ಗಲ್ಫ್

ಮೇ 7 ಕ್ಕೆ ಕೆಐಸಿಅಲ್ ಬರಹ ಘಟಕದ ಅಧೀನದಲ್ಲಿ ಮಿಹ್ರಾಜ್ ಸಂದೇಶ – 2015

Pinterest LinkedIn Tumblr

IMG-20150502-WA0303

ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಹಾಗೂ ಜುಲೈ 7 ರಂದು ನಡೆಯಲಿರುವ ಕೆ ಐ ಸಿ ಇಫ್ತಾರ್ ಸುಮಿತ್ 2015 ಇದರ ಪ್ರಚಾರಾರ್ಥ ದುಬೈ ಕೆ ಐ ಸಿ ಅಲ್ ಬರಹ ಘಟಕದ ಅಧೀನದಲ್ಲಿ ಇದೆ 07 ಮೇ 2015 ರ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 9 ಘಂಟೆಗೆ ಸರಿಯಾಗಿ ಅಲ್ ಬರಹದಲ್ಲಿರುವ ದುಬೈ ಕೆ ಎಂ ಸಿ ಸಿ ಸಭಾಂಗಣದಲ್ಲಿ ಮಿಹ್ರಾಜ್ ಸಂದೇಶ ಕಾರ್ಯಕ್ರಮವು ನಡೆಯಲಿರುವುದು .

ಕೆ ಐ ಸಿ ಅಲ್ ಬರಹ ಘಟಕಾಧ್ಯಕ್ಷರಾದ ಜನಾಬ್ ಉಸ್ಮಾನ್ ಕೆಮ್ಮಿಂಜೆ ರವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆ ಐ ಸಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಘಲ್ ಕೊಲ್ಪೆಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಖ್ಯಾತ ಪ್ರಭಾಷಣಕಾರ, ಬಹು ಭಾಷಾ ಪಂಡಿತ ಬಹು ಅಹಮ್ಮದ್ ಇಸಾಕ್ ಹುದವಿ ಅಲ್ ಇರ್ಶಾದಿ ರವರು ಮುಖ್ಯ ಪ್ರಭಾಷಣ ಮಾಡಲಿದ್ದು ಮಿಹ್ರಾಜ್ ಸಂದೇಶ ನೀಡಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಹಲವಾರು ದೀನೀ ಸ್ನೇಹಿಗಳು , ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳ ನೇತಾರರು , ಕೆ ಐ ಸಿ ನೇತಾರರು, ಹಿತೈಷಿಗಳು ಭಾಗವಹಿಸಲಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ , ರಾತ್ರಿಯ ಭೋಜನದ ವ್ಯವಸ್ತೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿರುತ್ತಾರೆ .

Write A Comment