರೀಮಿಯರ್ ಲೀಗ್ (ಎಪಿಎಲ್)’ ಉತ್ಸವ 2016ನ್ನು ನಡೆಸಲುದ್ದೇಶಿಸಲಾಗಿದೆ. ಅಜ್ಮಾನ್ ಯುವ ಮತ್ತು ಕ್ರೀಡಾ ಪ್ರಾಧಿಕಾರದ ಸಹಯೋಗದೊಂದಿಗೆ ಅಜ್ಮಾನ್ ಓವಲ್ ನಲ್ಲಿ ಅಕ್ಟೋಬರ್ 11ರಿಂದ 14ರ ವರೆಗೆ ಈ ಕ್ರೀಡಾಕೂಟ ನಡೆಯಲಿದೆ ಎಂದು ಸಂಸ್ಥೆಯು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

Screenshot_2016-08-18-17-47-47-1

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಅತಿದೊಡ್ಡ ಮನೋರಂಜಕ ಕ್ರೀಡೆಯಾಗಿದೆ. ಭಾರತ, ಪಾಕಿಸ್ತಾನ ಮತ್ತು ಜಿಸಿಸಿಯಲ್ಲಿ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಅತ್ಯಂತ ಜನಪ್ರಿಯವಾದುದು. ಸಚಿನ್ ತೆಂಡೂಲ್ಕರ್, ಯೂಸಫ್ ಪಠಾಣ್, ಇರ್ಫಾನ್ ಪಠಾಣ್, ವಸೀಂ ಅಕ್ರಂ, ವಾಕರ್ ಯುನಿಸ್ ಮುಂತಾದ ಜನಪ್ರಿಯ ಕ್ರೀಡಾಪಟುಗಳೂ ತಮ್ಮ ಹದಿ ಹರೆಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿದವರು. ಭಾರತದಲ್ಲಿ ಗಲ್ಲಿ ಕ್ರಿಕೆಟ್ ಇನ್ನೂ ಹೆಚ್ಚು ಜನಪ್ರಿಯವಾದುದು.

ಕ್ರೀಡೆಗೆ ಪ್ರೋತ್ಸಾಹ ನೀಡುವ ಯುಎಇಯಲ್ಲಿ ವರ್ಷಕ್ಕೆ ಸುಮಾರು 200ಕ್ಕೂ ಅಧಿಕ ಸಣ್ಣ ಪ್ರಮಾಣದ ಕ್ರಿಕೆಟ್ ಕ್ರೀಡಾ ಕೂಟಗಳು ನಡೆಯುತ್ತವೆ. ಪ್ರತಿ ವಾರಾಂತ್ಯದಲ್ಲಿ ಇಲ್ಲಿ ಕ್ರಿಕೆಟ್ ಪ್ರೇಮಿಗಳು ಟೂರ್ನಮೆಂಟ್‍ಗಳಲ್ಲಿ ಆಡುತ್ತಾರೆ. ಅರಬ್ ಪ್ರೀಮಿಯರ್ ಲೀಗ್ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಮೆಂಟ್ ಬೃಹತ್ 2,00,000 ಎಇಡಿ (36,45,397 ರೂ.) ಮೊತ್ತ ಬಹುಮಾನವನ್ನು ಹೊಂದಿದೆ. ಸುಮಾರು 11 ಏಷ್ಯಾ ರಾಷ್ಟ್ರಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಅಲ್ಲದೆ ಯುರೋಪಿಯನ್ ದೇಶ ಫಿನ್ ಲ್ಯಾಂಡ್ ನ ತಂಡ ಇದೇ ಮೊದಲ ಬಾರಿಗೆ ಯುಎಇಯಲ್ಲಿ ಆಟವಾಡುತ್ತಿದೆ.

ಬಹುಮಾನ ವಿವರ
ವಿಜೇತರಿಗೆ: AED 111,111 (20,25,000 ರೂ.) ನಗದು, ಅರಬ್ ಪ್ರೀಮಿಯರ್ ಲೀಗ್ ಟ್ರೋಫಿ
ದ್ವಿತೀಯ ಬಹುಮಾನ: AED 50,000 ಎಇಡಿ (9,11,000 ರೂ.) ನಗದು, ಅರಬ್ ಪ್ರೀಮಿಯರ್ ಲೀಗ್ ಟ್ರೋಫಿ
ಮ್ಯಾನ್ ಆಫ್ ದ ಸೀರೀಸ್: AED 5,000
ಮ್ಯಾನ್ ಆಫ್ ದ ಮ್ಯಾಚ್ (ಪ್ರತಿ ಪಂದ್ಯ)/ ಬೆಸ್ಟ್ ಬ್ಯಾಟ್ಸ್ ಮ್ಯಾನ್/ ಬೆಸ್ಟ್ ಬೌಲರ್/ ಬೆಸ್ಟ್ ಕ್ಯಾಚ್ ಬಹುಮಾನಗಳೂ ಇರುತ್ತವೆ.

4 ದಿನಗಳ ಈ ಕ್ರೀಡಾಕೂಟದಲ್ಲಿ ದೇಶೀ ಶೈಲಿಯ ಎಲ್ಲ ರೀತಿಯ ಮನೋರಂಜನೆಗಳಿರುತ್ತವೆ. ಲೈವ್ ವಿಡಿಯೊ ಆನ್‍ಲೈನ್ ಪ್ರಸಾರವೂ ಇರುತ್ತದೆ. www.tenniscricket.in ನಲ್ಲಿ ಲೈವ್ ವೆಬ್ ವಿಡಿಯೊ ಪ್ರಸಾರವಿರುತ್ತದೆ ಮತ್ತು www.famecrick.com ನಲ್ಲಿ ಲೈವ್ ಸ್ಕೋರಿಂಗ್ ಮಾಹಿತಿ ಲಭ್ಯವಿರುತ್ತದೆ. ಪ್ರತ್ಯೇಕ ಕುಟುಂಬ ಆಸನ ವ್ಯವಸ್ಥೆ, ಮಕ್ಕಳ ಆಟದ ಪ್ರದೇಶ ಮುಂತಾದ ಎಲ್ಲ ರೀತಿಯ ಸೌಲಭ್ಯಗಳೂ ಇರುತ್ತವೆ.

ಈ ಕುರಿತ ಮಾಹಿತಿ ನೀಡಿದ ಪತ್ರಿಕಾಗೋಷ್ಠಿಯಲ್ಲಿ ಅರಬ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷ ಆಫ್ರೋಝ್ ಅಸಾದಿ, ಟೀಂ ದುಬೈ ಇಂಡಿಯನ್ಸ್ ಅಧ್ಯಕ್ಷ ಇಮ್ರಾನ್ ಖಾನ್ ಎರ್ಮಾಳ್, ಎಪಿಎಲ್ ಶಿಸ್ತು ಸಮಿತಿ ಉಸ್ತುವಾರಿ ಆರಿಫ್ ಖಾನ್, ಟೀಂ ದುಬೈ ಪ್ರಧಾನ ಕಾರ್ಯದರ್ಶಿ ಯೂಸುಬ್ ಅನ್ಸಾರ್, ಅಬ್ದುಲ್ ರೆಹ್ಮಾನ್, ರಮೀಝ್ ಶಿರೂರ್, ಸಯ್ಯದ್ ಸಲೀಂ ಮುಂತಾದವರು ಉಪಸ್ಥಿತರಿದ್ದರು.

Comments are closed.