ಶ್ರೀ ಶನೈಶ್ಚರ ಸೇವಾ ಸಮಿತಿ ದುಬೈ ವತಿಯಿಂದ 2015 ಏಪ್ರಿಲ್ 10 ನೇ ತಾರೀಕು ಶುಕ್ರವಾರ ಅಪರಾಹ್ನ 3.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ದುಬಾಯಿ ಶೇಖ್ ಜಾಯಿದ್ ರಸ್ತೆಯ ಬಳಿ ಗಲ್ಫ್ ನ್ಯೂಸ್ ಹಿಂಬಾಗ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಶನೈಶ್ಚರ ಪೂಜಾ ಕಾರ್ಯವನ್ನು ಆಯೋಜಿಸಲಾಗಿದೆ.
ಕರ್ನಾಟಕದ ಕರಾವಳಿ ತೀರದ ಕಾರ್ಕಳದ ಹೊಸಮಾರ್ ಮಠದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮಿಜಿಯವರು ಆಗಮಿಸಲಿದ್ದು ಆಶೀರ್ವಚನ ನೀಡಲಿದ್ದಾರೆ. ಮುಂಬೈನಿಂದ ಆಗಮಿಸಲಿರುವ ಪುರೋಹಿತರಾದ ಶ್ರೀ ಎಂ. ಜೆ. ಪ್ರವೀಣ್ ಭಟ್ ಪೂಜಾ ವಿದಿವಿಧಾನಗಳನ್ನು ನೆರವೇರಿಸಲಿದ್ದಾರೆ. ಪ್ರತಿಷ್ಠಾಪನೆ, ಪ್ರವಚನ, ಮಹಾ ಮಂಗಳಾರತಿ ಮತ್ತು ಮಹಾ ಪ್ರಸಾದ ವಿತರಣೆ ನಡೆಯಲಿದೆ.
ಪೂಜಾ ಕಾರ್ಯದಲ್ಲಿ ವಿಶೇಷ ಗೌರವ ಅತಿಥಿಯಾಗಿ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ರವರು ಭಾಗವಹಿಸಲಿದ್ದಾರೆ
ದುಬಾಯಿಯಲ್ಲಿ ನಡೆಯುವ ಶ್ರೀ ಶನೈಶ್ಚರ ಪೂಜಾ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ವಿಶೇಷ ಅತಿಥಿಗಳಾಗಿ ಆಗಮಿಸಲಿದಾರೆ. ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸರ್ವ ಬಂಧು ಬಾಂಧವರ ಪರವಾಗಿ ಗೌರವ ಸಮರ್ಪಣೆ ಅರ್ಪಿಸಲಾಗುವುದು.
ಮಂಗಳೂರಿನಿಂದ ಆಗಮಿಸುವ ಅತಿಥಿಗಳು ನಮ್ಮ ಕುಡ್ಲ ಟಿ.ವಿ ಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಲೀಲಾಕ್ಷ ಕರ್ಕೆರ, ಶ್ರೀಮತಿ ಸೌಮ್ಯ ಲೀಲಾಕ್ಷ ಕರ್ಕೆರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಶ್ರೀ ಪ್ರದೀಪ್ ಆಳ್ವ,ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷರು ಶ್ರೀ ಕೆ. ಎಸ್. ಅಮೀರ್. ಅಹ್ಮದ್ ತುಂಬೆ, ಹಳೆಕೋಟೆ ಶ್ರೀ ಮಾರಿಯಮ್ಮ ದೇವಾಸ್ಥಾನದ ಆಡಳಿತಧಿಕಾರಿ ಶ್ರೀ ತಾರನಾಥ ಶೆಟ್ಟಿ, ವಿಜಯಾ ಬ್ಯಾಂಕ್ ಅಧಿಕಾರಿಗಳ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕರುಣಾಕರ ಶೆಟ್ಟಿ, ನಮ್ಮಕುಡ್ಲ ಟಿ. ವಿ. ಯ ಛಾಯಗ್ರಾಹಕ ಶ್ರೀ ಶ್ರೀಕಾಂತ್ ರಾವ್. ನಮ್ಮ ಕುಡ್ಲ ಟಿ.ವಿ.ಯ ಪ್ರಧಾನ ಸಂಪಾದಕರಾದ ಶ್ರೀ ಜಯರಾಜ್ ದೇವಾಡಿಗ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶನೀಶ್ವರ ಭಕ್ತ ವೃಂದ ಕಿನ್ನಿಗೋಳಿ ಇವರಿಂದ ಶ್ರೀ ಶನಿಕಥಾ ಯಕ್ಷಗಾನ ತಾಳ ಮದ್ದಲೆ
ಶನೀಶ್ವರ ಸಮಿತಿ ಪಕ್ಷಿಗೆರೆ ಕಳೆದ 22 ವರ್ಷಗಳಿಂದ ಭಾರತ ದೇಶಾದಾದ್ಯಂತ ಶನಿ ಕಥಾ – ಯಕ್ಷಗಾನ ತಾಳ ಮದ್ದಳೆಯನ್ನು ಸೇವೆಯನ್ನು ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾ ತಂಡ ಪ್ರಥಮ ಬಾರಿಗೆ ದುಬಾಯಿಯಲ್ಲಿ ಕಥಾಪ್ರಸಂಗವನ್ನು ಪ್ರಸ್ತುತ ಪಡಿಸಲಿದ್ದಾರೆ. ಕಟೀಲು ಮೇಳದ ಪ್ರಖ್ಯಾತ ಭಾಗವತರು ಶ್ರೀ ಸತೀಶ್ ಶೆಟ್ಟಿ ಬೋಂದೆಲ್, ಹೊಸನಗರ ಮೇಳ ಹಾಸ್ಯ ಕಲಾವಿದರು ಶ್ರೀ ಸೀತರಾಮ್ ಕುಮಾರ್ ಕಟೀಲು, ಇನ್ನಿತರ ಕಲಾವಿದರಾದ ಶ್ರೀ ಆನಂದ್ ಶೆಟ್ಟಿ ಶ್ರೀ ವಿಜಯಕುಮಾರ್ ಶೆಟ್ಟಿ, ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀ ಪದ್ಮನಾಭ ಶೆಟ್ಟಿಗಾರ್ ಶ್ರೀ ಪ್ರಸನ್ನ ಶೆಟ್ಟಿ ಭಾಗವಹಿಸಲಿದ್ದಾರೆ.
ಜೆ. ಎಸ್. ಎಸ್. ವಿಧ್ಯಾಮಂದಿರದ ಮಹಾಧ್ವಾರದಿಂದ ಕೇರಳದ ಪಂಚವಾಧ್ಯ ಚೆಂಡೆಯೊಂದಿಗೆ, ಶ್ರೀ ಕೃಷ್ಣ ಭಜನ ವೃಂದದವರಿಂದ ನಮ್ಮೂರಿನ ಕೋಲಾಟ, ಶ್ರೀ ಗಣೇಶ್ ಶೆಟ್ಟಿ ಬೈಲೂರ್ ಮತ್ತು ತಂಡದವರಿಂದ ಹುಲಿವೇಷ, ಶ್ರೀ ಪ್ರಭಾಕರ ಪೂಜಾರಿ ಕಾರ್ಕಳ ಮತ್ತು ತಂಡದವರಿಂದ ಗೊಂಬೆ ಕುಣಿತ, ಭೂತ ನೃತ್ಯ, ಹಾಗೂ ಅನೇಕ ವೇಷ ಭೂಷಣಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಸಮಿತಿ ಸುಮಂಗಲೆಯವರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಮಿಜಿಯವರು ಮತ್ತು ಅತಿಥಿಗಳನ್ನು ಬರಮಾಡಿ ಕೊಳ್ಳಲಾಗುವುದು.
ನಮ್ಮ ಕುಡ್ಲ ಟಿ. ವಿಯಲ್ಲಿ ದುಬಾಯಿಂದ ಪೂಜಾ ಕಾರ್ಯ ನೇರಪ್ರಸಾರ
ದುಬಾಯಿಯಲ್ಲಿ ನಡೆಯುವ ಶ್ರೀ ಶನೈಶ್ಚರ ಪೂಜಾ ಕಾರ್ಯದ ನೇರಪ್ರಸಾರ ನಮ್ಮ ಕುಡ್ಲ ಟಿ. ಯ ಮೂಲಕ ನಡೆಯಲಿದ್ದು ಊರಿನಲ್ಲಿರುವ ವೀಕ್ಷಕರು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಮುಖ್ಯ ಪ್ರಾಯೋಜಕರಾಗಿ ಆಕ್ಮೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಶೇರಿಗಾರ್, ಚಿಲ್ಲಿವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣ, ಫಾರ್ಚೂನ್ ಗ್ರೂಪ್ ಹೋಟೆಲ್ಸ್ ನ ಚೇರ್ಮನ್ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಪೂಜಾ ವ್ಯವಸ್ಥೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಇವರೊಂದಿಗೆ ಯು.ಎ.ಇ.ಯ ಹಲವಾರು ಗಣ್ಯರು ತಮ್ಮ ಬೆಂಬಲ ಪ್ರೋತ್ಸಾಹ ನೀಡಿದ್ದಾರೆ.
ಮುಖ್ಯ ಸಂಘಟಕರಾದ ಶ್ರೀ ಸುಧಾಕರ್ ತುಂಬೆ ಮತ್ತು ಶ್ರೀ ವಿಠಲ್ ಶೆಟ್ಟಿಯವರು ಕಾರ್ಯಕಾರಿ ಸಮಿತಿಯ ಪರವಾಗಿ ಮಾಧ್ಯಮದ ಮೂಲಕ ಸರ್ವರಿಗೆ ಸ್ವಾಗತವನ್ನು ಕೋರಿದ್ದಾರೆ.
ಗಣೇಶ್ ರೈ – ಯು.ಎ.ಇ.
ಹೆಚ್ಚಿನ ವಿವರಗಳಿಗೆ :
Sudhakar Thumbe – 055 7913222
Vittal Shetty – 050 7981323
Harish Kodi – 050 2404116
1 Comment
We request all the devotees to attend in large numbers and be a part of this function.
We are very much thankful to Kannadigaworld.com for publishing and making it to reach to all the readers of Kannadigaworld.com