ಗಲ್ಫ್

ಇಂಡಿಯನ್ ಸೋಶಿಯಲ್ ಫೋರಮ್‌ನಿಂದ  ಸೋಶಿಯಲ್ ಫೋರಮ್ ಕಪ್ -2015 ಕ್ರಿಕೆಟ್ ಪಂದ್ಯಾವಳಿ

Pinterest LinkedIn Tumblr

22

ದಮಾಮ್, ಮಾ. 5: ಅನಿವಾಸಿ ಭಾರತೀಯರ ನಡುವೆ ಸಾಮಾಜಿಕ ಸೇವಾ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟನ್ ಪ್ರೊವಿನ್ಸ್ ಕರ್ನಾಟಕ ಚಾಪ್ಟರ್ ವತಿಯಿಂದ ‘ಸೋಶಿಯಲ್ ಫೋರಮ್ ಕಪ್-2015’ ಕ್ರಿಕೆಟ್ ಪಂದ್ಯಾಕೂಟವನ್ನು ಜುಬೈಲ್ ಹಾಗೂ ದಮಾಮ್ ನಗರಗಳಲ್ಲಿ ಆಯೋಜಿಸಿದೆ. ಸಾಮಾಜಿಕ ಸೇವೆಯ ಉದ್ದೇಶವನ್ನಿಟ್ಟುಕೊಂಡು ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸೋಶಿಯಲ್ ಫೋರಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ..

ಜುಬೈಲ್ ವ್ಯಾಪ್ತಿಗೊಳಪಟ್ಟ ಕ್ರಿಕೆಟ್ ತಂಡಗಳಿಗಾಗಿ ಮಾರ್ಚ್ 26,27 ಮತ್ತು ಎಪ್ರಿಲ್ 2 ಹಾಗೂ 3ರಂದು ಜುಬೈಲ್‌ನ ಅಲ್‌ಫಲಾಹ್ ಕ್ರೀಡಾಂಗಣದಲ್ಲಿ ಅಹರ್ನಿಶಿ ಪಂದ್ಯಾಕೂಟ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಕ್ರೀಡಾಂಗಣದಲ್ಲಿ ಜರಗಲಿರುವುದು.ಇಂಡಿಯನ್ ಸೋಶಿಯಲ್ ಫೋರಮ್ ದಮಾಮ್ ವಿಭಾಗದ ವತಿಯಿಂದ ಎಪ್ರಿಲ್ 10ರಂದು ಅಲ್‌ಖೋಬರ್ ರಾಕದಲ್ಲಿರುವ ಸಾಬ್ಸ ಕ್ರೀಡಾಂಗಣದಲ್ಲಿ ಸೋಶಿಯಲ್ ಫೋರಮ್ ಕಪ್-2015 ಕ್ರಿಕೆಟ್ ಪಂದ್ಯಾಕೂಟ ನಡೆಯಲಿರುವುದು.

ದಮಾಮ್- ಖೋಬರ್-ಜುಬೈಲ್ ವ್ಯಾಪ್ತಿಯ ತಂಡಗಳು ಈ ಪಂದ್ಯಾಕೂಟದಲ್ಲಿ ಸೆಣಸಲಿರುವುದು.

ಕ್ರೀಡಾಕೂಟದ ಹೆಚ್ಚಿನ ಮಾಹಿತಿಗಾಗಿ ಜುಬೈಲ್ ವಿಭಾಗದಿಂದ ಸಲೀಮ್ ಉಡುಪಿ 0569185537 ಹಾಗೂ ದಮಾಮ್, ಖೋಬರ್ ವಿಭಾಗದಿಂದ ಸಯೀದ್ 0564922696 ಅವರನ್ನು ಸಂಪರ್ಕಿಸಬಹುದು.

Write A Comment