ಕನ್ನಡ ಸ೦ಘ ಬಹ್ರೈನ್ ನ ಹಿರಿಯ ಸದಸ್ಯರಲ್ಲೊಬ್ಬರಾದ ಶ್ರೀಯುತ ಕೆ. ಬಿ. ಶೆಟ್ಟಿಯವರನ್ನು ಇತ್ತೀಚೆಗೆ ಶುಭ ಹಾರೈಕೆಗಳೊ೦ದಿಗೆ ಬೀಳ್ಕೊಡಲಾಯಿತು. ಸುಮಾರು ಮೂರು ದಶಕಗಳಿ೦ದ ಬಹ್ರೈನ್ ನಲ್ಲಿ ನೆಲೆಸಿ, ಕನ್ನಡ ಸ೦ಘದ ಸದಸ್ಯರೂ ಆಗಿದ್ದ ಇವರು ಸುಮಾರು ಎ೦ಟು ವರ್ಷಗಳ ಕಾಲ ಆಡಳಿತಮ೦ಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಮನರ೦ಜನಾ ಕಾರ್ಯದರ್ಶಿಯಾಗಿ ಹೆಸರುಗಳಿಸಿದ್ದರು.
ಸ೦ಘದ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಸದಸ್ಯರ ಪರವಾಗಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಆಡಳಿತ ಮ೦ಡಳಿಯ ಸದಸ್ಯರೊ೦ದಿಗೆ ಶ್ರೀಯುತರುಗಳಾದ ಆಸ್ಟಿನ್ ಸ೦ತೋಷ್, ಎ. ಡಿ. ಮೋಹನ್, ಭಾಸ್ಕರ್ ಶೆಟ್ಟಿ, ರಮೇಶ್ ಮ೦ಜೇಶ್ವರ್, ವಿಜಯ್ ನಾಯಕ್, ಜಗನ್ನಾಥ್ ಶೆಟ್ಟಿ, ದೂಮಣ್ಣ ರೈ, ನಾಗೇಶ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದು, ಶ್ರೀ ಕೆ. ಬಿ. ಶೆಟ್ಟಿಯವರೊ೦ದಿಗಿನ ತಮ್ಮ ಒಡನಾಟದ ಅನುಭವವನ್ನು ಹ೦ಚಿಕೊ೦ಡರಲ್ಲದೇ ಅವರಿಗೆ ಶುಭ ಹಾರೈಸಿದರು.
