ಗಲ್ಫ್

ಅದ್ದೂರಿಯಾಗಿ ನಡೆದ ಸ್ಪಂದನ ಮಸ್ಕತ್ ರವರ ಶಾಮ್-ಎ-ಸರಗಮ್ ಸಂಗೀತ ರಸ ಸಂಜೆ ಕಾರ್ಯಕ್ರಮ

Pinterest LinkedIn Tumblr

Muscat Pro-Mar 11_2015-044

ಕಳೆದ ನಾಲ್ಕು ವರ್ಷಗಳಿಂದ ಮಸ್ಕತ್ ನ ಸ್ಪಂದನ ತಂಡವು ವಿವಿಧ ಸಂಗೀತ ರಸ ಸಂಜೆ ಕಾರ್ಯಕ್ರಮಗಳಾದ “ರಾಗ್ ಅನುರಾಗ್, ಯಾದೋಂಕಿ ಬರಾತ್ ಮತ್ತು ಸಂಗೀತ ಲಹರಿ” ಕಾರ್ಯಕ್ರಮ ಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಈ ಬಾರಿ ಮಜಾನ್ ಈವೆಂಟ್ಸ್ ರವರ ಸಹಯೋಗದೊಂದಿಗೆ ಮತ್ತೊಂದು ಸಂಗೀತ ಕಾರ್ಯಕ್ರಮ “ ಶಾಮ್–ಎ-ಸರಗಮ್ “ ಅನ್ನು ಮಸ್ಕತ್ ನ ಹೋಟೆಲ್ ಮಸ್ಕತ್ ಹಾಲಿಡೆ ಯ ಸುರ್ ಬಾಲ್ ರೂಮ್ ಹಾಲ್ ಮತ್ತೊಮ್ಮೆ ಯಶಸ್ವಿ ಮತ್ತು ಅದ್ದೂರಿ ಯಾಗಿ ನಡೆಸಿ ಕೊಟ್ಟರು.

ಸತತ ಮೂರು ಘಂಟೆ ಗಳ ಕಾಲ ನಡೆದ ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಿಂದಿ, ಕನ್ನಡ, ತುಳು ಮತ್ತು ಅಸ್ಸಾಮಿ ಭಾಷೆಗಳ ಸುಮಧುರ ಚಿತ್ರ ಗೀತೆಗಳು, ಗಜಲ್ಸ್ ಮತ್ತು ವಾದ್ಯ ಸಂಗೀತ ದೊಂದಿಗೆ ಅದ್ದೂರಿ ಭೋಜನವನ್ನು ಅಸ್ವಾದಿಸುವ ಅವಕಾಶವನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.

Muscat Pro-Mar 11_2015-001

Muscat Pro-Mar 11_2015-002

Muscat Pro-Mar 11_2015-003

Muscat Pro-Mar 11_2015-004

Muscat Pro-Mar 11_2015-005

Muscat Pro-Mar 11_2015-006

Muscat Pro-Mar 11_2015-007

Muscat Pro-Mar 11_2015-008

Muscat Pro-Mar 11_2015-009

Muscat Pro-Mar 11_2015-010

Muscat Pro-Mar 11_2015-011

Muscat Pro-Mar 11_2015-012

Muscat Pro-Mar 11_2015-013

Muscat Pro-Mar 11_2015-014

Muscat Pro-Mar 11_2015-015

ಬಹುಮುಖ ಪ್ರತಿಭೆಯ ಕಲಾವಿದರಾದ ಶ್ರೀ ನವೀನ್ ಕುಮಾರ್ , ಗಾಯಕಿ ಕುಮಾರಿ ಪ್ರಾರ್ಥನ ಚೌದರಿ ಮತ್ತು ಅನುಭವಿ ವಾಧ್ಯಗೋಷ್ಟಿ ರವರ ತಂಡ ಮತ್ತು ಹಲವಾರು ಸ್ಥಳೀಯ ಪ್ರತಿಭೆ ಗಳೊಂದಿಗೆ ಕಾರ್ಯಕ್ರಮ ತುಂಬ ಸುಂದರವಾಗಿ ಮೂಡಿ ಬಂತು.

ಸ್ಪಂದನ ತಂಡದ ಕನ್ವೀನರ್ ಶ್ರೀ ಕೋಣಿ ಪ್ರಕಾಶ್ ನಾಯಕ್ ರವರು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸ್ಪಂದನ ತಂಡದಲ್ಲಿ ಕನ್ವೀನರ್ ಶ್ರೀ ಕೋಣಿ ಪ್ರಕಾಶ್ ನಾಯಕ್, ಕೊ-ಕನ್ವೀನರ್ ಶ್ರೀ ರಿಯಾಜ಼ ಅಹಮದ್, ಶ್ರೀ ರಮೇಶ್ ಶೆಟ್ಟಿಗಾರ್, ಶ್ರೀ ನಾಗೇಶ್ ಶೆಟ್ಟಿ, ಶ್ರೀಮತಿ ಜಯ ರಮೇಶ್, ಶ್ರೀ ರಮಾನಂದ್ ಕುಂದರ್, ಶ್ರೀ ಕರುಣಾಕರ್ ರಾವ್, ಶ್ರೀ ಉಮೇಶ್ ಬಂಟ್ವಾಳ್ ಮತ್ತು ಶ್ರೀ ಜುಬೇರ್.ಕೆ.ಎಸ್, ರವರು ಸಕ್ರಿಯವಾಗಿ ಕೆಲಸ ಮಾಡಿ, ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತ ಬಂದಿದ್ದಾರ, ಮಸ್ಕತ್ ನಲ್ಲಿ ಸ್ಪಂದನ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ವಿಶೇಷವಾಗಿ ರಕ್ತದಾನ ಕಾರ್ಯಕ್ರಮ ವನ್ನು ಪ್ರತಿವರ್ಷ ನಡೆಸಿಕೊಡುತ್ತ ಬಂದಿದ್ದಾರೆ.

Muscat Pro-Mar 11_2015-016

Muscat Pro-Mar 11_2015-017

Muscat Pro-Mar 11_2015-018

Muscat Pro-Mar 11_2015-019

Muscat Pro-Mar 11_2015-020

Muscat Pro-Mar 11_2015-021

Muscat Pro-Mar 11_2015-022

Muscat Pro-Mar 11_2015-023

Muscat Pro-Mar 11_2015-024

Muscat Pro-Mar 11_2015-025

Muscat Pro-Mar 11_2015-026

Muscat Pro-Mar 11_2015-027

Muscat Pro-Mar 11_2015-028

Muscat Pro-Mar 11_2015-029

Muscat Pro-Mar 11_2015-030

ಕನ್ವೀನರ್ ಶ್ರೀ ಕೋಣಿ ಪ್ರಕಾಶ್ ನಾಯಕ್, ಶ್ರೀ ರಮೇಶ್ ಶೆಟ್ಟಿಗಾರ್, ನಾಗೇಶ್ ಶೆಟ್ಟಿ ಮತ್ತು ತಂಡದ ಇತರೆ ಸದಸ್ಯರು ಪ್ರಾಯೋಜಕರು ಮತ್ತು ವಿಶೇಷ ಗೌರವಾನ್ವಿತ ಅತಿಥಿ ಗಳಾದ ಬ್ಯಾಂಕ್ ಮಸ್ಕತ್ ನ ಶ್ರೀ.ಜಿ.ವಿ.ರಾಮಕೃಷ್ಣ, ಮಜಾನ್ ಈವೆಂಟ್ಸ್ ನ ಪ್ರೊ. ಶೇಕ್ ಕಲೀಮ್ , ಆಲ್ ಬಹಜಾ ಗ್ರೂಪ್ ಆಫ್ ಕಂಪನೀಸ್ ನ ಶ್ರೀ ಆಶಿಶ್ ಷಾ, ಮಲ್ಟಿ ಟೆಕ್ ಕಾಂಟ್ರಾಕ್ಟಿಂಗ್ ಕಂಪನಿಯ ಶ್ರೀ ದಿವಾಕರ್ ಶೆಟ್ಟಿ, ಕಿಮ್ಜಿ ಗ್ರೂಪ್ ನ ಶ್ರೀ ಚೆಂಗಪ್ಪ ಮತ್ತು ನ್ಯಾಶನಲ್ ಕನ್ಸ್ಟ್ರ್ರಕ್ಷನ್ ಕಂಪನಿಯ ಶ್ರೀ ಸೈಯೆದ್ ಮೋಹಿದೀನ್ ಸಾಹೆಬ್ ರವರಿಗೆ ಗೌರವ ಪೂರ್ವಕವಾಗಿ ಹೂಗುಚ್ಚ ನೀಡಿ ಕಾರ್ಯಕ್ರಮ ಕ್ಕೆ ಬರಮಾಡಿಕೊಂಡರು.

ಕುಮಾರಿ ಪ್ರಾರ್ಥನ, ಶ್ರೀ ನವೀನ್ ಕುಮಾರ್ ಮತ್ತು ವಾದ್ಯಗೋಷ್ಟಿ ತಂಡದವರು ಹಂಸಧ್ವನಿ ರಾಗ ಕ್ಕೆ ತಕ್ಕಂತೆ ಪೂರ್ಣ ಸಂಗೀತವನ್ನು ಸಂಯೋಜಿಸಿ “ವಾತಾಪಿ ಗಣ ಪತಿಂ” ಸ್ವಾಗತ ಪ್ರಾರ್ಥನ ಗೀತೆಯ ಪಲ್ಲವಿಯನ್ನು ಹಾಡಿ ಕಾರ್ಯಕ್ರಮವನ್ನು ಶುರು ಮಾಡಿದರು.

Muscat Pro-Mar 11_2015-031

Muscat Pro-Mar 11_2015-032

Muscat Pro-Mar 11_2015-033

Muscat Pro-Mar 11_2015-034

Muscat Pro-Mar 11_2015-035

Muscat Pro-Mar 11_2015-036

Muscat Pro-Mar 11_2015-037

Muscat Pro-Mar 11_2015-038

Muscat Pro-Mar 11_2015-039

Muscat Pro-Mar 11_2015-040

Muscat Pro-Mar 11_2015-041

Muscat Pro-Mar 11_2015-042

Muscat Pro-Mar 11_2015-043

Muscat Pro-Mar 11_2015-045

ಸಂಗೀತದ ಹಲವಾರು ಪ್ರಾಕಾರಗಳಲ್ಲಿ ಪರಿಣಿತಿ ಪಡೆದಿರುವ ಪ್ರಾರ್ಥನ ರವರು ಘಜಲ್, ಭಜನೆ, ಹಳೆ ಹಿಂದಿ ಚಲನ ಚಿತ್ರಗೀತೆಗಳು, ಪಾಶ್ಚಾತ್ಯ ಸಂಗೀತ, ಅಸ್ಸಾಮಿ ಗೀತೆಗಳು ಇನ್ನು ಮುಂತಾದವುಗಳಲ್ಲಿ ತಮ್ಮ ಮಾಧುರ್ಯ ಭರಿತ ಕಂಠದಿಂದ ಇಲ್ಲಿವರೆಗೆ ಅಧ್ಬುತ ಪ್ರದರ್ಶನ ನೀಡಿರುವ, ಕುಮಾರಿ ಪ್ರಾರ್ಥನ ರವರು ತಮ್ಮ ಅಧ್ಬುತ ಗಾಯನ ದಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಢ ಗೊಳಿಸಿದರು.

ಮಲೆನಾಡಿನ ಮರಿ ಕೋಗಿಲೆ ಎಂದು ಹೆಸರು ವಾಸಿಯಾಗಿರುವ ಬಹುಮುಖ ಪ್ರತಿಭೆಯ ಕಲಾವಿದ ಶ್ರೀ ನವೀನ್ ಕುಮಾರ್ ರವರು ತಮ್ಮ ಅಧ್ಬುತ ಕಂಠ ದಿಂದ ಹಲವಾರು ಗೀತೆಗಳನ್ನು ಹಾಡಿ ಮಸ್ಕತ್ ಕನ್ನಡಿಗರನ್ನು ಮನರಂಜಿಸಿದರು. ತಮ್ಮ ಅಚ್ಚುಕಟ್ಟಾದ ನಿರೂಪಣೆಯಿಂದ, ಪ್ರೇಕ್ಷಕರನ್ನು ಹುರಿದುಂಬಿಸುತ್ತ, ಸಂಗೀತ ಮಾಂತ್ರಿಕ ಲೋಕಕ್ಕೆ ಕೊಂಡೋಯ್ದರು.

Muscat Pro-Mar 11_2015-046

Muscat Pro-Mar 11_2015-047

Muscat Pro-Mar 11_2015-048

Muscat Pro-Mar 11_2015-049

Muscat Pro-Mar 11_2015-050

Muscat Pro-Mar 11_2015-051

Muscat Pro-Mar 11_2015-052

Muscat Pro-Mar 11_2015-053

Muscat Pro-Mar 11_2015-054

Muscat Pro-Mar 11_2015-055

Muscat Pro-Mar 11_2015-056

Muscat Pro-Mar 11_2015-057

Muscat Pro-Mar 11_2015-058

Muscat Pro-Mar 11_2015-059

Muscat Pro-Mar 11_2015-060

ಪ್ರಾರ್ಥನ ಮತ್ತು ನವೀನ್ ರವರು, ಹಿಂದಿ ಚಲನಚಿತ್ರ ಮಧುರ ಗೀತೆಗಳಾದ, ಆಯೀಯೆ ಮೆಹೆರ್ಬಾನ್, ದೀವಾನ ಹುವಾ ಬದಲ್, ತೇರೀ ಮೇರೀ ಮೇರೀ ತೇರೀ, ಕೈಸಿ ಪಹೆಲಿ ಮತ್ತು ಕನ್ನಡ ಚಿತ್ರ ಗೀತೆ ಗಳಾದ “ಎಲ್ಲಿರುವೆ ಮನವ ಕಾಡುವ ರೂಪಸಿಯೆ, ಗುರುವಾರ ಸಂಜೆ, ನಿನ್ನ ನೋಡಲೆಂದೊ, ಘಜಲ್ಸ್ ಮತ್ತು ಡುಯೆಟ್ ಹಾಡುಗಳಾದ, ಆಂಖೋಂಕಿ, ಕಿಸಿ ರಂಜಿಶ್, ರಸ್ ಮೆ ಉಲ್ ಫಾತ್, ಮತ್ತಿತರ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಕುಮಾರಿ ಪ್ರಾರ್ಥನ ರವರು ವಿಭಿನ್ನ ರಾಗಲಹರಿಯ ಅಸ್ಸಾಮಿ ಜಾನಪದ ಗೀತೆ “ ಬಿಹು” ಹಾಡನ್ನು ಅತ್ಯಂತ ಸುಂದರ ವಾಗಿ ಹಾಡಿ ಪ್ರೇಕ್ಷಕರಿಗೆ ಅಸ್ಸಾಮಿ ಸಂಗೀತವನ್ನು ಪರಿಚಯಿಸಿದರು. ಕೆಲ ಗೀತೆಗಳು “ಫಾಸ್ಟ್ ನಂಬರ್” ಅಂತ ಪರಿಗಣಿಸುಲಾಗುತ್ತೆ, ಆ ಗೀತೆಗಳು ಎಲ್ಲ ಕಾಲದಲ್ಲು ಎಲ್ಲ ವಯೋಮಾನದವರನ್ನು ರಂಜಿಸು ವುದರಲ್ಲಿ ಯಶಸ್ವಿಯಾಗಿವೆ ಅವುಗಳಲ್ಲಿ ಪ್ರಸಿದ್ಧವಾದ, “ಏ ಮೇರಾ ದಿಲ್, ದಾಮದಮ್ ಮಸ್ತ್ ಖಲಂದರ್ ಮತ್ತು ಫಾಸ್ಟ್ ಮೆಲೋಡಿ ಮತ್ತು ಮಿಕ್ಸ್ ಆಫ್ ಫ್ಯಾಬುಲಸ್ ಸಾಂಗ್ಸ್ ಗಳಾದ ಪಿಯಾ ತು, ದಮ್ ಮಾರೋ ದಮ್, ರಾಮ್ ಚಹೆ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮತ್ತು ಬೈಲಾ ಮತ್ತಿತರ ಹಾಡುಗಳಿಗೆ ಪ್ರೇಕ್ಷಕರು ದನಿ ಗೂಡಿಸಿದ್ದಲ್ಲದೆ, ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸಿದರು.
ಸ್ಥಳೀಯ ಪ್ರತಿಭಾ ಗಾಯಕಿಯರಾದ ಶ್ರೀಮತಿ ಸುಮನಾ ಶಶಿಧರ್ ರವರು “ತಮ್ ನಮ್ ತಮ್” ಹಾಡನ್ನು, ಕುಮಾರಿ ಸಾಕ್ಷಿ ದಿನೇಶ್ ರವರು “ ಕರಿಯಾ ಐ ಲವ್ ಯು” ಮತ್ತು ಕುಮಾರಿ ದಿವ್ಯ ಕೋಟ್ಯಾನ್ ಒಂದು ಅಪರೂಪದ ಗಾನ ಹಾಡನ್ನು ಶ್ರೀ ನವೀನ್ ಜತೆ ಗೂಡಿ ಹಾಡಿದರು”. ಈ ಎಲ್ಲ ಸ್ಥಳೀಯ ಗಾಯಕಿಯರು ಗುರುವಾರ ಸಂಜೆ ಹಾಡಿಗೆ ಕೋರಸ್ ನೀಡಿ ಸಹಕರಿಸಿದರು.

Muscat Pro-Mar 11_2015-061

Muscat Pro-Mar 11_2015-062

Muscat Pro-Mar 11_2015-063

Muscat Pro-Mar 11_2015-064

Muscat Pro-Mar 11_2015-065

Muscat Pro-Mar 11_2015-066

Muscat Pro-Mar 11_2015-067

Muscat Pro-Mar 11_2015-068

Muscat Pro-Mar 11_2015-069

Muscat Pro-Mar 11_2015-070

Muscat Pro-Mar 11_2015-071

Muscat Pro-Mar 11_2015-072

Muscat Pro-Mar 11_2015-073

Muscat Pro-Mar 11_2015-074

Muscat Pro-Mar 11_2015-075

ತಮ್ಮ ಸಂಗೀತ ಎಲ್ಲರ ಮನ ಸ್ಪರ್ಶಿಸ ಬೇಕು ಎನ್ನುವ ಕುಮಾರಿ ಪ್ರಾರ್ಥನ ರವರ ಧ್ಯೇಯ ಹೋಟೆಲ್ ಮಸ್ಕತ್ ಹಾಲಿಡೆ ಯ ಸೂರ್ ಬಾಲ್ ರೂಮಿನಲ್ಲಿ ಪ್ರೇಕ್ಷಕರ ಮುಂದೆ ಸಾಬೀತಾಯಿತು. ವಾದ್ಯ ಗೋಷ್ಟಿಯ ತಂಡದಲ್ಲಿ ಸ್ಥಳೀಯ ಪ್ರತಿಭೆ ಡ್ರಮ್ಮರ್ ಯುವ ಕಲಾವಿದ ಸಂತೃಪ್ತ್ ವೇದಾಂತಿ, ಕೀ ಬೋರ್ಡ್ ಪ್ಲೇಯರ್ ದೀಪಕ್, ಕೊಳಲು ವಾದಕ ಲೋಕೇಶ್, ತಬಲ ರಾಜೇಶ್ ಭಾಗವತ್, ಗಿಟಾರ್ ರಾಜ್ ಗೋಪಾಲ್ ಮತ್ತು ಬೇಸ್ ಗಿಟಾರ್ ರೋನಿ ಮತ್ತು ರಿದಮ್ ಪ್ಯಾಡ್ ನವೀನ್ ಆಚಾರ್ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ನುಡಿಸುತಿದ್ದರೆ ಭೇಷ್ ಅನ್ನದೆ ಇರುವ ಸಂಗೀತ ಪ್ರೇಮಿ ಸಭಾಂಗಣದಲ್ಲಿ ಇರಲೇ ಇಲ್ಲವೇನು ಎಂಬಂತೆ ಪ್ರತಿಯೊಂದು ವಾದ್ಯಗಾರರ ರಾಗ ಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಕಲಾವಿದರಾದ ಶ್ರೀ ನವೀನ್ ಕುಮಾರ್, ಕುಮಾರಿ ಪ್ರಾರ್ಥನ, ವಾದ್ಯಗೋಷ್ಟಿ ತಂಡ ಮತ್ತು ಸ್ಥಳೀಯ ಕಲಾವಿದರಿಗೆ ಗೌರವಾನ್ವಿತ ಅಥಿತಿ ಗಳು ಮತ್ತು ಸ್ಪಂದನ ತಂಡ ದವರಿಂದ ಸನ್ಮಾನಿಸಲಾಯಿತು.
ಈ ಸಂಗೀತ ಸಂಜೆಗೆ ಸಕಲ ರೀತಿಯ ಸಹಕಾರ ನೀಡಿ ಕಾರ್ಯಕ್ರಮ ಕ್ಕೆ ಯಶಸ್ವಿಯಾಗಲು ಸಹಕಾರ ನೀಡಿದ ಶ್ರೀ. ಜಿ,ವಿ,ರಾಮಕೃಷ್ಣ, ಶೇಕ್ ಕಲೀಮ್, ಮೊಹಮ್ಮದ್ ರಿಯಾಜ಼, ಆಂತೋಣಿ ಲಾರೆನ್ಸ್ ರವರಿಗೆ ಕನ್ವೀನರ್ ಶ್ರೀ ಕೋಣಿ ಪ್ರಕಾಶ್ ನಾಯಕ್ ಮತ್ತು ಸ್ಪಂದನ ತಂಡದ ಕಮಿಟಿ ಸದಸ್ಯರು ನೆನಪಿನ ಕಾಣಿಕೆಯನ್ನು ಸನ್ಮಾನಿಸಿದರು.

Muscat Pro-Mar 11_2015-076

Muscat Pro-Mar 11_2015-077

Muscat Pro-Mar 11_2015-078

Muscat Pro-Mar 11_2015-079

Muscat Pro-Mar 11_2015-080

Muscat Pro-Mar 11_2015-081

Muscat Pro-Mar 11_2015-082

Muscat Pro-Mar 11_2015-083

Muscat Pro-Mar 11_2015-084

Muscat Pro-Mar 11_2015-085

Muscat Pro-Mar 11_2015-086

Muscat Pro-Mar 11_2015-087

Muscat Pro-Mar 11_2015-088

Muscat Pro-Mar 11_2015-089

Muscat Pro-Mar 11_2015-090

Muscat Pro-Mar 11_2015-091

Muscat Pro-Mar 11_2015-092

Muscat Pro-Mar 11_2015-093

ಶ್ರೀ ಕರುಣಾಕರ್ ರಾವ್ ರವರು ವಂದನಾರ್ಪಣೆ ಮಾಡಿ, ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಪ್ರಾಯೋಜಕರು, ಕಲಾವಿದರು, ಸ್ವಯಂ ಸೇವಕರು, ತಂಡದ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರೊಂದಿಗೆ ಕಾರ್ಯಕ್ರಮ ವನ್ನು ಮುಕ್ತಾಯ ಗೊಳಿಸಿದರು.

ದೇಶ ವಿದೇಶಗಳಲ್ಲಿ ಪ್ರಖ್ಯಾತ ರಾದ, ಉದಯೋನ್ಮುಕ ಮತ್ತು ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಮಸ್ಕತ್ ನ ವೇದಿಕೆಗೆ ಕರೆ ತಂದು ಮತ್ತು ಪ್ರೇಕ್ಷಕರ ನಾಡಿಮಿಡಿತ ವನ್ನು  ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿ ಒಂದು ಅಭೂತ ಪೂರ್ವ ವಾದ ಕಾರ್ಯಕ್ರಮಕ್ಕೆ ಕಾರಣೀ ಭೂತರಾದ ಸ್ಪಂದನ ತಂಡದ ಹಿರಿಯರ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಶಾಮ್-ಎ-ಸರಗಮ್ ಸಂಗೀತ ಕಾರ್ಯಕ್ರಮ. ತಡ ರಾತ್ರಿಯವರೆಗೂ ಪ್ರೇಕ್ಷಕರು ಸಂಗೀತ ಅಸ್ವಾದಿಸಿ ಮತ್ತು ಭೋಜನ ಸವಿಯುವುದರೊಂದಿಗೆ ಕಾರ್ಯಕ್ರಮ ಮುಗಿದಿದ್ದೆ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಒಂದು ಸುಂದರ ಸಂಗೀತ ಸಂಜೆಗೆ ತುಂಬಿದ ಸಭಾಂಗಣ ಸಾಕ್ಷಿಯಾಯಿತು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಪ್ರೇಕ್ಷಕರಿಗೆ ಸ್ಪಂದನ ತಂಡದ ಕನ್ವೀನರ್ ಶ್ರೀ ಕೋಣಿ ಪ್ರಕಾಶ್ ನಾಯಕ್ ರವರು ಮತ್ತು ತಂಡದ ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದರು.

ವರದಿ: ಪಿ.ಎಸ್.ರಂಗನಾಥ

1 Comment

  1. Prakash Naik, Muscat

    Thanks to all our sponsors and well wishers the event “Shaam-e-Sargam” turned out to be another memorable musical event. We are happy that the music lovers of Muscat glued to their seats for almost four hours loking for more and more music. That itself a great encouragement and motivation.

    Thank you Mr. Ranganath for this beautifully written report and the team Kannadigaworld for uploading it with so many pictures. Much appreciated……

    With personal regards to Mr. Harish and Team………..Prakash Naik, Muscat

Write A Comment