ಗಲ್ಫ್

ದ್ವೀಪದಲ್ಲಿ “ಗೀತಾ ಸಾಹಿತ್ಯ ಸಂಭ್ರಮ ” : ಬಹರೈನ್ ಕಲಾ ಪ್ರೇಮಿಗಳಿಗೆ “ಅಮ್ಮಾ ಕಲಾವಿದರು ” ಇದರ ಚೊಚ್ಚಲ ಕಾಣಿಕೆ

Pinterest LinkedIn Tumblr

Geetha Sahithya Poster

ಬಹರೈನ್ : ಇದೇ ಏಪ್ರಿಲ್ ತಿಂಗಳ ಗುರುವಾರ ದಿನಾಂಕ 16 ರಂದು ದ್ವೀಪದ ” ಅಮ್ಮಾ ಕಲಾವಿದರು ” ಸಂಘಟನೆಯು ” ಗೀತಾ ಸಾಹಿತ್ಯ ಸಂಭ್ರಮ ” ಎನ್ನುವ ವಿಶಿಷ್ಟ ,ವಿಭಿನ್ನ ರೀತಿಯ ಹಾಸ್ಯ ,ಹಾಡುಗಳ ಸಾಂಸ್ಕ್ರತಿಕ ಸಂಜೆಯನ್ನು ಇಲ್ಲಿನ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಆಯೋಜಿಸಿದ್ದು , ದ್ವೀಪದ ಕನ್ನಡಿಗರಿಗೆ ಈ ಕಾರ್ಯಕ್ರಮವು ಮನರಂಜನೆಯ ಜೊತೆಗೆ ಒಂದು ಹೊಸ ಅನುಭವವನ್ನು ನೀಡಲಿದೆ .

ನಾಡಿನ ಖ್ಯಾತ ಕಲಾವಿದರಾದ ಶ್ರೀ ವಿಟ್ಟಲ್ ನಾಯಕ್ ಹಾಗು ತಂಡದವರು ದ್ವೀಪದ ಕನ್ನಡಿಗರನ್ನು ರಂಜಿಸಲು ಬರುತಿದ್ದು ಇವರೊಂದಿಗೆ ಖ್ಯಾತ ಬಾಲ ಕಲಾವಿದೆ ಕುಮಾರಿ ದಿವ್ಯ ನಿಧಿ ರೈ ,ಸುಹಾಸ್ ಹೆಬ್ಬಾರ್ ಹಾಗು ದಿವ್ಯ ರಾಜ್ ರವರು ತಮ್ಮ ಕಲಾ ಪ್ರೌಡಿಮೆಯನ್ನು ಮೆರೆಯಲಿದ್ದಾರೆ .

ಮನುಷ್ಯ ಎಲ್ಲಾ ಕ್ಷೇತ್ರಗಳಲ್ಲೂ ಅಧ್ಬುತ ಸಾಧನೆಗಳನ್ನು ಮಾಡಿದರು ಕೂಡ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ನಡುವಿನ ಸಂಭಂದಗಳು ಮಾತ್ರ ಹಿಂದಿನಂತಿರದೆ ಅರ್ಥ ಕಳೆದು ಕೊಳ್ಳುತ್ತಿದೆ ,ಮಾನವೀಯ ಮೌಲ್ಯಗಳು ಕುಸಿಯುತ್ತಿದೆ ,ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತಿದ್ದಾನೆ ,ಪ್ರೀತಿ ಕಡಿಮೆಯಾಗಿ ದ್ವೇಷ ಹೆಚ್ಚಾಗುತ್ತಿದೆ . ಇದನೆಲ್ಲ ಹಾಸ್ಯದ ಮೂಲಕ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಕಲಾವಿದ ವಿಟ್ಟಲ್ ನಾಯಕ್ ರವರು ಯಶಸ್ವಿಯಾಗಿದ್ದು “ಗೀತಾ ಸಾಹಿತ್ಯ ಸಂಭ್ರಮ ” ಕಾರ್ಯಕ್ರಮವು ಬಹರೈನ್ ಕನ್ನಡಿಗರ ಪಾಲಿಗೆ ವಿನೂತನ ,ಅನನ್ಯ ಕಾರ್ಯಕ್ರಮವಾಗಲಿದೆ .

ದ್ವೀಪದ ಖ್ಯಾತ ರಂಗ ಕರ್ಮಿ ಶ್ರೀ ಮೋಹನದಾಸ್ ರೈ ಯವರು ಸಂಘಟಕರಾಗಿ ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿದ್ದು ಎಲ್ಲಾ ಕಲಾಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ . ಕಾರ್ಯಕ್ರಮ ಸಂಜೆ 7 ಘಂಟೆಗೆ ಸರಿಯಾಗಿ ಪ್ರಾರಂಭವಾಗಲಿದ್ದು ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವೀಗೋಳಿಸಬೇಕೆಂದು ಸಂಘಟಕರು ಕೇಳಿಕೊಂಡಿದ್ದು ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಘಟಕರಾದ ಶ್ರೀ ಮೋಹನದಾಸ್ ರೈ ಯವರನ್ನು 00973-34496342 ದೂರವಾಣಿ ಸಂಖ್ಯೆ ಮುಖೇನ ಸಂಪರ್ಕಿಸಬಹುದು .

ವರದಿ – ಕಮಲಾಕ್ಷ ಅಮಿನ್

Write A Comment