ದುಬೈ, ಮಾರ್ಚ್ 25: ಯು.ಎ.ಇ.ಯಲ್ಲಿರುವ ಕನ್ನಡಿಗರಿಗೆ ಕನ್ನಡದ ಕಾರ್ಯಕ್ರಮದ ಆಸ್ವಾದಿಸುವ ಸುವರ್ಣಾವಕಾಶವೊಂದು ಸನಿಹದಲ್ಲಿದೆ. ಏಪ್ರಿಲ್ ಹದಿನೇಳರ ಶುಕ್ರವಾರ ಸಂಜೆ ಯಾವುದೇ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಬೇಡಿ, ಏಕೆಂದರೆ ನಾಡಿನ ಖ್ಯಾತ ಕಲಾವಿದರು ಆಗಮಿಸಿ ನಿಮ್ಮನ್ನು ರಂಜಿಸಲಿದ್ದಾರೆ.
ಹೌದು, ಕನ್ನಡಿಗರು ದುಬೈ ಸಂಘಟನೆ ಹಾಗೂ ಪ್ರೆಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ಎಲ್.ಎಲ್.ಸಿ. ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ‘ಸಂಗೀತ ಮತ್ತು ಹಾಸ್ಯ ಸೌರಭ’ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿಯವರು ತಮ್ಮ ಮಧುರ ಕಂಠದಿಂದ ಕನ್ನಡ ನಾದವನ್ನು ಕೊಲ್ಲಿನಾಡಿನಲ್ಲಿ ಹರಿಸಲಿದ್ದಾರೆ. ಸಂಜೆಯನ್ನು ಸಂಗೀತದ ಜೊತೆಗೆ ಹಾಸ್ಯದರಸದಿಂದ ಮುಳುಗಿಸಲು ಖ್ಯಾತ ಹಾಸ್ಯಭಾಷಣಕಾರ ಹಾಗೂ ವಾಗ್ಮಿ ಶ್ರೀ ರಿಚರ್ಡ್ ಲೂವಿಸ್ ರವರೂ ಕಾರ್ಯಕಮಕ್ಕೆ ಆಗಮಿಸಲಿದ್ದಾರೆ. ಇವರ ಹಾಸ್ಯದಿಂದ ಒಂದು ಬಾರಿ ಬಿದ್ದು ನಕ್ಕವರನ್ನು ಇನ್ನೊಂದು ಬಾರಿ ಬೀಳಿಸಲು ಕಿರ್ಲೋಸ್ಕರ್ ಸತ್ಯ ರವರೂ ಆಗಮಿಸುತ್ತಿದ್ದಾರೆ. ಇವರೊಂದಿಗೆ ಶ್ರೀ ಅರುಣ್ ಕುಮಾರ್ ರವರೂ ತಮ್ಮ ಪ್ರತಿಭೆಯನ್ನು ಮೆರೆಯಲಿದ್ದಾರೆ. ತಂಡದಲ್ಲಿ ಪತಿಭಾವಂತರಾದ ಶ್ರೀ ಉದಯ್ ಅಂಕೋಲಾ ಹಾಗೂ ಶ್ರೀ ಕೃಷ್ಣ ಉಡುಪರವರೂ ಉಪಸ್ಥಿತರಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸುವಲ್ಲಿ ಸಹಕರಿಸಲಿದ್ದಾರೆ.
ನಗರದ ಶೇಖ್ ಜಾಯೆದ್ ರಸ್ತೆಯಲ್ಲಿರುವ ಜೆ.ಎಸ್.ಎಸ್. ಪ್ರೈವೇಟ್ ಶಾಲೆಯ (ಗಲ್ಫ್ ನ್ಯೂಸ್ ಕಟ್ಟಡದ ಹಿಂಭಾಗ) ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ ಐದೂವರೆಗೆ ದ್ವಾರಗಳು ತೆರೆಯಲಿವೆ. ಅಪರೂಪಕ್ಕೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಅಪ್ಪಟ ಕನ್ನಡದ ಹಾಸ್ಯ ಮತ್ತು ಸಂಗೀತವನ್ನು ಆಸ್ವಾದಿಸಿ ಕನ್ನಡದ ಸೇವೆಯಲ್ಲಿ ತಮ್ಮ ಕಿರುಕಾಣಿಕೆ ನೀಡಿ ಹಾಗೂ ಕನ್ನಡಕ್ಕಾಗಿ ಕೈ ಎತ್ತಿದವರ ಕೈ ಕಲ್ಪವೃಕ್ಷವಾಗಲು ಸಹಕರಿಸಿ.
ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. ತಮ್ಮೊಂದಿಗೆ ಬಂಧು ಬಾಂಧವರನ್ನೂ ಕರೆತನ್ನಿ, ಎಲ್ಲರಿಗೂ ಹಾರ್ದಿಕ ಸ್ವಾಗತ ಬಯಸುವ
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ, ಕನ್ನಡಿಗರು ದುಬೈ.
ಪ್ರವೇಶ ದರ: ಇಪ್ಪತ್ತು ದಿರ್ಹಾಂಗಳು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಶ್ರೀ ಸಾದನ್ ದಾಸ್: 050-7576238
ಶ್ರೀಮತಿ ಉಮಾ ವಿದ್ಯಾಧರ್ : 052-9928925
ಶ್ರೀ ಮಲ್ಲಿಕಾರ್ಜುನ ಗೌಡ-050-2433263
ಶ್ರೀ ಬಸವರಾಜ್ ಸಾಲಿಮಠ್ -050-4547479
ಸುರೇಖ ವಿ ಬಾಬು-052-9929019
ಶಿವಕುಮಾರ್-050-9459833
ನಟರಾಜ್-050-6408764
ಡಾ. ಮೋಹನ್ ಕುದೂರು-052-8479098
