ವರದಿ: ಗಣೇಶ್ ರೈ – ಯು.ಎ.ಇ.
ಫೋಟೋ: ಅಶೋಕ್ ಬೆಳ್ಮಣ್
ಶ್ರೀ ಶನೈಶ್ಚರ ಸೇವಾ ಸಮಿತಿ ದುಬೈ ವತಿಯಿಂದ 2015ನೇ ಏಪ್ರಿಲ್ 10 ನೇ ತಾರೀಕು ಶುಕ್ರವಾರ ಅಪರಾಹ್ನ 3.00 ಗಂಟೆಯಿಂದ ದುಬಾಯಿ ಶೇಖ್ ಜಾಯಿದ್ ರಸ್ತೆಯ ಬಳಿ ಗಲ್ಫ್ ನ್ಯೂಸ್ ಹಿಂಬಾಗದಲ್ಲಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಶನೈಶ್ಚರ ಪೂಜೆ ವಿಜೃಂಬಣೆಯಿಂದ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಬಂಧುಗಳು ಪಾಲ್ಗೊಂಡು ಪುನೀತರಾದರು.
ಶ್ರೀ ವಿಠಲ್ ಶೆಟ್ಟಿಯವರ ಸ್ವಾಗತದೊಂದಿಗೆ ಪೂಜಾ ಕಾರ್ಯ ಪ್ರಾರಂಭವಾಯಿತು. ಮುಂಬೈನಿಂದ ಆಗಮಿಸಿದ ಪುರೋಹಿತರಾದ ಶ್ರೀ ಎಂ. ಜೆ. ಪ್ರವೀಣ್ ಭಟ್ ಪೂಜಾ ವಿದಿವಿಧಾನಗಳನ್ನು ಕಳಸ ಪ್ರತಿಷ್ಠಾಪನೆ, ಸಂಕಲ್ಪದೊಂದಿಗೆ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ವಿವಿಧ ಸಂಘ ಸಂಸ್ಥೆಯ ಭಜನಾ ತಂಡದವರಿಂದ ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಯಿತು.
ಭಕ್ತಿಪೂರ್ವಕವಾಗಿ ನಡೆದ “ಶ್ರೀ ಶನಿಕಥೆ” ಯಕ್ಷಗಾನ ತಾಳಮದ್ದಲೆ
ಶನೀಶ್ವರ ಭಕ್ತವೃಂದ ಪಕ್ಷಿಗೆರೆ ಕಳೆದ 22 ವರ್ಷಗಳಿಂದ ಭಾರತ ದೇಶಾದಾದ್ಯಂತ ಶನಿ ಕಥಾ – ಯಕ್ಷಗಾನ ತಾಳ ಮದ್ದಳೆಯನ್ನು ಸೇವೆಯನ್ನು ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾ ತಂಡ ಪ್ರಥಮ ಬಾರಿಗೆ ದುಬಾಯಿಯಲ್ಲಿ “ಶ್ರೀ ಶನಿಕಥೆ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಕಟೀಲು ಮೇಳದ ಪ್ರಖ್ಯಾತ ಭಾಗವತರು ಶ್ರೀ ಸತೀಶ್ ಶೆಟ್ಟಿ ಬೋಂದೆಲ್, ಹೊಸನಗರ ಮೇಳ ಹಾಸ್ಯ ಕಲಾವಿದರು ಶ್ರೀ ಸೀತರಾಮ್ ಕುಮಾರ್ ಕಟೀಲು, ಇನ್ನಿತರ ಕಲಾವಿದರಾದ ಶ್ರೀ ಆನಂದ್ ಶೆಟ್ಟಿ ಶ್ರೀ ವಿಜಯಕುಮಾರ್ ಶೆಟ್ಟಿ, ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀ ಪದ್ಮನಾಭ ಶೆಟ್ಟಿಗಾರ್ ಶ್ರೀ ಪ್ರಸನ್ನ ಶೆಟ್ಟಿ ಯವರ ಕಲಾ ತಂಡ ನಡೆಸಿಕೊಟ್ಟರು.
ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮಿಜಿಯವರು ಮತ್ತು ಸನ್ಮಾನ್ಯ ಶ್ರೀ ಯು. ಟಿ. ಖಾದರ್ ರವರಿಗೆ ಮೆರವಣಿಗೆಯಲ್ಲಿ ಭವ್ಯ ಸ್ವಾಗತ
ಕರ್ನಾಟಕದ ಕರಾವಳಿ ತೀರದ ಕಾರ್ಕಳದ ಹೊಸಮಾರ್ ಮಠದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮಿಜಿಯವರನ್ನು ಹಗೂ ಪೂಜಾ ಕಾರ್ಯದಲ್ಲಿ ವಿಶೇಷ ಗೌರವ ಅತಿಥಿಯಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಯು. ಟಿ. ಖಾದರ್ ರವರನ್ನು ಮತ್ತು ಊರಿನಿಂದ ಬಂದ ಅತಿಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಜೆ. ಎಸ್. ಎಸ್. ವಿಧ್ಯಾಮಂದಿರದ ಮಹಾಧ್ವಾರದಿಂದ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ಕೇರಳದ ಪಂಚವಾಧ್ಯ ಚೆಂಡೆಯೊಂದಿಗೆ, ಶ್ರೀ ಕೃಷ್ಣ ಭಜನ ವೃಂದದವರಿಂದ ನಮ್ಮೂರಿನ ಕೋಲಾಟ, ಶ್ರೀ ಗಣೇಶ್ ಶೆಟ್ಟಿ ಬೈಲೂರ್ ಮತ್ತು ತಂಡದವರಿಂದ ಹುಲಿವೇಷ, ಶ್ರೀ ಪ್ರಭಾಕರ ಪೂಜಾರಿ ಕಾರ್ಕಳ ಮತ್ತು ತಂಡದವರಿಂದ ಗೊಂಬೆ ಕುಣಿತ, ಭೂತ ನೃತ್ಯ, ಹಾಗೂ ಅನೇಕ ವೇಷ ಭೂಷಣಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಸಮಿತಿ ಸುಮಂಗಲೆಯವರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿ ಕೊಳ್ಳಲಾಯಿತು.
ಮಂಗಳೂರಿನಿಂದ ಅತಿಥಿಗಳಾದ ನಮ್ಮ ಕುಡ್ಲ ಟಿ.ವಿ ಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಲೀಲಾಕ್ಷ ಕರ್ಕೆರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಶ್ರೀ ಪ್ರದೀಪ್ ಆಳ್ವ,ಹಳೆಕೋಟೆ ಶ್ರೀ ಮಾರಿಯಮ್ಮ ದೇವಾಸ್ಥಾನದ ಆಡಳಿತಧಿಕಾರಿ ಶ್ರೀ ತಾರನಾಥ ಶೆಟ್ಟಿ, ವಿಜಯಾ ಬ್ಯಾಂಕ್ ಅಧಿಕಾರಿಗಳ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕರುಣಾಕರ ಶೆಟ್ಟಿ, ನಮ್ಮಕುಡ್ಲ ಟಿ. ವಿ. ಯ ಛಾಯಗ್ರಾಹಕ ಶ್ರೀ ಶ್ರೀಕಾಂತ್ ರಾವ್. ನಮ್ಮ ಕುಡ್ಲ ಟಿ.ವಿ.ಯ ಪ್ರಧಾನ ಸಂಪಾದಕರಾದ ಶ್ರೀ ಜಯರಾಜ್ ದೇವಾಡಿಗರವರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಾನ್ಯ ಯೂ. ಟಿ ಖಾದರ್ ರವರಿಗೆ ಸಮಿತಿಯ ವತಿಯಿಂದ ಗೌರವ ಸಮರ್ಪಣೆ
ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ ಮಾನ್ಯ ಸಚಿವ ಮಾನ್ಯ ಶ್ರೀ ಯೂ. ಟಿ ಖಾದರ್ ರವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಆಕ್ಮೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಶೇರಿಗಾರ್, ಚಿಲ್ಲಿವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣ, ಶ್ರೀ ಸರ್ವೋತ್ತಮ ಶೆಟ್ಟಿ ಸನ್ಮಾನ ಪ್ರಕ್ರಿಯೆ ನಡೆಸಿಕೊಟ್ಟರು. ಶ್ರೀ ಶಾಂತಾರಾಂ ಆಚಾರ್ ಸನ್ಮಾನ ಪತ್ರ ವಾಚಿಸಿದರು.
ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮಿಜಿಯವರಿಗೆ ಭಕ್ತಿಪೂರ್ವಕ ಗೌರವ ಸಮರ್ಪಣೆ
ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮಿಜಿಯವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಜಿತೇಂದ್ರ ಸುವರ್ಣ, ಶ್ರೀ ಪ್ರವೀಣ್ ಅತ್ತಾವರ, ಶ್ರೀ ಉಮೇಶ್ ಕುಕ್ಯಾನ್, ಶ್ರೀ ಮಾಧವ ಹೆಜಮಾಡಿ ಮತ್ತು ಸುಧೀರ್ ಪೂಜಾರಿ ಸನ್ಮಾನ ಪ್ರಕ್ರಿಯೆ ನಡೆಸಿಕೊಟ್ಟರು. ಶ್ರೀ ಗಣೇಶ್ ರೈ ಸನ್ಮಾನ ಪತ್ರವನ್ನು ವಾಚಿಸಿದರು.
ಶ್ರೀ ಶನೈಶ್ಚರ ಸೇವಾ ಸಮಿತಿ ದುಬಾಯಿ ವತಿಯಿಂದ ಮುಖ್ಯ ಸಂಘಟಕರಾದ ಶ್ರೀ ಸುಧಾಕರ್ ತುಂಬೆ ಮತ್ತು ಕಾರ್ಯಾಕಾರಿ ಸಮಿತಿಯವರು ಒಟ್ಟು ಸೇರಿ ಸ್ವಾಮಿಜಿಯವರ ವಿದ್ಯಾಸಂಸ್ಥೆಗೆ ಒಂದು ಲಕ್ಷ ಇಪ್ಪತೈದು ಸಾವಿರ ರೂಪಾಯಿ ಚೆಕ್ ನ್ನು ಸಮರ್ಪಿಸಿದರು.
ಸ್ವಾಮಿಜಿಯವರಿಂದ ಪ್ರವಚನ ನಡೆಯಿತು. ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿತರಣೆ ನಡೆಯಿತು. ಕೊನೆಯಲ್ಲಿ ಶ್ರೀ ಸುಧಾಕರ್ ತುಂಬೆಯವರು ಸರ್ವರಿಗೂ ವಂದನೆ ಸಲ್ಲಿಸಿದರು.
ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರ
ಯು.ಎ.ಇ. ಯ ಪ್ರಖ್ಯಾತ ತುಂಭೆ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಜಿ.ಎಂ.ಸಿ. ಹಾಸ್ಪಿಟಲ್ ಪೇಶೆಂಟ್ ಅಫೈರ್ಸ್ ಅಂಡ್ ಮಾರ್ಕೆಟಿಂಗ್ ಸಹ ನಿರ್ದೇಶಕರಾದ ಡಾ. ಬಂಗೇರಾ ರವರ ನೇತ್ರತ್ವದಲ್ಲಿ ತಜ್ಞ ವೈದ್ಯರ ತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡು ಶಿಬಿರದಲ್ಲಿ ಭಾಗಿಗಳಾದರು.
ಮುಖ್ಯ ಪ್ರಾಯೋಜಕರಾದ ಶ್ರೀ ಹರೀಶ್ ಶೇರಿಗಾರ್, ಶ್ರೀ ಸತೀಶ್ ವೆಂಕಟರಮಣ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರೊಂದಿಗೆ ಅಪಾರ ಸಂಖ್ಯೆಯಲ್ಲಿ ದಾನಿಗಳು ತಮ್ಮ ಪೂರ್ಣ ಬೆಂಬಲ ಸಹಕಾರ ನೀಡಿ ಪೂಜಾ ಕಾರ್ಯವನ್ನು ಯಶಸ್ವಿಗೊಳಿಸಿದರು.
ಶ್ರೀ ಸುಧಾಕರ್ ತುಂಬೆ, ಶ್ರೀ ವಿಠಲ್ ಶೆಟ್ಟಿ ಮತ್ತು ಶ್ರೀ ಹರೀಶ್ ಕೋಡಿಯವರೊಂದಿಗೆ ಸ್ನೇಹಿತರ ತಂಡದವರಿಂದ ಹಲವು ದಿನಗಳ ನಿರಂತರ ಪೂರ್ವತಯಾರಿ ಹಾಗೂ ಮಾಧ್ಯಮದವರ ಬೆಂಬಲ ಯಶಸ್ಸಿಗೆ ಕಾರಣವಾಯಿತು. ದುಬಾಯಿಯಲ್ಲಿ ನಡೆದ ಶ್ರೀ ಶನೈಶ್ಚರ ಪೂಜಾ ಕಾರ್ಯದ ಚಿತ್ರೀಕರಣವನ್ನು ನಮ್ಮ ಕುಡ್ಲ ಟಿ.ವಿಯವರು ಚಿತ್ರೀಕರಿಸಿದರು.