ಗಲ್ಫ್

ದುಬೈನಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

Pinterest LinkedIn Tumblr

Vishwakarma pooja dubai _Nov 15_2015-002

ಶ್ರೀ ವಿಶ್ವಕರ್ಮ ಸೇವಾ ಸಮಿತಿ, ಯು.ಎ.ಇ., ದುಬೈ ಇದರ ಹನ್ನೆರಡನೆ ವಾರ್ಷಿಕೋತ್ಸವ ಹಾಗೂ ಹದಿಮೂರನೆ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಕಳೆದ ದಿನಾಂಕ 06.11.2015 ರ ಶುಕ್ರವಾರ ದುಬೈನ ಗಿಸೈಸಿನಲ್ಲಿರುವ ಇಂಡಿಯನ್ ಅಕಾಡಮಿ ಶಾಲೆಯ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

Vishwakarma pooja dubai _Nov 15_2015-001

Vishwakarma pooja dubai _Nov 15_2015-003

Vishwakarma pooja dubai _Nov 15_2015-004

Vishwakarma pooja dubai _Nov 15_2015-005

Vishwakarma pooja dubai _Nov 15_2015-006

Vishwakarma pooja dubai _Nov 15_2015-007

Vishwakarma pooja dubai _Nov 15_2015-008

Vishwakarma pooja dubai _Nov 15_2015-009

Vishwakarma pooja dubai _Nov 15_2015-010

ಬೆಳಗ್ಗೆ 9.30ಕ್ಕೆ ಕಲಶ ಪ್ರತಿಷ್ಟೆಯೊಂದಿಗೆ ಮಧ್ಯಾಹ್ನ 1.00 ಗಂಟೆಯ ಪರ್ಯಂತ ನಡೆದ ಪೂಜಾ ಕೈಂಕರ್ಯವು ಸುರತ್ಕಲ್ಲಿನ ಪುರೋಹಿತ್ ನಾರಾಯಣ ಆಚಾರ್ಯರ ದಿವ್ಯ ಉಪಸ್ಥಿತಿ ಹಾಗೂ ನೇತೃತ್ವದಲ್ಲಿ ಬಹಳ ವಿಧಿವತ್ತಾಗಿ ನಡೆಯಿತು. ಬಿ.ಎಮ್. ದಿನೇಶ ಆಚಾರ್ಯರ ನೇತೃತ್ವದಲ್ಲಿ ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಪಕ್ಕವಾದ್ಯ ಹಾರ್ಮೋನಿಯಂನಲ್ಲಿ ಸುರೇಶ್ ಪೈ ಹಾಗೂ ತಬಲಾ ವಾದನದಲ್ಲಿ ಮಿಥುನ್ ಶೆಣೈ ಮತ್ತು ಅನಂತ ಆಚಾರ್ಯರು ಸಹಕರಿಸಿದರು

ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆ ನಡೆದು ತೀರ್ಥ ಪ್ರಸಾದದ ಬಳಿಕ ಮಹಾಪ್ರಸಾದ ವಿತರಣೆಯೊಂದಿಗೆ ಬೆಳಗ್ಗಿನ ಪೂಜಾ ಕಾರ್ಯಕ್ರಮ ಅದ್ದೂರಿಯಿಂದ ಕೊನೆಗೊಂಡಿತು.

Vishwakarma pooja dubai _Nov 15_2015-011 .

Vishwakarma pooja dubai _Nov 15_2015-012

Vishwakarma pooja dubai _Nov 15_2015-013

Vishwakarma pooja dubai _Nov 15_2015-014

Vishwakarma pooja dubai _Nov 15_2015-015

Vishwakarma pooja dubai _Nov 15_2015-016

Vishwakarma pooja dubai _Nov 15_2015-017

Vishwakarma pooja dubai _Nov 15_2015-018

Vishwakarma pooja dubai _Nov 15_2015-019

Vishwakarma pooja dubai _Nov 15_2015-020

ಮಧ್ಯಾಹ್ನ ನಂತರದ ಕಾರ್ಯಕ್ರಮದ ಆರಂಭದಲ್ಲಿ ಸಭಾ ಕಾರ್ಯಕ್ರಮವು ಪುರೋಹಿತ್ ವಸಂತ್ ಆಚಾರ್ಯ, ವಾಣಿ ಉಪೇಂದ್ರ ಮತ್ತು ಶುಭ ಪ್ರಶಾಂತ್ ರ ಪ್ರಾರ್ಥನೆ ಮತ್ತು ದೀಪ ಬೆಳಗುವ ಮೂಲಕ ಪ್ರಾರಂಭವಾಯಿತು. ಸಮಿತಿಯ ಅಧ್ಯಕ್ಷರಾದ ಶೋಧನ್ ಆಚಾರ್ಯರು ಅತಿಥಿಗಳನ್ನು, ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಮತ್ತು ಸೇರಿದ ಎಲ್ಲಾ ಬಂಧುಗಳನ್ನು ಸ್ವಾಗತಿಸುತ್ತಾ, ಸಮಿತಿಯ ಕೆಲವೊಂದು ಕಾರ್ಯಕಲಾಪಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು.

ಬಳಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿದ ಪುರೋಹಿತ್ ನಾರಾಯಣ ಆಚಾರ್ಯ ಮತ್ತು ಅವರ ಶಿಷ್ಯರೂ ಆದ ಪುರೋಹಿತ್ ವಸಂತ ಆಚಾರ್ಯರನ್ನು ಸಮಿತಿಯ ಪರವಾಗಿ ಶಾಲು ಹೊದಿಸಿ, ಫಲತಾಂಬೂಲ ಸಹಿತ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಪುರೋಹಿತರು ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಸಮಾಜ ಬಾಂಧವರಿಗೆ ಕೆಲವು ಹಿತೋಕ್ತಿಗಳನ್ನು ನೀಡಿ ಸಂಘವು ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಕಾಣುವಂತಾಗಿ ಇಡೀ ವಿಶ್ವದಲ್ಲಿರುವ ವಿಶ್ವಕರ್ಮ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.

Vishwakarma pooja dubai _Nov 15_2015-021

Vishwakarma pooja dubai _Nov 15_2015-022

Vishwakarma pooja dubai _Nov 15_2015-023

Vishwakarma pooja dubai _Nov 15_2015-024

Vishwakarma pooja dubai _Nov 15_2015-025

Vishwakarma pooja dubai _Nov 15_2015-026

Vishwakarma pooja dubai _Nov 15_2015-027

Vishwakarma pooja dubai _Nov 15_2015-028

Vishwakarma pooja dubai _Nov 15_2015-029

Vishwakarma pooja dubai _Nov 15_2015-030

ಅಂದಿನ ಮುಖ್ಯ ಆತಿಥಿಗಳಾಗಿ ಮಸ್ಕತ್ ವಿಶ್ವಬ್ರಾಹ್ಮಣ ಒಕ್ಕೂಟದ ಅಧ್ಯಕ್ಷರಾದ ಗಣೇಶ ಆಚಾರ್ಯ ಆಗಮಿಸಿದ್ದರು. ಅವರನ್ನೂ ಶಾಲು ಹೊದಿಸಿ ಫಲತಾಂಬೂಲವನ್ನಿತ್ತು ನೆನಪಿನ ಕಾಣಿಕೆಯೊಂದಿಗೆ ಸಮಾಜ ಬಾಂಧವರ ಪರವಾಗಿ ಗೌರವ ಪತ್ರವನ್ನಿತ್ತು ಸನ್ಮಾನಿಸಲಾಯಿತು. ಶ್ರೀಯುತರು ಸುಮಾರು ಮೂವತ್ತು ವರ್ಷಗಳಿಂದ ಮಸ್ಕತ್ತಿನಲ್ಲಿ ನೆಲೆಸಿದ್ದು ಇತ್ತೀಚೆಗೆ ಅಲ್ಲಿಯ ಸಂಘವು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಆರಂಭದಿಂದಲೂ ಇವರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಸಂಘದ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರು ಸಮಯೋಚಿತವಾಗಿ ಮಾತನಾಡಿ ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ನತೆಯನ್ನು ಅರ್ಪಿಸುತ್ತಾ, ದುಬೈ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಕಾರ್ಯಕಾರೀ ಸಮಿತಿಯ ಹಿರಿಯ ಸದಸ್ಯರಾದ ಬಿ.ಎಂ. ದಿನೇಶ್, ಗಣಪತಿ ಆಚಾರ್ಯ ಹಾಗೂ ಹರಿಶ್ಚಂದ್ರ ಆಚಾರ್ಯ ಇವರುಗಳನ್ನು ಸನ್ಮಾನಿಸಲಾಯಿತು. ಸಮಿತಿಯ ವೆಬ್ ಸೈಟಿನ ನವೀಕರಣದ ಸದಸ್ಯರಾದ ದೀಪಕ್ ಆಚಾರ್ಯ, ರವಿಶಂಕರ್ ಆಚಾರ್ಯ ಮತ್ತು ವೃಷಿಕೇಶ್ ಆಚಾರ್ಯರನ್ನು ಸಮಯೋಚಿತವಾಗಿ ಗೌರವಿಸಲಾಯಿತು. ಶೈಕ್ಷಣಿಕವಾಗಿ ವಿಶೇಷ ಪ್ರತಿಭೆಗಾಗಿ ಕುಮಾರಿಯರಾದ ಪ್ರಣಮ್ಯ ಬೆಳವಾಯಿ, ಶ್ರೇಯಾ ಜಗದೀಶ್ ಮತ್ತು ಶೃತಿ ಪ್ರಕಾಶ್ ಇವರನ್ನು ಗೌರವಿಸಲಾಯಿತು.

Vishwakarma pooja dubai _Nov 15_2015-031

Vishwakarma pooja dubai _Nov 15_2015-032

Vishwakarma pooja dubai _Nov 15_2015-033

Vishwakarma pooja dubai _Nov 15_2015-034

Vishwakarma pooja dubai _Nov 15_2015-035

Vishwakarma pooja dubai _Nov 15_2015-036

Vishwakarma pooja dubai _Nov 15_2015-037

Vishwakarma pooja dubai _Nov 15_2015-038

Vishwakarma pooja dubai _Nov 15_2015-039

Vishwakarma pooja dubai _Nov 15_2015-040

ಈ ಕಾರ್ಯಕ್ರಮದ ನಿರೂಪಣೆಯನ್ನು ರವಿಶಂಕರ ಆಚಾರ್ಯರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಮಿತಿಯ ಕಾರ್ಯದರ್ಶಿಯಾದ ಗುರುರಾಜ ಆಚಾರ್ಯರು ಧನ್ಯವಾದ ಸಮರ್ಪಣೆ ಮಾಡಿದರು.

ಮನರಂಜನಾ ಕಾರ್ಯಕ್ರಮದಲ್ಲಿ ಮೊದಲಿಗೆ ಕುಮಾರಿ ವೈಷ್ಣವಿ ಆಚಾರ್ಯರಿಂದ ಸ್ವಾಗತ ನೃತ್ಯ ನೆರೆದ ಸಭಿಕರ ಮನರಂಜಿಸಿತು. ಕುಮಾರಿಯರಾದ ಸಿಂಧೂರ್ ಉಮೇಶ್, ಶೃಂಗಾರ್ ಉಮೇಶ್, ಮತ್ತು ಪ್ರಜ್ವಲ್ ಅರುಣ್ ಹಾಗೂ ಯಶಸ್ ರವೀಂದ್ರ ಇವರುಗಳು ಶ್ರೀ ಕಾಳಿಕಾಂಬಾ ಎಂಬ ದೃಶ್ಯ ನಾಟಕವನ್ನು ಬಹಳ ಮನೋಜ್ನವಾಗಿ ಅಭಿನಯಿಸಿದರು. ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ ಮನೆಮಾತಾದ ವಿಶ್ವಕರ್ಮ ಸಮಾಜದ ಹೆಮ್ಮೆಯ ಪುತ್ರಿ ಕುಮಾರಿ ಅಕ್ಷತಾ ರಾವ್ ಕನ್ನಡ ಹಾಡೊಂದನ್ನು ಹಾಡುವ ಮೂಲಕ ನೆರೆದ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಶ್ರೀಮತಿಯರಾದ ಪವಿತ್ರಾ ಗುರುರಾಜ್, ಸ್ವಾತಿ ರವಿ ಶಂಕರ್, ಸುಚಿತ್ರ ದೇವಿ ಪ್ರಸಾದ್, ಮತ್ತು ನಿಶಾ ರಾಜ್ ಇವರಿಂದ ಹಿಂದಿ ಚಿತ್ರಗೀತೆಯ ನೃತ್ಯಾಭಿನಯ ನೆರೆದ ಜನರ ಮನಸೂರೆಗೊಳಿಸಿತು. ಪ್ರಣಮ್ಯ ಬೆಳವಾಯಿ ಇವರ ಶಾಸ್ತ್ರೀಯ ನೃತ್ಯ ಜನರ ಮನಸೂರೆಗೊಳಿಸಿತು.

ಸೂರಜ್ ಆಚಾರ್ಯ, ಸಂದೇಶ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ವಿನಯರಾಜ್ ಆಚಾರ್ಯ, ಸೂರಜ್ ಸದಾಶಿವ ಆಚಾರ್ಯ ಮತ್ತು ಶಿವಪ್ರಸಾದ್ ಆಚಾರ್ಯ ಬೆಳ್ಮಣ್ ಇವರು ಲೇಜೀ ಮೂವರ್ಸ್ ಎಂಬ ಹೆಸರಿನ , ಆ ಹೆಸರಿಗ ತಕ್ಕಂತೆ ವಿಶಿಷ್ಟವಾಗಿ ಅಭಿನಯಿಸಿ ಜನರನ್ನು ರಂಜಿಸಿದರು. ಫ್ಯೂಝನ್ ನೃತ್ಯ ಪ್ರದರ್ಶನದಲ್ಲಿ ಕುಮಾರಿಯರಾದ ಸಿಂಧೂರ್ ಉಮೇಶ ಆಚಾರ್ಯ, ಶೃಂಗಾರ್ ಉಮೇಶ್ ಆಚಾರ್ಯ, ವೈಷ್ಣವಿ ಆಚಾರ್ಯ, ಅದಿತಿ ಆಚಾರ್ಯ ಅಲ್ಲದೆ ಪ್ರಜ್ವಲ್ ಅರುಣ್ ಆಚಾರ್ಯ ಮತ್ತು ಯಶಸ್ ರವೀಂದ್ರ ಆಚಾರ್ಯ ಇವರು ಭಾಗವಹಿಸಿದ್ದರು.
ನೃತ್ಯ ಪ್ರದರ್ಶನದಲ್ಲಿ ಶ್ರೀಮತಿಯರಾದ ಸ್ನೇಹಾ ಶಿವ ಪ್ರಸಾದ್ ಮತ್ತು ಸಹಾನ ವಿನಯರಾಜ್ ಇವರು ಅಮೋಘವಾಗಿ ಅಭಿನಯಿಸಿದರು. ಕ್ರೇಝ್ಹಿ ನೃತ್ಯ ಪ್ರಾಕಾರದಲ್ಲಿ ಪ್ರಜಿತ್, ವರುಣ್, ವಸಿಷ್ಟ್ ಮತ್ತು ಕುಮಾರಿಯರಾದ ಶ್ರೇಯಾ ಹಾಗೂ ಶ್ರದ್ಧಾ ಅಭಿನಯಿಸಿದರು. ಡ್ರೈವರ್ ಪ್ರಹಸನದಲ್ಲಿ ಶಿವಪ್ರಸಾದ್ ಆಚಾರ್ಯ, ಪ್ರಶಾಂತ್ ಆಚಾರ್ಯ, ರಾಘವೇಂದ್ರ ಆಚಾರ್ಯ, ಬಿ.ಎಂ. ದಿನೇಶ ಆಚಾರ್ಯ ಹಾಗು ವಿನಯರಾಜ್ ಆಚಾರ್ಯ ಅಭಿನಯಿಸಿ ನೆರೆದ ಜನರನ್ನು ರಂಜಿಸಿದರು.

ಪ್ರಶಾಂತ್ ಆಚಾರ್ಯ(ಅಲ್ ಕೋರ್ಹ್) ತಂಡದವರು ಕನ್ನಡ ಚಲನಚಿತ್ರದಿಂದ ಆಯ್ದ ಗೀತೆಗೆ ಉತ್ತಮವಾಗಿ ಅಭಿನಯಿಸಿದರು. ಅಬುಧಾಬಿಯಿಂದ ಧೀರಜ್ ಗೋಪಾಲ ಆಚಾರ್ಯ ತಂಡದವರಿಂದ ವಿವಿಧ ಗೀತೆಗಳ ತುಣುಕುಗಳಿಗೆ ಮೈ ಕುಲುಕಿಸಿ ನೃತ್ಯದ ಉತ್ತಮ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡರು. ಪ್ರಶಾಂತ್ ಆಚಾರ್ಯ(ಡಿ.ಐ.ಪಿ) ಇವರು ರಕ್ತ ಕಣ್ಣೀರು ಪ್ರಹಸನದ ಏಕ ಪಾತ್ರಾಭಿನಯ ನೆರೆದ ಸಭಿಕರ ಮನಕಲಕಿತು. ಅಬುಧಾಬಿಯ ಗಣೇಶ ಆಚಾರ್ಯರು ಕನ್ನಡ ಚಿತ್ರಗೀತೆಯನ್ನು ಹಾಡಿ ರಂಜಿಸಿದರು. ಪ್ರೇಮಲೋಕ ಪ್ರಹಸನದಲ್ಲಿ ಬಿ.ಎಂ. ದಿನೇಶ್, ಕೈಕಂಬ ಸೂರಜ್ ಆಚಾರ್ಯ, ಸಂದೇಶ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ವಿನಯರಾಜ್ ಆಚಾರ್ಯ, ಸೂರಜ್ ಸದಾಶಿವ ಆಚಾರ್ಯ, ಬೆಳ್ಮಣ್ ಶಿವಪ್ರಸಾದ ಆಚಾರ್ಯ, ಸ್ನೇಹಾ ಶಿವಪ್ರಸಾದ್ ಆಚಾರ್ಯ ಮತ್ತು ಸಹಾನಾ ವಿನಯರಾಜ್ ಆಚಾರ್ಯ ಇವರುಗಳು ಅಭಿನಯಿಸಿದ್ದರು. ಜೋಗದ ಸಿರಿ ಬೆಳಕಿನಲ್ಲಿ ಸಮೂಹ ಗೀತೆಯನ್ನು ರವಿಶಂಕರ ಆಚಾರ್ಯ, ಉಪೇಂದ್ರ ಆಚಾರ್ಯ, ವಾಣಿ ಉಪೇಂದ್ರ ಆಚಾರ್ಯ, ಶುಭ ಪ್ರಶಾಂತ್ ಆಚಾರ್ಯ ಹಾಗೂ ಪ್ರತಿಭಾ ಶೋಧನ್ ಆಚಾರ್ಯ ಇವರುಗಳು ಹಾಡಿ ಪರಿಸರಕ್ಕೆ ಬೆಳಕು ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ಯೋಜನೆಯ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆರಿಸಲಾಯಿತು. ಈ ಕಾರ್ಯಕ್ರಮವನ್ನು ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಶಾಂತಾರಾಮ ಆಚಾರ್ಯರು ನಡೆಸಿ ಕೊಟ್ಟರು.

ವರದಿ : ಶಾಂತಾರಾಮ ಆಚಾರ್ಯ

Write A Comment