ಗಲ್ಫ್

ಇಂಡಿಯನ್ ಕಲ್ಚರಲ್ ಸೊಸೈಟಿ -ಯುಎಇ  ವಾರ್ಷಿಕ ಕ್ರೀಡಾಕೂಟ 2015; ಕರ್ನಾಟಕ ಕಿಂಗ್ಸ್ ತಂಡದ ಮಡಿಲಿಗೆ ಚಾಂಪಿಯನ್ ಟ್ರೋಫಿ 

Pinterest LinkedIn Tumblr
Sports-Mar 23_2015-103
ಇಂಡಿಯನ್ ಕಲ್ಚರಲ್ ಸೊಸೈಟಿ ಯುಎಇ ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟವು ದಿನಾಂಕ 20-3-2015 ನೇ ಶುಕ್ರವಾರದಂದು ಶಾರ್ಜಾ ಯೂನಿವರ್ಸಿಟಿ ಯ ಕ್ರೀಡಾಂಗಣದಲ್ಲಿ ಬಹಳ ವಿಜೃಂಭಣೆಯಾಗಿ ನಡೆಯಿತು.
ಈ ಕ್ರೀಡಾಕೂಟವನ್ನು ಇಂಡಿಯನ್ ಕಲ್ಚರಲ್ ಸೊಸೈಟಿ ಕೇರಳ ಶಾರ್ಜಾ ವಿಭಾಗದ ಅಧ್ಯಕ್ಷರಾದ ಸಾದುಲ್ಲ ರವರು ಉದ್ಘಾಟಿಸಿದರು.ಕ್ರೀಡಾಕೂಟಕ್ಕೆ ಸೇರಿದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಶುಭಹಾರೈಸಿ,ಈ ಕ್ರೀಡೆಯ ಏಕತೆ ಹಾಗೂ ಸಹೋದರತ್ವಕ್ಕೆ ಮಾದರಿಯಾಗಲಿ ಎಂದು ನುಡಿದರು.
Sports-Mar 23_2015-001
Sports-Mar 23_2015-002
Sports-Mar 23_2015-003
Sports-Mar 23_2015-004
Sports-Mar 23_2015-005
Sports-Mar 23_2015-006
Sports-Mar 23_2015-007
Sports-Mar 23_2015-008
Sports-Mar 23_2015-009
Sports-Mar 23_2015-010
Sports-Mar 23_2015-011
Sports-Mar 23_2015-012
ಈ ಕ್ರೀಡಾಕೂಟಕ್ಕೆ ಕರ್ನಾಟಕದ  ಕಿಂಗ್ಸ್,ಡೆಲ್ಲಿ ಯ ಚಾಲೆಂಜರ್,ತಮಿಳುನಾಡಿನ ಸ್ಮಾಷೆರ್ಸ್ ,ದುಬೈ ಯ ವಾರಿಯರ್ಸ್ ,ಶಾರ್ಜಾದ ಬ್ಲಾಸ್ಟರ್,ಹಾಗೂ ಅಬುಧಾಬಿಯ ರೈಡೆರ್ಸ್ ಮುಂತಾದ ಭಾರತೀಯರನ್ನು ಒಳಗೊಂಡ ವಿವಿಧ  ತಂಡಗಳು ವಿಬಿನ್ನ ರೀತಿಯ ಧ್ವಜ,ಉಡುಪುನೊಂದಿಗೆ  ಭಾಗವಹಿಸಿದರು.
ಕ್ರೀಡಾಕೂಟದಲ್ಲಿ ವಾಲಿಬಾಲ್,ಹಗ್ಗ ಜಗ್ಗಾಟ,ಫುಟ್ಬಾಲ್,ಕಬಡ್ಡಿ, ಗುಂಡೆಸೆತ,ರನ್ನಿಂಗ್,ಹಾಗೂ ರಿಲೇ ಮುಂತಾದ ಆಟೋಟಗಳು ಆಯೋಜಿಸಲಾಗಿತ್ತು.ಮತ್ತು ಆಗಮಿಸಿದ್ದ ಕ್ರೀಡಾಭಿಮಾನಿಗಳು ವಿವಿಧ ಆಟೋಟ ಗಳಲ್ಲಿ ಸ್ಪರ್ದ್ದಿಸಿದರು.
Sports-Mar 23_2015-013
Sports-Mar 23_2015-014
Sports-Mar 23_2015-015
Sports-Mar 23_2015-016
Sports-Mar 23_2015-017
Sports-Mar 23_2015-018
Sports-Mar 23_2015-019
Sports-Mar 23_2015-020
Sports-Mar 23_2015-021
Sports-Mar 23_2015-022
Sports-Mar 23_2015-023
Sports-Mar 23_2015-024
ಕ್ರೀಡಾಕೂಟದಲ್ಲಿ ಕನ್ನಡ,ಇಂಗ್ಲಿಷ್,ಹಿಂದಿ,ತಮಿಳ್,ಮಲಯಾಳಂ ಮುಂತಾದ ವಿವಿದ ಭಾರತೀಯ ಭಾಷೆಗಳಲ್ಲಿ ಮನರಂಜಿಸುವಂತಹ ಕಾಮೆಂಟರಿ ಮಾಡುವ ಮೂಲಕ ಕ್ರೀಡಾಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿತು.
ಅದೇ ರೀತಿ ಮುಖ್ಯವಾಗಿ ಮಹಿಳೆಯರಿಗೆ ಒಳಾಂಗಣ ಸ್ಪರ್ಧೆಗಳನ್ನು ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳು ಕ್ರೀಡಾಕೂಟದಲ್ಲಿ ಸ್ಪರ್ದ್ದಿಸುವ ಮೂಲಕ ಮನರಂಜಿಸಿದರು.
Sports-Mar 23_2015-025
Sports-Mar 23_2015-026
Sports-Mar 23_2015-027
Sports-Mar 23_2015-028
Sports-Mar 23_2015-029
Sports-Mar 23_2015-030
Sports-Mar 23_2015-031
Sports-Mar 23_2015-032
Sports-Mar 23_2015-033
Sports-Mar 23_2015-034
Sports-Mar 23_2015-035
Sports-Mar 23_2015-036
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಶಾರ್ಜಾ ಯೂನಿವರ್ಸಿಟಿ ಯ ಉಪಕುಲಪತಿ ಜನಾಬ್ ಮಜೀದ್ ಜರ್ವಾನ್ ,ಮಾಡೆಲ್ ಸ್ಕೂಲ್ ನ ಪ್ರಿನ್ಸೆಪಾಲ್ ಯಾದ ಕಮರ್ ಲೈಸ ಹಾಗೂ ಇಂಡಿಯನ್ ಕಲ್ಚರಲ್ ಸೊಸೈಟಿ ಯು ಎ ಇ ಇದರ ಅಧ್ಯಕ್ಷರಾದ ಹಸನ್ ಟಿ ಎಂ ಆಗಮಿಸಿದ್ದರು. ನಂತರ ಸೇರಿದ ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಗಳನ್ನು ಕಂಡು ಜನಾಬ್ ಮಜೀದ್ ಜರ್ವಾನ್, ಇಂಥ ಕ್ರೀಡಾಕೂಟವನ್ನು ಅನಿವಾಸಿ ಭಾರತೀಯರಿಗೆ ಆಯೋಜಿಸಿರುವುದು ಶ್ಲಾಘನೇಯ ಹಾಗೂ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಇಂತಹ ಉತ್ತಮ ಕಾರ್ಯಕ್ರಮಗಳನ್ನು ಇನ್ನೂ ಕೂಡ ಸಂಘಟಿಸಿ ಎಂದು ನುಡಿದರು .ಇದೇ ಸಂದರ್ಭದಲ್ಲಿ  ಜನಾಬ್ ಮಜೀದ್ ಜರ್ವಾನ್ ಹಾಗೂ ಮಾಡೆಲ್ ಸ್ಕೂಲ್ ನ ಪ್ರಿನ್ಸೆಪಾಲ್ ಯಾದ ಕಮರ್ ಲೈಸ ಅವರಿಗೆ ಹಸನ್ ಟಿ ಎಂ ಸ್ಮರಣಿಕೆ ನೀಡಿ ಗೌರವಿಸಿದರು.
Sports-Mar 23_2015-037
Sports-Mar 23_2015-038
Sports-Mar 23_2015-039
Sports-Mar 23_2015-040
Sports-Mar 23_2015-041
Sports-Mar 23_2015-042
Sports-Mar 23_2015-043
Sports-Mar 23_2015-044
Sports-Mar 23_2015-045
Sports-Mar 23_2015-046
Sports-Mar 23_2015-047
Sports-Mar 23_2015-048
ನಂತರ ವಿಜೇತರಿಗೆ ಮತ್ತು ವಿಜೇತ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.ಕಬಡ್ಡಿ,ವಾಲಿಬಾಲ್ ಮತ್ತು ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿನ್ನರ್ಸ್ ಆದ  ಕರ್ನಾಟಕದ ಕಿಂಗ್ಸ್ ತಂಡಕ್ಕೆ ಜನಾಬ್ ಮಜೀದ್ ಜರ್ವಾನ್ ಅವರು ಚಾಂಪಿಯನ್ ಟ್ರೋಫಿಯನ್ನು ನೀಡಿ ಅಭಿನಂಧಿಸಿದರು. ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಇಂಡಿಯನ್ ಕಲ್ಚರಲ್ ಸೊಸೈಟಿ ಯು ಎ ಇ ಇದರ ಪ್ರಧಾನ ಕಾರ್ಯದರ್ಶಿಯಾದ ಜನಾಬ್ ಮುನವ್ವರ್ ತಮಿಳುನಾಡು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು .

Write A Comment