ಮನಾಮ, ಎ.29: ಬಹರೈನ್ ಆಡಳಿತವು ಕೈಗೊಂಡಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಕನಿಷ್ಠ 28 ಮಂದಿಯನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಡಿ ಹಲವು ಯೋಜಿತ ಭಯೋತ್ಪಾದಕ ದಾಳಿಗಳನ್ನು ವಿಲಗೊಳಿಸಲಾಗಿದೆ ಎಂದು ಬಹರೈನ್‌ನ ಆಂತರಿಕ ಸಚಿವಾಲಯ ತಿಳಿಸಿದೆ. ಈ ಹಿಂದೆಯೇ ಬಂಧಿಸಲಾಗಿರುವ ಕೆಲವು ಶಂಕಿತರ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಜೀವಾವ ಶಿಕ್ಷೆಯನ್ನೂ ವಿಧಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಬಹರೈನ್‌ನ ಪ್ರಸಕ್ತ ಪರಿಸ್ಥಿತಿಯನ್ನು ಹದಗೆಡಿಸುವ ಯತ್ನದ ಹಲವು ಸಂಚುಗಳನ್ನು ರೂಪಿಸಿರುವ ಬಗ್ಗೆಯೂ ಬಂತರಿಂದ ಸುಳಿವು ಲಭ್ಯವಾಗಿರುವುದಾಗಿ ಸಚಿವಾಲಯ ತಿಳಿಸಿದೆ.