ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ನಲ್ಲಿ ಇತ್ತೀಚೆಗೆ ಈದ್ ಅಲ್ ಫಿತರ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸುಮಾರು ಎರಡು ಗ೦ಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸ೦ಘದ ಹಿರಿಯ ಹಾಡುಗಾರರು ಹಾಡಿದರು, ಚಿಣ್ಣರು ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು. ಕೊನೆಯಲ್ಲಿ ಫ಼್ಯಾಶನ್ ಶೋ ಕೂಡ ನಡೆಯಿತು. ಆಡಳಿತ ಮ೦ಡಳಿಯ ಎಲ್ಲಾ ಪದಾಧಿಕಾರಿಗಳೂ ಕೊಲ್ಲಿ ರಾಷ್ಟ್ರದ ಅರಬರ ಉಡುಗೆ ಧರಿಸಿ ವೇದಿಕೆಗೆ ಬ೦ದಿದ್ದು ವಿಶೇಷವಾಗಿತ್ತು. ಆರ೦ಭದಲ್ಲಿ ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್ ಸಭಿಕರನ್ನು ಸ್ವಾಗತಿಸಿದರು, ಶ್ರೀಮತಿ ಸ೦ಧ್ಯಾ ಪೈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು. ನೆರೆದವರು ಮನರ೦ಜನೆಯನ್ನಷ್ಟೇ ಅಲ್ಲದೆ ಕೊನೆಯಲ್ಲಿ ರುಚಿಯಾದ ಔತಣವನ್ನೂ ಸವಿದರು.
ಗಲ್ಫ್
