ಗಲ್ಫ್

ನೇಮಕಾತಿ ಸಂಸ್ಥೆಗಳಿಗೆ ಹೊಸ ನಿತಾಕತ್ ಕಾರ್ಯಕ್ರಮ

Pinterest LinkedIn Tumblr

saudi1

ಜಿದ್ದಾ, ಜೂ.15: ನೇಮಕಾತಿ ಸಂಸ್ಥೆಗಳು ಹಾಗೂ ಕಚೇರಿಗಳಿಗಾಗಿ ಹೊಸ ನಿತಾಕತ್ (ಸೌದೀಕರಣ)ಕಾರ್ಯಕ್ರಮವೊಂದನ್ನು ಶೀಘ್ರದಲ್ಲೇ ಪರಿಚಯಿಸಲು ಕಾರ್ಮಿಕ ಸಚಿವಾಲಯ ಸಿದ್ಧತೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಬಂಧಿತ ವಲಯಗಳ ಆಧಾರದಲ್ಲಿ ಕಂಪೆನಿಗಳಿಗೆ ಪ್ರೋತ್ಸಾಹಕಗಳನ್ನು ನೀಡುವ ಹಾಗೂ ದಂಡ ವಿಧಿಸುವ ಕ್ರಮಗಳನ್ನು ಕಾರ್ಯಕ್ರಮ ಒಳಗೊಂಡಿದೆ.

ಕೆಂಪು, ಹಳದಿ ಹಾಗೂ ಹಸಿರು ವಲಯಗಳಲ್ಲಿರುವ ನೇಮಕಾತಿ ಕಂಪೆನಿಗಳ ಕಾರ್ಯ ನಿರ್ವಹಣೆಯನ್ನು ಅಳೆಯುವ ನಿರ್ದಿಷ್ಟ ಮಾನದಂಡಗಳನ್ನು ಹೊಸ ಕಾರ್ಯಕ್ರಮ ಆಧರಿಸಿದೆ ಎಂದು ಕಾರ್ಮಿಕ ಸಚಿವಾಲಯದ ಮಾಧ್ಯಮ ಕೇಂದ್ರ ನಿರ್ದೇಶಕ ತಯ್ಸೀರ್ ಅಲ್ ಮೊಫ್ರೆಜ್ ಹೇಳಿದ್ದಾರೆ.

ಕೆಂಪು ವಲಯ(ರೆಡ್‌ರೆನ್) ದಲ್ಲಿರುವ ಕಂಪೆನಿಗಳು ಕಾರ್ಯಕ್ರಮದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವುಗಳ ಪರವಾನಿಗೆಗಳನ್ನು ಹಿಂದೆಗೆಯಲಾಗುವುದು ಮತ್ತು ಹಳದಿ ವಲಯ(ಯೆಲ್ಲೊ ರೆನ್)ದ ನೇಮಕಾತಿ ಕಂಪೆನಿಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದವರು ಹೇಳಿದ್ದಾರೆ. ಯಾವುದೇ ನಿಯಮೋಲ್ಲಂಘನೆ ಮಾಡದ ಹಸಿರು ವಲಯದ ಕಂಪೆನಿಗಳು ಕೆಲವು ಅನುಕೂಲತೆಗಳನ್ನು ಪಡೆಯಲು ಅರ್ಹವಾಗಲಿವೆ. ನಾಗರಿಕರಿಗೆ ಒದಗಿಸುವ ಕಾರ್ಯ ನಿರ್ವಹಣೆ ಹಾಗೂ ಸೇವಾ ಗುಣಮಟ್ಟ, ನಿಯಮೋಲ್ಲಂಘನೆ ಬಗ್ಗೆ ಕಚೇರಿಗಳು ಹಾಗೂ ಕಂಪೆನಿಗಳ ವಿರುದ್ಧ ಕನಿಷ್ಠ ದೂರುಗಳು ಹಾಗೂ ಸ್ವದೇಶಿ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿ ಸಚಿವಾಲಯದ ನಿಯಮ ನಿಬಂಧನೆಗಳ ಅನುಷ್ಠಾನ ಮೊದಲಾದ ಅಂಶಗಳು ಹೊಸ ನಿತಾಕತ್ ಕಾರ್ಯಕ್ರಮದ ಮಾನದಂಡಗಳಲ್ಲಿ ಅಡಕವಾಗಿವೆ ಎಂದವರು ವಿವರಿಸಿದ್ದಾರೆ.

ನೇಮಕಾತಿ ಕಂಪೆನಿಗಳ ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಅವುಗಳಿಗೆ ಕಾರ್ಮಿಕ ಸಚಿವಾಲಯವು ವೀಸಾ ಮಿತಿ ಹೆಚ್ಚಳ ಹಾಗೂ ಹೊಸ ಖಾಸಗಿ ಹಾಗೂ ತ್ವರಿತ ಸೇವಾ ಕ್ಷೇತ್ರಗಳಿಗೆ ಪ್ರವೇಶ ಮೊದಲಾದ ನಿಗದಿತ ಅನುಕೂಲತೆಗಳನ್ನು ಒದಗಿಸಲಿದೆ. ಕಾರ್ಯಕ್ರಮದ ಮಾನದಂಡಗಳನ್ನು ಅನುಸರಿಸದ ಕಂಪೆನಿಗಳು ಸಚಿವಾಲಯದ ಈ ಸೇವೆಗಳನ್ನು ಪಡೆಯಲು ಅರ್ಹತೆ ಕಳೆದುಕೊಳ್ಳುತ್ತವೆ. ಹೊಸ ನಿತಾಕತ್ ಕಾರ್ಯಕ್ರಮದ ಪ್ರಾಥಮಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಸಕ್ತ ಕಾರ್ಯಾಚರಿಸಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿದೆ.

Write A Comment